Posts
Showing posts from 2020
ಮಕ್ಕಳ ಹಕ್ಕು, ಮೊದಲ ಹುಡುಗ
- Get link
- X
- Other Apps

ಈ ಸಂಪರ್ಕ ಸಂಖ್ಯೆಯೊಡನೆ ಮಾತು ನಿಂತು ಮೂರು ತಿಂಗಳಾಗಿತ್ತೇ?! ಗಮನಕ್ಕೇ ಬರಲಿಲ್ಲವಲ್ಲ. ಎಂದುಕೊಳ್ಳುತ್ತಲೇ ಬಂದಿದ್ದ ಆಡಿಯೋ ಸಂದೇಶವನ್ನು ತೆರೆದೆ “ ಲೇ ಲೇ ರಾಮಣ್ಣನ ಮಗಳೇ. . .” ಎಂದು ರಾಗವಾಗಿ ಹಾಡಿದ್ದ ಅವನು. ಆ ರಾಗಕ್ಕೆ ತಾಳವಾಗುವ ಮನಸ್ಸು ಇರಲಿಲ್ಲ. ಆದರೆ ಉತ್ತರಿಸುವುದು ಬೇಕಾಗಿತ್ತು. ಪ್ರಾಮಾಣಿಕವಾಗಿ ಹೇಳಿದೆ “ ಪಾಪ ಆ ಹುಡುಗಿ ಹತ್ತಿರ ಸೆಕ್ಶನ್ 94ರಲ್ಲಿ ಹೇಳಿರುವ ಯಾವ ದಾಖಲೆಯೂ ಇಲ್ಲ. ಏನು ಮಾಡೋದು ಅಂತ ಯೋಚಿಸ್ತಿದ್ದೀನಿ” ಎಂದೆ. ಪ್ರತಿ ಬಾರಿಯಂತೆ ಈಗ ಅವನು ಸಿಡುಕಲಿಲ್ಲ. “ನೀನೊಂದು ಗೂಬೆ’ ಎಂದು ದೂರಲಿಲ್ಲ. “ನಿನ್ನಿಂದ ರೊಮ್ಯಾಂಟಿಕ್ ಮಾತು impossible” ಎಂದು ಬೈಯಲಿಲ್ಲ. ಸಮಾಧಾನದಿಂದ “ಓಹ್ ಹೌದಾ. . .” ಎನ್ನುತ್ತಲೇ ಒಂದೆರಡು ಸಲಹೆಗಳನ್ನು ಕೊಟ್ಟ. ಸಲೀಂ ನನ್ನ ಜೀವದ ಅವಿಭಾಜ್ಯ ಅಂಗ. ಜೀವನವನ್ನು ಹಂಚಿಕೊಂಡವ. ಅಮೇರಿಕೆಯಲ್ಲಿ ಇದ್ದಾನೆ. ನಮ್ಮಿಬ್ಬರದು ಹುಟ್ಟಿದಾರಭ್ಯ ಏತಿ ಎಂದರೆ ಪ್ರೇತಿ ಎನ್ನುವ ಬಂಧ. ನನ್ನ ಯಾವ ಗುರಿಗಳೂ ಅವನದಲ್ಲ. ಅವನ ಯಾವ ಕನಸುಗಳೂ ನನ್ನನ್ನು ರೋಮಾಂಚನ ಗೊಳಿಸಿದ್ದೇ ಇಲ್ಲ. ಕಲ್ಪನೆಗಳನ್ನೂ ನಮ್ಮಿಬ್ಬರ ಸಾಮ್ಯತೆಯೇ ಇಲ್ಲ. ಅವನದ್ದು ಬೆಳಗ್ಗೆ ಒಂಭತ್ತರಿಂದ ಸಂಜೆ ಐದಕ್ಕೆ ನಿಗಧಿಗೊಂಡ ಶೈಲಿ. ನನ್ನದು ಹಿಡಿದ ಕೆಲಸ ಮುಗಿಸಿ, ತಕ್ಷಣವೇ ಮತ್ತೊಂದನ್ನು ತೆರೆದಿಟ್ಟುಕೊಂಡು ಕೂರುವ ಹೊತ್ತುಗತ್ತು ಇಲ್ಲದ ಅಭಿರುಚಿ. ಅಗಾಧ ವ್ಯತ್ಯಯಗಳಲ್ಲೂ ನನ್ನನ್ನು ಹುಚ್ಚನಂತೆ ಪ್ರೀತಿಸುತ...
ಮನೋದೇಗುಲದ ಅವನ ಮೂರ್ತಿಗೆ ನೀಲಿಯಿಲ್ಲ, ನವಿಲು ಗರಿಯಿಲ್ಲ, ಚಕ್ರದ ಭಾರವಿಲ್ಲ. . .
- Get link
- X
- Other Apps

DUÀ £Á®Ì£Éà vÀgÀUÀwAiÀİèzÉÝ. UɼÉAiÀÄgÀ §¼ÀUÀ zÉÆqÀØzÀÄ. £ÀªÀÄä ªÀÄ£ÉAiÀÄ ºÀeÁgÀzÀ°è, DUÉÆªÉÄä FUÉÆªÉÄä J®ègÀÆ ¸ÉÃj ¸ÁA¸ÀÌöÈwPÀ ¸ÀAeÉ ªÀÄd ªÀiÁrÛzÀݪÀÅ. F ¨Áj GvÀÛgÀ£À ¥ËgÀĵÀ £ÁlPÀ ªÀÄvÀÄÛ gÁzsÁ PÀȵÀÚgÀ £ÀÈvÀå. £À£ÀUÉ gÁzsÉ ¥ÁvÀæ ªÀiÁqÉâÃPÀÆAvÀ §®Ä D¸É. DzÀgÉ §tÚ £ÉÆÃqÉÆÃ K£ÉÆÃ zÉÆqÀØ ªÀÄPÀ̼Éî¯Áè £À£ÀߣÀÄß PÀȵÀÚ£À ªÀiÁr ¤°è¹âlÄÖç! M®èzÀ ªÀÄ£À¹ì¤AzÀ vÀ¯É PÉÆAqÉUÉ £À«®ÄUÀj ¹Q̹PÉÆAqÀÄ, ªÉÄÊUɯÁè ¤Ã° §½zÉÆÌAqÀÄ, PÉÆ¼À®£ÀÄß G¯ÁÖ¥À¯ÁÖ »rzÀÄ ªÀÄÄR H¢¹PÉÆAqÀÄ ¤AwzÉÝ. EµÀÄÖ ©lÖgÉ £À£ÀUÀÆ CªÀ¤UÀÆ SÁ¸À ¥ÀjZÀAiÀĪÉägÀ°®è. CµÀÖ«Ä vÉÆnÖ®£ÀÄß ¥ÀPÀÌzÀ CAiÀÄåAUÁgï ªÀÄ£ÉAiÀÄ°è £ÉÆÃqÀÄwÛzÀÝzÀÄÝ ©lÖgÉ CªÀ£À£ÀÄß ªÀÄvÉÛ®Æè ¸ÀA¢ü¸À¯ÁUÀ¢zÀÝPÉÌ F ¸ÁävÀð ºÉtÄÚ N¢zÀÄÝ ²®Ä¨ÉAiÀÄ ¥ÀzÀvÀ®zÀ°è C£ÀÄߪÀ PÁgÀtªÀÇ E¢ÝÃvÀÄ. “ K¸ÀÄ £ÀªÀÄä gÀPÀëPÀ £ÀªÀÄä ¥Á¥À vÉÆ¼ÉzÀ ¸ÀAvÉÆÃµÀ GPÉÌ GPÀÄÌvÉÛÃ. . . . . ” CAvÀ ºÁqÉÆÌÃAqÉà ¨Á¯ÁåwèÁ®å PÀ¼ÉzÀÄ, PÁ¯ÉÃdÄ PÀtÄÚ vÉgÉzÉÆqÀ£É ¥ÀjZÀAiÀĪÁVzÀÄÝ ¸À°ÃA. CAzÉäÃ¯É £À£ÉÆß¼ÀUÉ UÉÆÃPÀįÁµÀÖ«Ä ZÀ¥ÀàgÀ J¢ÝÃvÀÄ vÁ£É ºÉÃUÉ?! £À£Àß CªÀÄä J¯Áè ¥ÀÆeÉ ºÀ§âUÀ¼ÀÄ §zÀÄQ...
ಸೀರೆಯಲ್ಲಿ ಬಂಧಿಯಾದ ಅಮ್ಮನ ಬದುಕು...
- Get link
- X
- Other Apps

ಸೀರೆಯೇ ಅಮ್ಮ ಆಗಿದ್ದು ಈಗ ಇದೀಗ.... ಅಮ್ಮನಿಗೆ "ಸೀರೆ" ಅವಳ ಏಕೈಕ ವ್ಯಕ್ತ ವಾಗಿತ್ತು. ಸೀರೆ ಸೀರೆ ಸೀರೆ, ಎಲ್ಲಿ ಹೋದರೂ ಮನೆಯಲ್ಲಿದ್ದರೂ. ಅವಳಿಗೆ ಅದು ಎಂದೂ ವ್ಯಾಪಾರ ಆಗಿರಲಿಲ್ಲ, ಬದುಕಿನ ಶೈಲಿ ಯಾಗಿತ್ತು. ಅವಳು ಉಡದೆಯೇ ಹೋದ ಹತ್ತಾರು ಬಗೆ ಬಾಕಿ ಇದೇ ನಿಜ, ಆದರೆ ಅವಳಿಂದ ಅದ ಪಡೆಯದೆಯೇ ಉಳಿದ ಹೆಣ್ಣಿಲ್ಲ. ಸೀರೆಯೇ ಅಮ್ಮನಾಗಿದ್ದು ಈಗ ಅರಿವಿಗೆ ಬಂತು ಮಗಳಿಗೂ..... ಸೀರೆಯೇ ಅಮ್ಮ ಆಗಿದ್ದು ಈಗ ಇದೀಗ..... ನನ್ನಮ್ಮನ ಬಳಿ ನೂರು ಸೀರೆಗಳು ಎಲ್ಲವೂ ಇಸ್ತ್ರಿಗೊಂಡು ಸಪೂಟು ಕಪಾಟಿನಲಿ ಕೀಲಿಕೈ ಒಂದು ಸದಾ ಅವಳ ಸೊಂಟದಲ್ಲಿ ಬೂದು ಬಣ್ಣದಲ್ಲಿ ಅಪ್ಪನ ಜರಿ ಅಂಚು ಅವಳಪ್ಪ ಅವ್ವ ಹಚ್ಚೆಯಾಗಿಸಿದ್ದ ಹಸಿರು ಹೂವು ದೂರದೂರ ಗೆಳೆಯನ ನೋಟದ ಹಳದಿ ಬೂಟ ಶಿಫಾನ್, ಜಾರ್ಜೆಟ್ಟ್, ರೇಷ್ಮೆ, ಹತ್ತಿ ಉಸಿರ ಹೊತ್ತು ಮಡಿಕೆಗಳಾಗಿ ನಿಡಿದಾದ ಸೀರೆಗಳಾಗಿವೆ ಈಗ ಈಗಲೇ ದುಷ್ಯಂತ ಜಗ್ಗಿದ್ದ ತೋಳ್ಬಂಧಿ ಪಟ್ಟಾಭಿಷೇಕಕ್ಕೆ ತೊಡಲು ಮರೆತಿದ್ದ ಕಿರೀಟ ಸೀಮಂತದಲ್ಲಿ ಬಳೆಯಿಂದ ಜಾರಿ ಬಿದ್ದ ಹವಳ ಕೈತುತ್ತುಣಿಸುವಾಗ ಮೆತ್ತಿಕೊಂಡ ಅನ್ನದಗುಳು ಬೇಳೆ ಹೋಳಿಗೆಯ ಘಮ ಸಾರಿನ ಪುಡಿಯ ಘಾಟು ಕೀಟ ಬಾಧೆಗೆ ಬಚ್ಚಿಟ್ಟ ಸಂಪಿಗೆ ಎಸಳು ನುಡಿಸುವಾಗ ಕಿತ್ತುಕೊಂಡ ವೀಣೆಯ ಷಡ್ಜ ಶಾಯಿಗೊಂಡ ಬೆರಳುಗಳ ಅಚ್ಚು ಒಂದಷ್ಟು ಅಕ್ಷರಗಳ ಗೆಜ್ಜೆ ಒರಳಿನಿಂದ ಥಟಕ್ಕನೆ ಹಾರಿದ ದೋಸೆ ಹಿಟ್ಟಿನ ಬುರುಗು ಅತ್ತಿಗೆ ನಾದಿನಿ ಮಕ್ಕಳು ಮೈದುನರ ...
Online ದೌರ್ಜನ್ಯ ಮತ್ತು ವರ್ಕ್ from home
- Get link
- X
- Other Apps

ಉದ್ಯೋಗಸ್ಥ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾನೂನು 2013 ಇದರ ಅಡಿಯಲ್ಲಿ ಮನೆಯಿಂದ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರಿಗೆ ರಕ್ಷಣೆ ಇದೆಯೋ ಇಲ್ಲವೋ ಎನ್ನುವ ಬಹು ಮುಖ್ಯ ಪ್ರಶ್ನೆ ಈಗಿನ ದಿನಗಳಲ್ಲಿ ಚರ್ಚೆಗೆ ಬಂದಿದೆ. ಪ್ರಕೃತಿ ಒಡ್ಡುತ್ತಿರುವ ಸವಾಲುಗಳಿಗೆ ಮನುಷ್ಯ ಅದೆಷ್ಟು ಪ್ರಮಾಣದಲ್ಲಿ ಬದುಕುವ ವಿಧಾನವನ್ನು ಹುಡುಕಿ ಕೊಳ್ಳುತ್ತಿದ್ದಾನೋ ಅಷ್ಟೇ ಸಂಖ್ಯೆಯಲ್ಲಿ ದೌರ್ಜನ್ಯದ ಹೊಸ ಮುಖಗಳನ್ನೂ ಅವಿಷ್ಕರಿಸಿಕೊಳ್ಳುತ್ತಿದ್ದಾನೆ. ಅದಕ್ಕೆ ಹೊಸ ಸೇರ್ಪಡೆ ಆನ್ಲೈನ್‍ನಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರಿಗೆ ಆನ್ಲೈನ್‍ನಲ್ಲಿಯೇ ದೌರ್ಜನ್ಯ. ಇಷ್ಟು ದಿನ ಉದ್ಯೋಗಸ್ಥ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿದ್ದ ಲೈಂಗಿಕ ಮತ್ತು ಮಾನಸಿಕ ದೌರ್ಜನ್ಯಕ್ಕೆ ಅದೆಷ್ಟೋ ಸಂಘರ್ಷದ ನಂತರ ಪರಿಹಾರ ರೂಪದಲ್ಲಿ ಕಾನೂನನ್ನು ರೂಪಿಸಿಕೊಂಡಿದ್ದೇವೆ. ಆದರೆ ಈಗ ಅಂತಹ ದೌರ್ಜನ್ಯ ತನ್ನ ಸ್ವರೂಪವನ್ನೇ ಬದಲಾಯಿಸಿಕೊಂಡಿದೆ. ಕರೋನ ನಮ್ಮೊಳಗೆ ಬಂದು ಸೇರಿಕೊಳ್ಳಲು ಹೇಗೆ ಯಾವ ದಿಕ್ಕು ದೆಸೆಗಳ ಮಿತಿಯಿಲ್ಲವೋ ಹಾಗೇ ಮಹಿಳೆಯರ ಕುಲಕ್ಕೆ ಹಿಂಸೆ ಬಂದು ಎರಗಲು ಹೊತ್ತು, ಸ್ಥಳ ಯಾವುದರ ಸೀಮೆಯೂ ಇಲ್ಲದಂತಾಗಿರುವುದು ನಾಗರೀಕತೆಯ ದೊಡ್ಡ ದುರಂತವೇ ಸರಿ. ಜಗತ್ತಿನಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ಸಾಕಷ್ಟು ಉದ್ಯೋಗ ದಾತರು ತಮ್ಮ ಕಚೇರಿಗಳನ್ನು, ಫ್ಯಾಕ್ಟರಿಗಳನ್ನು ಮುಚ್ಚಿರುವುದರಿಂದ ವಿದ್ಯಾವಂತ, ಅ...
ನ್ಯಾಯ ನಿಯಮ ಇತ್ಯಾದಿ - International Justice Day
- Get link
- X
- Other Apps
ಇವತ್ತು ಅಂತಾರಾಷ್ಟ್ರೀಯ ನ್ಯಾಯ ದಿನ. ಎಲ್ಲರಿಗೂ ಒಂದೇ ನ್ಯಾಯ ಎನುವ ತತ್ವದ ಆಧಾರದ ಮೇಲೆ ಆರಂಭವಾದ ವ್ಯವಸ್ಥೆ ಈ ಹೊತ್ತಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಿಯಮ ಎನ್ನುವಲ್ಲಿಗೆ ಬಂದು ನಿಂತಿದೆ. ಇದು ಹೌದೇ? ಇದರ ಬಗ್ಗೆ ಈ ದಿನದ ಮಾತುಕತೆ "ನ್ಯಾಯ, ನಿಯಮ ಇತ್ಯಾದಿ" ಯಲ್ಲಿ......ಇದು ಕಂಪನಾಂಕ ಟೆಲಿ ರೇಡಿಯೋ ಕೆಳುಗರಿಗಾಗಿ ರೂಪಿಸಿದ ಕಾರ್ಯಕ್ರಮ🙏 ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಉಪ್ಪಿಟ್ಟು ಗೊಣಗಾಟ ಮತ್ತು performance
- Get link
- X
- Other Apps
ಕೌಸಲ್ಯ ಸುಪ್ರಜಾ ರಾಮ ಎನ್ನುವ ಹೊತ್ತಿನಲ್ಲೇ ಕಿಟಕಿಯಿಂದ ಅವರ ಮನೆಯ ಉಪ್ಪಿಟ್ಟಿನ ಘಮ Good Morning ಎಂತು. ನೆನ್ನೆ ಉಳಿದ್ದದ್ದು ತಿಂದಂತೆ ಎನ್ನುತ್ತಾ ಆ ಶಾಲಿನಿ ಜಗತ್ತಿನಲ್ಲಿ ಇಷ್ಟವಾಗದ ಮೊದಲ ಮೂರು ತಿಂಡಿಗಳಲ್ಲಿ ಉಪ್ಪಿಟ್ಟು ಇದ್ದೆ ಇರುತ್ತೆ ಎಂದು ಹೇಳಿದ್ದು ನೆನಪಾಯ್ತು. ಉಪ್ಪಿಟ್ಟು ಎಂದರೆ ಮೈಯೆಲ್ಲಾ ಬಾಯಾಗಿಸಿಕೊಳ್ಳುತ್ತಿದ್ದ ಸೋದರತ್ತೆಯ ಮಗ ಈಗ ವೃದ್ಧಾಶ್ರಮದಲ್ಲಿ ಇದ್ದಾನೆ . ಉಹುಂ, ಉಪ್ಪಿಟ್ಟು ಒತ್ತುಶಾವಿಗೆ ಯಾವುದರದ್ದೂ preperation ಕೇಳಲ್ಲ ಜಗತ್ತು ಮೂಗಿಗೆ ಬರುವ ಘಮದ performance ಮಾತ್ರ ನೋಡುತ್ತೆ ಎನಿಸಿದಾಗ..... ಕೆಳಗಿನ ಲಿಂಕ್ ಕ್ಲಿಕ್ ಮಾಡಿ🙏
ಲಾಕ್ಡೌನ್ ಕಾಲಘಟ್ಟದ ದಾಂಪತ್ಯ
- Get link
- X
- Other Apps

ಬೆಳಗಿನಲ್ಲಿ ಅವನು ಬಲು ಸುಭಗ. ರಾತ್ರಿಯಾಯಿತೆಂದರೆ ಕೀಚಕನೇ ಮೈಯೇರಿದ್ದಾನೆ ಎನ್ನುವಂತೆ ಇರುತ್ತಿದ್ದ. ಅವಳ ಮೈಮೇಲಿನ ಹಲ್ಗುರುತು, ಉಗುರ್ಗೆರೆ, ಸಿಗರೇಟಿನ ಬೊಟ್ಟು ಕತ್ತಲಲ್ಲೂ ಮಿರಮಿರ ಉರಿಯುತ್ತಿತ್ತು. ಸಹಿಸುತ್ತಲೇ ಅವಳ ದಾಂಪತ್ಯಕ್ಕೆ ಮೂರು ವರ್ಷ ಕಳೆದುಹೋಗಿತ್ತು. ಸ್ನಾನದ ನೀರು ಬಿದ್ದರೆ ಧಗಧಗ ಎನ್ನುವ ದೇಹ ದಹನಕ್ಕೆ ಹೆದರಿದ್ದ ದಾಕ್ಶಾಯಣಿ ಅವಳು ಅದೆಷ್ಟೋ ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಿದ್ದಳು. ಕತ್ತಲಲ್ಲಿ ಅವಳಾತ್ಮವನ್ನು ಹೀಗೆ ಚರ್ಮದಂತೆ ಸಂಸ್ಕರಿಸುತ್ತಿದ್ದವ ಬೆಳಕಿನಲ್ಲಿ ಬೆಕ್ಕಿನ ಮರಿಯಂತೆ ಆಗುತ್ತಿದ್ದ. ಆಫೀಸಿನಲ್ಲಿ ಬಹಳವೇ ಪ್ರಾಮಾಣಿಕ. ನೆಂಟರಿಷ್ಟರ ಗೋಷ್ಠಿಯಲ್ಲಿ ಇವನೇ ಗೋಪಾಲಕೃಷ್ಣ. ಸಹಿಸಿದಳು, ಸಹಿಸಿದಳು ಅವಳು. ಸಹನೆ ಖಾಲಿಯಾಯ್ತು. ಉಪಾಯ ಒಂದು ಯಮಗಂಡಕಾಲದಂತೆ ಅವಳ ತಲೆ ಹೊಕ್ಕಿತು. ನಿತ್ಯವೂ ಅವನ ರಾತ್ರಿ ಊಟದಲ್ಲಿ ಬೇಧಿ ಮಾತ್ರೆ ಬೆರಸಿಕೊಡಲು ಶುರುವಿಟ್ಟಳು. ಆರು ತಿಂಗಳು ಮೈಯ್ಯಿನ ನೀರು ಆರಿ ಅವನು ಹೈರಾಣಾದ. ಸ್ಕ್ಯಾನಿಂಗ್ ಸೆಂಟರ್ಗಳಿಂದ ತಿಮ್ಮಪ್ಪನ ದರುಶನದವರೆಗೂ ಎಡುಕಾಡುತ್ತಾ ಮೆತ್ತಗಾದ. ಇವಳ ಮನಸ್ಸು ಉಸಿರಾಡಲು ಶುರುವಿಟ್ಟಿತು, ಶರೀರದ ಮೇಲಿನ ಗಾಯ ಒಣಗುವತ್ತ ಮುಖ ಮಾಡಿತ್ತು. ಅವಳು ಈ ಕಥೆಯನ್ನು ಮತ್ತ್ಯಾರದ್ದೋ ಜೀವನದ ಘಟನೆಯಂತೆ ಏರಿಳಿತವಿಲ್ಲದೆ ಹೇಳಿದಾಗ ಸಂಬಂಧಗಳ ನಡುವಿನ ಥಣ್ಣನೆಯ ಕ್ರೌರ್ಯಕ್ಕೆ ದಂಗಾಗಿ ಹೋಗಿದ್ದೆ. ದೌರ್ಜನ್ಯಕ್ಕ...
Magna Carta ನೆನಪು
- Get link
- X
- Other Apps

22 December 2016 ಮೊತ್ತಮೊದಲ ಬಾರಿಗೆ ಜನಗಳಿಂದ ಜನಗಳಿಗಾಗಿ ಕಾನೂನು ಹುಟ್ಟಿದ ಜಾಗ....ಜಗತ್ತಿನ ಎಲ್ಲಾ ಕಾನೂನು ವ್ಯವಸ್ಥೆಯೂ ಗರ್ಭ ಕಟ್ಟಿದ ಜಾಗ....Runnymede, London Place where Magna Carta was signed. #ಅಲೆದಾಟಕಲಿಸುವಪಾಠ Magna Carta is Latin for Great Charter, and is one of the most important documents in political history. Drawn up in Britain and signed on 15th June 1215, it outlines the rights of the common people and limits the powers of the monarchy. Since then it has been used as the basis for civil liberties around the World, advancing the cause of liberty, constitutionalism and parliamentarianism. June 15th Magna Carta Day
ಈ ವಿಷಯದಲ್ಲಿ ಎಲ್ಲರೂ ಒಂದೇ ಆದರೆ ......
- Get link
- X
- Other Apps

ಇಲ್ಲಿನ ನೆನ್ನೆ ರಾತ್ರಿ 10 ಗಂಟೆಗೆ ಹಿಮಪಾತವಾಗುತ್ತಿದ್ದಾಗ ಲಂಡನ್‍ನ ರೋಮನ್ ಪಾರ್ಕ್ ನಲ್ಲಿ ಪ್ಲಾಸ್ಟಿಕ್ ಕವರ್ ಒಳಗೆ ಅಳುತ್ತಿದ್ದ ನವಜಾತ ಶಿಶು ಒಂದನ್ನು ರಸ್ತೆಯಲ್ಲಿ ಹೋಗುತ್ತಿದ್ದ ತಾಯಿ ಮಗ ರಕ್ಷಿಸಿ ಆಸ್ಪತ್ರೆಗೆ ನೀಡಿರುತ್ತಾರೆ ಮಗು ಆರೋಗ್ಯವಾಗಿದೆ ಅದಕ್ಕೆ ರೋಮನ್ ಎಂದು ಹೆಸರಿಡಲಾಗಿದೆ. ಎನ್ನುವ ಸುದ್ದಿಯನ್ನು ಓದುವಾಗ ಮನಸ್ಸು ಬಿಕ್ಕುವುದರ ಜೊತೆಗೆ ಏರಿದ ಹುಬ್ಬು ಜೊತೆಯಾಗುತ್ತಾ ಅದು ಹೆಣ್ಣು ಮಗು ಎನ್ನುವುದನ್ನೂ ಗಮನಿಸಿತ್ತು. ಇಲ್ಲಿನ ಸರ್ಕಾರ ಭೂಮಿಗೆ ಬರುವ ಎಲ್ಲಾ ಮಕ್ಕಳನ್ನು ಅಕ್ಷರಶಃ ತನ್ನ ಮಕ್ಕಳೆಂದೇ ಪರಿಗಣಿಸಿ ಕನಿಷ್ಠ ಮಟ್ಟದ ಮಾನವೀಯ ಬಾಳ್ವೆಗೆ ಸವಲತ್ತು ಒದಗಿಸಿದೆ. ಆದರೂ ಹೀಗೆ ಮಗುವನ್ನು ತಿಪ್ಪೆಗೆ ಹಾಕುವುದು ಎಂದರೆ.... ಎನ್ನುವ ಕೊರೆಯುವ ಪ್ರಶ್ನೆಯನ್ನು ಹಿಂಜುತ್ತಾ ಉಪಪ್ರಶ್ನೆಗಳೊಡನೆಯೇ ಮಾತಿಗಿಳಿದೆ ಪೊಲೀಸ್ ಇನ್ಸ್ಪೆಕ್ಟರ್ ಅಲೆಕ್ಸಾಂಡರ್ ಜೊತೆ. ಈಗ ಅಲೆಕ್ಸಾಂಡರ್ನ ಆಫೀಸ್ ರೂಮಿನಲ್ಲಿ ಇದ್ದೆ. ಹೊರಗೆ ತೆಳುವಾಗಿ ಹಿಮ ಸುರಿಯುತ್ತಿತ್ತು. ಒಳಗೆ ಹಿತವಾದ ಬಿಸಿ. ಅವನೋ ಯಾವುದೋ ಉಪನಯನ ಸಮಾರಂಭದ ಬಾಳೆಲೆ ಭೋಜನದ ನಡುವೆ ಚಿರೋಟಿ ಮೇಲೆ ಸುರುವಿಕೊಳ್ಳುವ ಹಾಲಿನಂತೆ ಕಾಣುತ್ತಿದ್ದ. ಮಕ್ಕಳ ಹಕ್ಕುಗಳ ಬಗ್ಗೆ ಅವರ ಭವಿಷ್ಯದ ಬಗ್ಗೆ ಮಾತು ಮುಂದುವರಿಸಲೇ ಅಥವಾ ನನಗಿನ್ನೂ ಮಕ್ಕಳಾಗುವ ವಯಸ್ಸಿದೆ ಎಂದು ಹೇಳಿಬಿಡಲೇ ಎನ್ನಿಸುವ...