Posts

ಸೀರೆಯಲ್ಲಿ ಬಂಧಿಯಾದ ಅಮ್ಮನ ಬದುಕು...

Image
ಸೀರೆಯೇ ಅಮ್ಮ ಆಗಿದ್ದು ಈಗ ಇದೀಗ.... ಅಮ್ಮನಿಗೆ "ಸೀರೆ" ಅವಳ ಏಕೈಕ ವ್ಯಕ್ತ ವಾಗಿತ್ತು. ಸೀರೆ ಸೀರೆ ಸೀರೆ, ಎಲ್ಲಿ ಹೋದರೂ ಮನೆಯಲ್ಲಿದ್ದರೂ. ಅವಳಿಗೆ ಅದು ಎಂದೂ ವ್ಯಾಪಾರ ಆಗಿರಲಿಲ್ಲ, ಬದುಕಿನ ಶೈಲಿ ಯಾಗಿತ್ತು. ಅವಳು ಉಡದೆಯೇ ಹೋದ ಹತ್ತಾರು ಬಗೆ ಬಾಕಿ ಇದೇ ನಿಜ, ಆದರೆ ಅವಳಿಂದ ಅದ ಪಡೆಯದೆಯೇ ಉಳಿದ ಹೆಣ್ಣಿಲ್ಲ. ಸೀರೆಯೇ ಅಮ್ಮನಾಗಿದ್ದು ಈಗ ಅರಿವಿಗೆ ಬಂತು ಮಗಳಿಗೂ..... ಸೀರೆಯೇ ಅಮ್ಮ ಆಗಿದ್ದು ಈಗ ಇದೀಗ..... ನನ್ನಮ್ಮನ ಬಳಿ ನೂರು ಸೀರೆಗಳು ಎಲ್ಲವೂ ಇಸ್ತ್ರಿಗೊಂಡು ಸಪೂಟು ಕಪಾಟಿನಲಿ ಕೀಲಿಕೈ ಒಂದು ಸದಾ ಅವಳ ಸೊಂಟದಲ್ಲಿ ಬೂದು ಬಣ್ಣದಲ್ಲಿ ಅಪ್ಪನ ಜರಿ ಅಂಚು ಅವಳಪ್ಪ ಅವ್ವ ಹಚ್ಚೆಯಾಗಿಸಿದ್ದ ಹಸಿರು ಹೂವು ದೂರದೂರ ಗೆಳೆಯನ ನೋಟದ ಹಳದಿ ಬೂಟ ಶಿಫಾನ್, ಜಾರ್ಜೆಟ್ಟ್, ರೇಷ್ಮೆ, ಹತ್ತಿ ಉಸಿರ ಹೊತ್ತು ಮಡಿಕೆಗಳಾಗಿ ನಿಡಿದಾದ ಸೀರೆಗಳಾಗಿವೆ ಈಗ ಈಗಲೇ ದುಷ್ಯಂತ ಜಗ್ಗಿದ್ದ ತೋಳ್ಬಂಧಿ ಪಟ್ಟಾಭಿಷೇಕಕ್ಕೆ ತೊಡಲು ಮರೆತಿದ್ದ ಕಿರೀಟ ಸೀಮಂತದಲ್ಲಿ ಬಳೆಯಿಂದ ಜಾರಿ ಬಿದ್ದ ಹವಳ ಕೈತುತ್ತುಣಿಸುವಾಗ ಮೆತ್ತಿಕೊಂಡ ಅನ್ನದಗುಳು ಬೇಳೆ ಹೋಳಿಗೆಯ ಘಮ ಸಾರಿನ ಪುಡಿಯ ಘಾಟು ಕೀಟ ಬಾಧೆಗೆ ಬಚ್ಚಿಟ್ಟ ಸಂಪಿಗೆ ಎಸಳು ನುಡಿಸುವಾಗ ಕಿತ್ತುಕೊಂಡ ವೀಣೆಯ ಷಡ್ಜ ಶಾಯಿಗೊಂಡ ಬೆರಳುಗಳ ಅಚ್ಚು ಒಂದಷ್ಟು ಅಕ್ಷರಗಳ ಗೆಜ್ಜೆ ಒರಳಿನಿಂದ ಥಟಕ್ಕನೆ ಹಾರಿದ ದೋಸೆ ಹಿಟ್ಟಿನ ಬುರುಗು ಅತ್ತಿಗೆ ನಾದಿನಿ ಮಕ್ಕಳು ಮೈದುನರ ...

Online ದೌರ್ಜನ್ಯ ಮತ್ತು ವರ್ಕ್ from home

Image
ಉದ್ಯೋಗಸ್ಥ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾನೂನು  2013  ಇದರ ಅಡಿಯಲ್ಲಿ ಮನೆಯಿಂದ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರಿಗೆ ರಕ್ಷಣೆ   ಇದೆಯೋ ಇಲ್ಲವೋ ಎನ್ನುವ ಬಹು ಮುಖ್ಯ ಪ್ರಶ್ನೆ ಈಗಿನ ದಿನಗಳಲ್ಲಿ ಚರ್ಚೆಗೆ ಬಂದಿದೆ. ಪ್ರಕೃತಿ ಒಡ್ಡುತ್ತಿರುವ ಸವಾಲುಗಳಿಗೆ ಮನುಷ್ಯ ಅದೆಷ್ಟು ಪ್ರಮಾಣದಲ್ಲಿ ಬದುಕುವ ವಿಧಾನವನ್ನು ಹುಡುಕಿ ಕೊಳ್ಳುತ್ತಿದ್ದಾನೋ ಅಷ್ಟೇ ಸಂಖ್ಯೆಯಲ್ಲಿ ದೌರ್ಜನ್ಯದ ಹೊಸ ಮುಖಗಳನ್ನೂ ಅವಿಷ್ಕರಿಸಿಕೊಳ್ಳುತ್ತಿದ್ದಾನೆ. ಅದಕ್ಕೆ ಹೊಸ ಸೇರ್ಪಡೆ ಆನ್ಲೈನ್‍ನಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರಿಗೆ ಆನ್ಲೈನ್‍ನಲ್ಲಿಯೇ  ದೌರ್ಜನ್ಯ. ಇಷ್ಟು ದಿನ ಉದ್ಯೋಗಸ್ಥ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿದ್ದ ಲೈಂಗಿಕ ಮತ್ತು ಮಾನಸಿಕ ದೌರ್ಜನ್ಯಕ್ಕೆ ಅದೆಷ್ಟೋ ಸಂಘರ್ಷದ ನಂತರ ಪರಿಹಾರ ರೂಪದಲ್ಲಿ ಕಾನೂನನ್ನು ರೂಪಿಸಿಕೊಂಡಿದ್ದೇವೆ. ಆದರೆ ಈಗ ಅಂತಹ ದೌರ್ಜನ್ಯ ತನ್ನ ಸ್ವರೂಪವನ್ನೇ ಬದಲಾಯಿಸಿಕೊಂಡಿದೆ. ಕರೋನ ನಮ್ಮೊಳಗೆ ಬಂದು ಸೇರಿಕೊಳ್ಳಲು ಹೇಗೆ ಯಾವ ದಿಕ್ಕು ದೆಸೆಗಳ ಮಿತಿಯಿಲ್ಲವೋ ಹಾಗೇ ಮಹಿಳೆಯರ ಕುಲಕ್ಕೆ ಹಿಂಸೆ ಬಂದು ಎರಗಲು ಹೊತ್ತು, ಸ್ಥಳ ಯಾವುದರ ಸೀಮೆಯೂ  ಇಲ್ಲದಂತಾಗಿರುವುದು ನಾಗರೀಕತೆಯ ದೊಡ್ಡ ದುರಂತವೇ ಸರಿ. ಜಗತ್ತಿನಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ಸಾಕಷ್ಟು ಉದ್ಯೋಗ ದಾತರು ತಮ್ಮ ಕಚೇರಿಗಳನ್ನು, ಫ್ಯಾಕ್ಟರಿಗಳನ್ನು ಮುಚ್ಚಿರುವುದರಿಂದ ವಿದ್ಯಾವಂತ, ಅ...

ನ್ಯಾಯ ನಿಯಮ ಇತ್ಯಾದಿ - International Justice Day

Image
ಇವತ್ತು ಅಂತಾರಾಷ್ಟ್ರೀಯ ನ್ಯಾಯ ದಿನ. ಎಲ್ಲರಿಗೂ ಒಂದೇ ನ್ಯಾಯ ಎನುವ ತತ್ವದ ಆಧಾರದ ಮೇಲೆ ಆರಂಭವಾದ ವ್ಯವಸ್ಥೆ ಈ ಹೊತ್ತಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಿಯಮ ಎನ್ನುವಲ್ಲಿಗೆ ಬಂದು ನಿಂತಿದೆ. ಇದು ಹೌದೇ? ಇದರ ಬಗ್ಗೆ ಈ ದಿನದ ಮಾತುಕತೆ "ನ್ಯಾಯ, ನಿಯಮ ಇತ್ಯಾದಿ" ಯಲ್ಲಿ......ಇದು ಕಂಪನಾಂಕ ಟೆಲಿ ರೇಡಿಯೋ ಕೆಳುಗರಿಗಾಗಿ ರೂಪಿಸಿದ ಕಾರ್ಯಕ್ರಮ🙏 ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

Online ಉದ್ಯೋಗಸ್ಥ ಮಹಿಳೆಯರಿಗೆ ಲೈಂಗಿಕ ಕಿರುಕುಳ

Image
ಅವಳೀಗ ಮನೆಯಿಂದಲೇ ಕೆಲಸ ಮಾಡುತ್ತಿದ್ದಾಳೆ....ದೌರ್ಜನ್ಯ online ರೂಪತಾಳಿ ಕಾಡುತ್ತಿದೆ....ಕಾನೂನು ಏನು ಹೇಳುತ್ತೆ....ಇವತ್ತು 14-07-2020 ಸಂಜೆ 7 ಗಂಟೆಗೆ ಜನಶಕ್ತಿ media ದಲ್ಲಿ ಮಾತಾಡಿದ್ದೀನಿ, ಕೇಳಿ, ತಿದ್ದಿ 🙏

FEMINISM and Social Justice

Image

ಅವಕಾಶವೇ ಒಂದು ಗೌರವ!

Image
ಹೀಗೆಲ್ಲಾ ಮಾತನಾಡಲು ಸಿಕ್ಕ ಅವಕಾಶವೇ ಒಂದು ಗೌರವ🙏

ಉಪ್ಪಿಟ್ಟು ಗೊಣಗಾಟ ಮತ್ತು performance

Image
ಕೌಸಲ್ಯ ಸುಪ್ರಜಾ ರಾಮ ಎನ್ನುವ ಹೊತ್ತಿನಲ್ಲೇ ಕಿಟಕಿಯಿಂದ ಅವರ ಮನೆಯ ಉಪ್ಪಿಟ್ಟಿನ ಘಮ Good Morning ಎಂತು. ನೆನ್ನೆ ಉಳಿದ್ದದ್ದು ತಿಂದಂತೆ ಎನ್ನುತ್ತಾ ಆ ಶಾಲಿನಿ ಜಗತ್ತಿನಲ್ಲಿ ಇಷ್ಟವಾಗದ ಮೊದಲ ಮೂರು ತಿಂಡಿಗಳಲ್ಲಿ ಉಪ್ಪಿಟ್ಟು ಇದ್ದೆ ಇರುತ್ತೆ ಎಂದು ಹೇಳಿದ್ದು ನೆನಪಾಯ್ತು. ಉಪ್ಪಿಟ್ಟು ಎಂದರೆ ಮೈಯೆಲ್ಲಾ ಬಾಯಾಗಿಸಿಕೊಳ್ಳುತ್ತಿದ್ದ ಸೋದರತ್ತೆಯ ಮಗ ಈಗ ವೃದ್ಧಾಶ್ರಮದಲ್ಲಿ ಇದ್ದಾನೆ . ಉಹುಂ, ಉಪ್ಪಿಟ್ಟು ಒತ್ತುಶಾವಿಗೆ ಯಾವುದರದ್ದೂ preperation ಕೇಳಲ್ಲ ಜಗತ್ತು ಮೂಗಿಗೆ ಬರುವ ಘಮದ performance ಮಾತ್ರ ನೋಡುತ್ತೆ ಎನಿಸಿದಾಗ..... ಕೆಳಗಿನ ಲಿಂಕ್ ಕ್ಲಿಕ್ ಮಾಡಿ🙏

ಪರೀಕ್ಷೆ ಬರೆಯಿರಿ

Image
ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಬದುಕು ಎದುರಿಸಿ.

ಲಾಕ್ಡೌನ್ ಕಾಲಘಟ್ಟದ ದಾಂಪತ್ಯ

Image
       ಬೆಳಗಿನಲ್ಲಿ ಅವನು ಬಲು ಸುಭಗ. ರಾತ್ರಿಯಾಯಿತೆಂದರೆ ಕೀಚಕನೇ ಮೈಯೇರಿದ್ದಾನೆ ಎನ್ನುವಂತೆ ಇರುತ್ತಿದ್ದ. ಅವಳ ಮೈಮೇಲಿನ ಹಲ್ಗುರುತು, ಉಗುರ್ಗೆರೆ, ಸಿಗರೇಟಿನ ಬೊಟ್ಟು ಕತ್ತಲಲ್ಲೂ ಮಿರಮಿರ ಉರಿಯುತ್ತಿತ್ತು. ಸಹಿಸುತ್ತಲೇ ಅವಳ ದಾಂಪತ್ಯಕ್ಕೆ ಮೂರು ವರ್ಷ ಕಳೆದುಹೋಗಿತ್ತು. ಸ್ನಾನದ ನೀರು ಬಿದ್ದರೆ ಧಗಧಗ ಎನ್ನುವ ದೇಹ ದಹನಕ್ಕೆ ಹೆದರಿದ್ದ ದಾಕ್ಶಾಯಣಿ  ಅವಳು ಅದೆಷ್ಟೋ ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಿದ್ದಳು. ಕತ್ತಲಲ್ಲಿ ಅವಳಾತ್ಮವನ್ನು ಹೀಗೆ ಚರ್ಮದಂತೆ ಸಂಸ್ಕರಿಸುತ್ತಿದ್ದವ ಬೆಳಕಿನಲ್ಲಿ ಬೆಕ್ಕಿನ ಮರಿಯಂತೆ ಆಗುತ್ತಿದ್ದ. ಆಫೀಸಿನಲ್ಲಿ ಬಹಳವೇ ಪ್ರಾಮಾಣಿಕ. ನೆಂಟರಿಷ್ಟರ ಗೋಷ್ಠಿಯಲ್ಲಿ ಇವನೇ ಗೋಪಾಲಕೃಷ್ಣ. ಸಹಿಸಿದಳು, ಸಹಿಸಿದಳು ಅವಳು. ಸಹನೆ ಖಾಲಿಯಾಯ್ತು. ಉಪಾಯ ಒಂದು ಯಮಗಂಡಕಾಲದಂತೆ ಅವಳ ತಲೆ ಹೊಕ್ಕಿತು.  ನಿತ್ಯವೂ ಅವನ ರಾತ್ರಿ ಊಟದಲ್ಲಿ ಬೇಧಿ ಮಾತ್ರೆ ಬೆರಸಿಕೊಡಲು ಶುರುವಿಟ್ಟಳು. ಆರು ತಿಂಗಳು ಮೈಯ್ಯಿನ ನೀರು ಆರಿ ಅವನು ಹೈರಾಣಾದ. ಸ್ಕ್ಯಾನಿಂಗ್ ಸೆಂಟರ್ಗಳಿಂದ ತಿಮ್ಮಪ್ಪನ ದರುಶನದವರೆಗೂ ಎಡುಕಾಡುತ್ತಾ ಮೆತ್ತಗಾದ. ಇವಳ ಮನಸ್ಸು ಉಸಿರಾಡಲು ಶುರುವಿಟ್ಟಿತು, ಶರೀರದ ಮೇಲಿನ ಗಾಯ ಒಣಗುವತ್ತ ಮುಖ ಮಾಡಿತ್ತು. ಅವಳು ಈ ಕಥೆಯನ್ನು ಮತ್ತ್ಯಾರದ್ದೋ ಜೀವನದ ಘಟನೆಯಂತೆ ಏರಿಳಿತವಿಲ್ಲದೆ ಹೇಳಿದಾಗ ಸಂಬಂಧಗಳ ನಡುವಿನ ಥಣ್ಣನೆಯ ಕ್ರೌರ್ಯಕ್ಕೆ ದಂಗಾಗಿ ಹೋಗಿದ್ದೆ. ದೌರ್ಜನ್ಯಕ್ಕ...

Magna Carta ನೆನಪು

Image
22 December 2016 ಮೊತ್ತಮೊದಲ ಬಾರಿಗೆ  ಜನಗಳಿಂದ ಜನಗಳಿಗಾಗಿ ಕಾನೂನು ಹುಟ್ಟಿದ ಜಾಗ....ಜಗತ್ತಿನ ಎಲ್ಲಾ ಕಾನೂನು ವ್ಯವಸ್ಥೆಯೂ ಗರ್ಭ ಕಟ್ಟಿದ ಜಾಗ....Runnymede, London  Place where Magna Carta  was signed. #ಅಲೆದಾಟಕಲಿಸುವಪಾಠ Magna Carta is Latin for Great Charter, and is one of the most important documents in political history. Drawn up in Britain and signed on 15th June 1215, it outlines the rights of the common people and limits the powers of the monarchy. Since then it has been used as the basis for civil liberties around the World, advancing the cause of liberty, constitutionalism and parliamentarianism. June 15th Magna Carta Day

ಈ ವಿಷಯದಲ್ಲಿ ಎಲ್ಲರೂ ಒಂದೇ ಆದರೆ ......

Image
ಇಲ್ಲಿನ   ನೆನ್ನೆ ರಾತ್ರಿ 10 ಗಂಟೆಗೆ ಹಿಮಪಾತವಾಗುತ್ತಿದ್ದಾಗ ಲಂಡನ್‍ನ ರೋಮನ್ ಪಾರ್ಕ್ ನಲ್ಲಿ ಪ್ಲಾಸ್ಟಿಕ್ ಕವರ್ ಒಳಗೆ ಅಳುತ್ತಿದ್ದ ನವಜಾತ ಶಿಶು ಒಂದನ್ನು ರಸ್ತೆಯಲ್ಲಿ ಹೋಗುತ್ತಿದ್ದ ತಾಯಿ ಮಗ ರಕ್ಷಿಸಿ ಆಸ್ಪತ್ರೆಗೆ ನೀಡಿರುತ್ತಾರೆ ಮಗು ಆರೋಗ್ಯವಾಗಿದೆ ಅದಕ್ಕೆ ರೋಮನ್ ಎಂದು ಹೆಸರಿಡಲಾಗಿದೆ. ಎನ್ನುವ ಸುದ್ದಿಯನ್ನು ಓದುವಾಗ ಮನಸ್ಸು   ಬಿಕ್ಕುವುದರ ಜೊತೆಗೆ ಏರಿದ ಹುಬ್ಬು ಜೊತೆಯಾಗುತ್ತಾ ಅದು ಹೆಣ್ಣು ಮಗು ಎನ್ನುವುದನ್ನೂ ಗಮನಿಸಿತ್ತು.        ಇಲ್ಲಿನ ಸರ್ಕಾರ ಭೂಮಿಗೆ ಬರುವ ಎಲ್ಲಾ ಮಕ್ಕಳನ್ನು ಅಕ್ಷರಶಃ ತನ್ನ ಮಕ್ಕಳೆಂದೇ ಪರಿಗಣಿಸಿ ಕನಿಷ್ಠ ಮಟ್ಟದ ಮಾನವೀಯ ಬಾಳ್ವೆಗೆ ಸವಲತ್ತು ಒದಗಿಸಿದೆ. ಆದರೂ ಹೀಗೆ ಮಗುವನ್ನು ತಿಪ್ಪೆಗೆ ಹಾಕುವುದು ಎಂದರೆ.... ಎನ್ನುವ ಕೊರೆಯುವ ಪ್ರಶ್ನೆಯನ್ನು ಹಿಂಜುತ್ತಾ ಉಪಪ್ರಶ್ನೆಗಳೊಡನೆಯೇ ಮಾತಿಗಿಳಿದೆ ಪೊಲೀಸ್ ಇನ್ಸ್ಪೆಕ್ಟರ್ ಅಲೆಕ್ಸಾಂಡರ್ ಜೊತೆ. ಈಗ ಅಲೆಕ್ಸಾಂಡರ್ನ ಆಫೀಸ್ ರೂಮಿನಲ್ಲಿ ಇದ್ದೆ. ಹೊರಗೆ ತೆಳುವಾಗಿ ಹಿಮ ಸುರಿಯುತ್ತಿತ್ತು. ಒಳಗೆ ಹಿತವಾದ ಬಿಸಿ. ಅವನೋ ಯಾವುದೋ ಉಪನಯನ ಸಮಾರಂಭದ ಬಾಳೆಲೆ ಭೋಜನದ ನಡುವೆ ಚಿರೋಟಿ ಮೇಲೆ ಸುರುವಿಕೊಳ್ಳುವ ಹಾಲಿನಂತೆ ಕಾಣುತ್ತಿದ್ದ. ಮಕ್ಕಳ ಹಕ್ಕುಗಳ ಬಗ್ಗೆ ಅವರ ಭವಿಷ್ಯದ ಬಗ್ಗೆ ಮಾತು   ಮುಂದುವರಿಸಲೇ ಅಥವಾ ನನಗಿನ್ನೂ ಮಕ್ಕಳಾಗುವ ವಯಸ್ಸಿದೆ ಎಂದು ಹೇಳಿಬಿಡಲೇ ಎನ್ನಿಸುವ...

ಶಾಲೆಗಳ ಆರಂಭ, ಹೂಂ ಅಂತೀರಾ?!

Image
ಈ ಸಭೆಯಲ್ಲಿ ನನ್ನ ಅಭಿಪ್ರಾಯವನ್ನು ಮಂಡಿಸುವ ದೃಷ್ಟಿಯಿಂದ ಕಳೆದ ಮೂರು ದಿನಗಳಿಂದ  ಬೆಂಗಳೂರಿನಲ್ಲಿ ಬೇರೆ ಬೇರೆ ತರಗತಿಗಳಲ್ಲಿ , ಬೇರೆ ಬೇರೆ ಸ್ತರದ ಪ್ರೈವೇಟ್ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 64 ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದೇನೆ. ಎಲ್ಲರ ಒಟ್ಟಾರೆ ಅಭಿಪ್ರಾಯ ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ತೆರೆಯುವುದು ಬೇಡ ಅನ್ನುವುದೇ ಆಗಿದೆ. ಇದಕ್ಕೆ ಅವರುಗಳು ನೀಡುವ ಕಾರಣ ಆನ್ ಲೈನ್ ಎಜುಕೇಷನ್ ಅನುಕೂಲವಾಗಿದೆ, ತಂದೆ ತಾಯಿಯರ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಬಹುದು ಹೀಗೆ ಕೆಲವಾರು. ಇನ್ನೊಂದು ಗಮನಿಸಬೇಕಾದ ವಿಷಯ ಎಂದರೆ ಬಹಪಾಲು ಮಕ್ಕಳು ಜೂನ್ ಒಂದನೆಯ ತಾರೀಖು ಹೊಸ ಸಮವಸ್ತ್ರ, ಹೊಸ ಪುಸ್ತಕ ಇವೆಲ್ಲವನ್ನು ತೆಗೆದುಕೊಂಡು ಶಾಲೆಗೆ ಹೋಗಬೇಕು ಎನ್ನುವ ಆಕರ್ಷಣೆಯನ್ನು ಹೊಂದಿಲ್ಲ. ಆದರೆ 10 ನೆಯ ತರಗತಿಯ ಮತ್ತು ಎರಡನೆಯ ಪಿಯೂಸಿ ಮಕ್ಕಳು ಪರೀಕ್ಷೆ ಮುಗಿಸಿ ಕಾಲೇಜಿಗೆ ಹೋಗಬೇಕು ಎನ್ನುವ ಉತ್ಸಾಹ ತೋರಿಸಿದ್ದಾರೆ. ದೇಶದಲ್ಲಿ ಈವರೆಗೂ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿರುವುದು ವಿರಳ. ಆದರೆ ವಿಶ್ವಸಂಸ್ಥೆಯು ನೀಡಿರುವ ಒಂದು ಅಂಕಿಅಂಶದಲ್ಲಿ ಶಾಲೆಯನ್ನು ಪುನರಾರಂಭ ಮಾಡಿರುವ ಕೆಲವು ದೇಶಗಳಲ್ಲಿ ಮಕ್ಕಳಿಗೆ ಮತ್ತು ಶಾಲಾ ಸಿಬ್ಬಂದಿಗಳಿಗೆ ಸೋಂಕು ತಗುಲುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಹೀಗೆ ಶಾಲೆಗಳ ಪುನರಾರಂಭ ಮಾಡಿದ ನಂತರ ಸೋಂಕಿತರ ಸಂಖ್ಯೆ ಹೆಚ್ಚಿಸ...