ಅವಳು ಈ ದಿನವೂ ಮನೆ ಕೆಲಸಕ್ಕೆ ಬರಲಿಲ್ಲ.

"ಯಾವೊನ ಜೊತೆ ಆಡಕ್ಕೆ ಹೋಗಿದ್ದೆ?" "ಮಲಕೊಳಕ್ಕೆ ಹೋಗ್ತೀಯ" - ಇಂತಹ ಮಾತುಗಳು ಅವಳನ್ನು ರೇಜಿಗೆ  ಬೀಳಿಸುತ್ತವೆ.
ವಾದ ಮಾಡ್ತಾಳೆ. ಜಗಳ ಆಡ್ತಾಳೆ. ಅವನು ಬಾಸುಂಡೆ ಬರುವ ಹಾಗೆ ಬಡೀತಾನೆ. ಇವಳು ರಕ್ತ ಒರೆಸಿಕೊಳ್ಳುತ್ತಾ ಕಣ್ಣೀರು ಸುರಿಸುತ್ತಾ ಮೂಲೆ ಸೇರುತ್ತಾಳೆ.

ಇದು ಆ ವೃತ್ತಿಯವರ ಬಗೆ ಮಾತ್ರವಲ್ಲ. ಹೆಂಗಸು ಲಾಯಾರ್ಗಳೂ ಗೋಳಿಡ್ತಾರೆ. ಕಾರ್ಪೊರೇಟ್ ವಲಯದ ಹೆಂಗಸರ ವಿಷಯ ಡೈವೋರ್ಸ್ ವರೆಗೂ ಹೋಗಿದೆ. ಬ್ಯಾಂಕ್ ಉದ್ಯೋಗಿಗಳು VRS ನಲ್ಲಿ ಕೊನೆಯಾಗಿಬಿಟ್ಟಿದ್ದಾರೆ.

ಗಂಡಸರು ಯಾಕೆ ಹೀಗೆ ಎನ್ನುವುದಕ್ಕಿಂತ ನಾವ್ಯಾಕೆ ನಮ್ಮ charecter ಬಗ್ಗೆ ಅವರ validation ಬಯಸುತ್ತೇವೆ ಎನ್ನುವುದು ನನ್ನನ್ನು ಕಾಡುತ್ತೆ.

"So Be It" ಎನ್ನುವವರೆಗೂ ನಮಗೆ ಉಳಿಗಾಲವಿಲ್ಲ.
#FamilyCourtಕಲಿಕೆ

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್