Posts

ಮಕ್ಕಳ ಅನುಸರಣಾ ಸಂಸ್ಥೆಗಳು ಮತ್ತು ಮಕ್ಕಳ Family Rights ಹಾಗೂ. . .

Image
ಮ್ಕಕಳ ಅನುಸರಣಾ ಸಂಸ್ಥೆಗಳ ಪ್ರಸ್ತುತ ಸ್ಥಿತಿಗತಿ ಮತ್ತು ಮಾಡಿಕೊಳ್ಳಬೇಕಿರುವ ಸುಧಾರಣೆಗಳು ಎಲ್ಲರಿಗೂ ನಮಸ್ಕಾರ! ನೀನಾ ನಾಯಕ್  ಮೇಡಮ್ ಅವರು ಹೇಳಿದಂತೆ ಬದುಕನ್ನು ಕಟ್ಟಕಡೆಯ ಮಗುವಿಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ನಾವುಗಳು ಈ ಕೆಲಸ ಮಾಡುವುದರಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಾಲಕಿಯರಿಗಾಗಿ ಇರುವ ಮಕ್ಕಳ ಕಲ್ಯಾಣ ಸಮಿತಿಯ, ಅಂದರೆ ನನ್ನ ಸಮಿತಿಯ ಸದಸ್ಯರುಗಳಾದ ಆಶಿಕಾ ಶೆಟ್ಟಿ, ಬಿಂದಿಯಾ ಶಾಜಿಥ್, ಸರಿತಾ ವಾಜ಼, ಲಕ್ಷ್ಮೀಪ್ರಸನ್ನ ಇವರುಗಳ 24 ಗಂಟೆಗಳೂ ಕೆಲಸ ಮಾಡುತ್ತಿದ್ದಾರೆ ಅದಕ್ಕಾಗಿ ಅವರುಗಳನ್ನು ಅಭಿನಂದಿಸುತ್ತೇನೆ. ನಾವುಗಳು ಎರಡ ದಿನಕ್ಕೊಮ್ಮೆ ಡಿಸಿಪಿಓ ಅವರೊಡನೆ, ಪಿಓಗಳೊಡನೆ ಹಾಗೂ ಸುಪರಿಡೆಂಟ್ ಅವರುಗಳೊಡನೆ ಪರಿಶೀಲಾನ ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ. ಈಗ ನಾನು ಮಾತನಾಡಲಿರುವ ವಿಷಯ ಮಕ್ಕಳ ಅನುಸರಣಾ ಸಂಸ್ಥೆಗಳ ಸ್ಥಿತಿಗತಿ ಮತ್ತು ಮಾಡಿಕೊಳ್ಳಬೇಕಿರುವ ಬದಲಾವಣೆಗಳು. ಮಕ್ಕಳ ವಿಷಯದಲ್ಲಿ ಯಾವ ವರ್ತಮಾನವೂ ಅಮುಖ್ಯವಲ್ಲ. ಹಾಗೆಯೇ ಯಾವ ಬದಲಾವಣೆಯೂ ಕೊನೆಯೂ ಅಲ್ಲ. ಮನುಷ್ಯನ ಮೂಲಭೂತ ಗುಣಲಕ್ಷಣಗಳು ಹಾಗೆಯೇ ಉಳಿದಿದ್ದರೂ ಜಾಗತೀಕರಣದ ಪ್ರಭಾವದಿಂದಾಗಿ, ಸಿಗುತ್ತಿರುವ ಎಕ್ಸ್ಪೋಷರ್ ನಿಂದಾಗಿ ಮಕ್ಕಳು ಬದಲಾಗುತ್ತಿದ್ದಾರೆ. ಅವರ ಅವಶ್ಯಕತೆಗಳಿಗೆ ತಕ್ಕಂತೆ ನಾವುಗಳು ಬೆಳೆಯದಿದ್ದರೆ ಮಕ್ಕಳ ಹಕ್ಕುಗಳ ರಚನೆಯ ಆಶಯವನ್ನೇ ಬುಡಮೇಲು ಮಾಡಿದಂತೆ ಆಗುತ್ತದೆ. ಅದಕ್ಕೇ ರಾ...

ಮಕ್ಕಳು ಕಳೆದು ಹೋಗದಿರಲಿ

Image
ಇವತ್ತು ಕಳೆದುಹೋದ ಮಕ್ಕಳ ದಿನ. ಒಂದು ಸಂಜೆ ಮರೀನ್ ಡ್ರೈವ್ ನಲ್ಲಿ ಸುಮ್ಮನೆ ನಡೆಯುತ್ತಿದ್ದೆ....ಎದುರಿಂದ ೪-೫ ವರ್ಷದ ಮುದ್ದು ಮುದ್ದು ಮಗು ಅಳುತ್ತಾ ಬರ್ತಿತ್ತು. ಕೂಡಲೇ ಒಳಗಿನ ಅಮ್ಮನಿಗೆ ಅದು ತಪ್ಪಿಸಿಕೊಂಡಿದೆ ಅಂತ ಗೊತ್ತಾಯ್ತು. ಹತ್ತಿರ ಹೋಗಿ ಮಾತನಾಡಿಸಿ ಅಲ್ಲಿಯೇ  ಇದ್ದ ಪೊಲೀಸ್ ಗೆ ಹೇಳಿದೆ....ಆತ  ಸಮಾಧಾನ ಮಾಡಿ ಮಗು ಬರುತ್ತಿದ್ದ ವಿರುದ್ದ ದಿಕ್ಕಿಗೆ ಕರೆದುಕೊಂಡು ಹೊರಟ. "ಮುಂದೇನು ಮಾಡ್ತೀರಾ ? ನಾನು ನಿಮ್ಮ ಜೊತೆ ಬರ್ತೀನಿ" ಅಂದೆ. "ತೊಂದರೆ ಇಲ್ಲ ಮೇಡಂ. ಸಾಧಾರಣವಾಗಿ ತಪ್ಪಿಸಿಕೊಂಡ ಮಕ್ಕಳು ವಿರುದ್ಧ ದಿಕ್ಕಿಗೆ ಹೋಗ್ತಾರೆ. ಅಪ್ಪ ಅಮ್ಮ ಆ ಕಡೆ ಇರ್ತಾರೆ. ನಾ ಹುಡುಕಿ ಮಗೂನಾ ತಲುಪಿಸ್ತೀನಿ" ಎಂದ. ಅಲೆಗಳು ಏಳುತ್ತಿದ್ದವು....ನಾ ದಡದಂತೆ ಸುಮ್ಮನೆ ನಿಂತಿದ್ದೆ... "ತಪ್ಪಿಸಿಕೊಂಡ ಮಕ್ಕಳು ವಿರುದ್ಧ ದಿಕ್ಕಿಗೆ ಹೋಗ್ತಾರೆ" ಎನ್ನುವ ಆತನ ಮಾತಿನ ಮರಳು ಉಪ್ಪು ಹೊತ್ತು ಗಾಳಿಯಾಗುತ್ತಿತ್ತು ! ಆ ಮಗುವಿನ ಬೆನ್ನ ಹಿಂದೆಯೇ ಹೋದವಳ ಕಣ್ಣೆದುರೇ ಮಗು ಮನೆ ಸೇರಿತ್ತು. ಅದೆಷ್ಟು ನಿಜ!  ಕುಟುಂಬದವರಿಂದ ದೂರಾದ ಮಕ್ಕಳು, ಮೂಲಭೂತ ಮಾನವ ಹಕ್ಕುಗಳ ಕಣ್ಣಿನಿಂದ ಮರೆಯಾದ ಮಕ್ಕಳು , ಒಂದು  ಒಂದು ಮುಷ್ಠಿ ಪ್ರೀತಿ, ಒಂದು ಹಿಡಿ ಮಾರ್ಗದರ್ಶನ ಸಿಗದ ಮಕ್ಕಳು,   ಎಂದಿಗೂ ಸಮಾಜದ ಮುಖ್ಯವಾಹಿನಿಗೆ ವಿರುದ್ಧ ದಿಕ್ಕಿನಲ್ಲಿಯೇ ಬದುಕುತ್ತಿರುತ್ತಾರೆ. ನಮ್ಮ ಬೇಜವಾಬ್ದಾರಿ, ಹೀನಸುಳಿಗಳಲ್ಲ...

ಗರ್ಭಕೋಶ ಮತ್ತು ಕಾನೂನು

Image
ಅಂಗಾಂಗಗಳ ದಾನದ ಬಗ್ಗೆ ಇರುವ ಪ್ರತ್ಯೇಕ ಕಾನೂನಿನ ರೀತಿಯಲ್ಲಿ, ಗರ್ಭಕೋಶ ಅಥವಾ ಗರ್ಭಾಶಯವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ನಮ್ಮಲ್ಲಿ ಯಾವುದೇ ಪ್ರತ್ಯೇಕ ಕಾನೂನು ಇರುವುದಿಲ್ಲ. ಈ ವಿಷಯಕ್ಕೆ ಸಂಬಂಧಪಟ್ಟ ಅಪರಾಧಗಳನ್ನು ಸಂವಿಧಾನದ ಪರಿಚ್ಛೇಧ ೨೧, ಭಾರತೀಯ ದಂಡ ಸಂಹಿತೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಕರಾರು ಕಾಯಿದೆಗಳ ಅಡಿಯಲ್ಲಿ ಪ್ರಕ್ರಿಯೆಗೆ ಒಳ ಪಡಿಸಲಾಗುತ್ತದೆ. ಜೊತೆಗೆ ವೈದ್ಯಕೀಯ ನಿರ್ಲಕ್ಷ್ಯ ಕಾನೂನು ಮತ್ತು ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು ೧೯೭೨ ರ ಅನ್ವಯ ತೀರ್ಮಾನಿಸಲಾಗತ್ತದೆ. ಅಲ್ಲದೆ ಇಂತಹ ಪ್ರಕರಣಗಳನ್ನು ತೀರ್ಮಾನ ಮಾಡುವಾಗ ಭಾರತೀಯ ವೈದ್ಯಕೀಯ ಮಂಡಳಿ  ಈಗಾಗಲೇ ರೂಪಿಸಿರುವ ನಿಯಮಾವಳಿಗಳನ್ನು ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಗಣಿಸಲಾಗುತ್ತದೆ. ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು, ೧೯೭೨ ಮತ್ತು ೧೯೭೫ ರ ತಿದ್ದುಪಡಿ ಹಾಗು ಭಾರತೀಯ ವೈದ್ಯಕೀಯ ಗರ್ಭಪಾತ ತಿದ್ದುಪಡಿ ಕಾನೂನು ೨೦೦೨ ಅಧಿನಿಯಮಗಳ ಪ್ರಕಾರ ಗರ್ಭಕೋಶವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ  ಮೂಲಕ ತೆಗೆದು ಹಾಕುವ ಅವಕಾಶವನ್ನು ವೈದ್ಯರಿಗೆ ನೀಡಲಾಗಿದೆ ಆದರೆ ಅಂತಹ ಸಂದರ್ಭವನ್ನೂ ವಿವರಿಸಲಾಗಿದೆ. ಅಪರೂಪದಲ್ಲಿ ಅಪರೂಪ ಎನ್ನುವ ಪರಿಸ್ಥಿಯಲ್ಲಿ ಗರ್ಭಿಣಿಗೆ ಸಹಜ ಹೆರಿಗೆ ಸಾಧ್ಯವಾಗದಾದಗ, ಕೇವಲ ಸಿಜೇರಿಯನ್ ಮೂಲಕವೂ ಮಗುವನ್ನು ಹೊರ ತೆಗೆಯಲ...

ಹೊಸ ಕಲಿಕೆ ಬದುಕಿನ Renewal!

Image
 Very satisfying to complete  7 weeks certificate course from The University of Geneva in CHILDREN'S HUMAN RIGHTS with 89.20% 😊

ಆತ್ಮನಿರ್ಭರಭಾರತ ಮತ್ತು Child Rights

Image
Lockdown ಸಂದರ್ಭ, ಕರೊನ ಕಾರಣ- ನಮ್ಮೊಳಗಿರುವ ಸಮಾಜಸೇವಕ ಜಾಗೃತ ಗೊಂಡಿದ್ದಾನೆ. ಊಟದ ಪ್ಯಾಕೆಟ್ ಗಳನ್ನು ಎಲ್ಲೆಂದರಲ್ಲಿ ಯಾರಿಗೆ ಅಂದರೆ ಅವರಿಗೆ ಹಂಚಿಹಂಚಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕಿಕೊಂಡು ದೇಶದ ಕರುಳುಕಿತ್ತು ಬರಿಸುತ್ತಿದ್ದೇವೆ. ಉಸಿರು ಉಳಿಯಲು ಮಾತ್ರ ತಿಂದರೆ ಬಸುರಿ, ಬಾಣಂತಿ ಮತ್ತು ಬೆಳೆಯುವ ಮಕ್ಕಳಿಗೆ ಸಾಕೇ? ಅವರುಗಳಿಗೆ ಪೌಷ್ಟಿಕತೆ ನೀಡದಿದ್ದರೆ ಭವಿಷ್ಯ ಭದ್ರವಾಗಲು ಸಾಧ್ಯವೇ? ಊಟ ಕೊಡೋದು ಸೇವೆ ಎಂದುಕೊಂಡು ಬೀಗೋಣ ಆದರೆ ಅವರುಗಳಿಗೆ ಪೌಷ್ಟಿಕಾಂಶ ನೀಡುವುದು ನಮ್ಮ 'ದೇಶಭಕ್ತಿ' ಎಂದುಕೊಂಡು ಜವಾಬ್ದಾರಿ ಹೊರೋಣ. ದುರ್ಬಲ ಮಕ್ಕಳಿಂದ #ಆತ್ಮನಿರ್ಭರಭಾರತ  ಸಾಧ್ಯವಿಲ್ಲ. "ಇಸ್ಕೂಲು ಮುಚ್ಚೈತೆ , ನಂಗ್ ದುಡಿಮೆ ಇಲ್ಲ ನಡೀ ನೀ ಕೆಲ್ಸಕ್ಕೆ" ಅಥವಾ "ನಿಂಗೆ ಮದ್ವೆ ಮಾಡ್ಬುಡ್ತೀನಿ" ಎನ್ನುವ ಪೋಷಕರ ಮನೋಸ್ಥಿತಿಯನ್ನು, ಅವರುಗಳ ಪರಿಸ್ಥಿತಿಯನ್ನು ಬದಲು ಮಾಡುವ ಕಡೆಗೆ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳುವ ವರೆಗೂ ಸಾಧ್ಯವಿಲ್ಲ #ಆತ್ಮನಿರ್ಭರಭಾರತ ಎರಡು ತಿಂಗಳಿಂದ ಪಿಂಚಣಿ/ಮಾಸಾಶನ ಬಾರದೆ ಬ್ಯಾಂಕ್ ನಲ್ಲಿ ವಿಚಾರಿಸಿದಾಗ ತಿಳಿದು ಬಂದದ್ದು - ಸಧ್ಯಕ್ಕೆ ಪಿಂಚಣಿ ನೀಡಬಾರದು ಎನ್ನುವ ಸರ್ಕಾರೀ ಸುತ್ತೋಲೆ ಇದೆ ಎಂದು. ಹೀಗೆ ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಸಂವಿಧಾನಕ್ಕೆ ಬದ್ಧವಾಗಿ ಸರ್ಕಾರ ನೀಡುತ್ತಿರುವ ಹಣಕಾಸು ಬೆಂಬಲವನ್ನು ಏಕಾಏಕಿ ನಿಲ್ಲಿಸಿ ಬಿಟ್...

Child labour part-1

Image
ಆರೂವರೆ ನಿಮಿಷಗಳ ಅನುಭವ ಹಂಚಿಕೆಯಿಂದ ಬಾಲಕಾರ್ಮಿಕತೆಯ ಕರಾಳತೆ ಸಮಾಜಕ್ಕೆ ಅರ್ಥವಾಗುವುದೇ ?! ಮಕ್ಕಳಿಗಾಗಿ ನಾವು ಮಾಡುವ ಕಾಯಕವೇ ಕೈಲಾಸ. ಈ ಲಿಂಕ್ ಮೂಲಕ ನೀವೂ ಕೇಳಿ..... https://youtu.be/a2kbrWhcFSU ಈ ಪಟ ಸರ್ಕಾರಿ ಬಾಲಕಿಯರ ಮಂದಿರದ ಬಾಲಕಿಯರ ಕಲೆ.

Child Rights Week 2019 - ಬನ್ನಿ ಮನುಷ್ಯರಾಗೋಣ!

Image
ಇವತ್ತು ರಾಷ್ತ್ರೀಯ ಮಕ್ಕಳ ದಿನಾಚರಣೆ. ೨೦ ನವೆಂಬರ್ ಅಂತರಾಷ್ಟ್ರೀಯ ಮಕ್ಕಳ ದಿನಾಚರಣೆ. ಮಕ್ಕಳ ಹಕ್ಕುಗಳ ವಿಷಯದಲ್ಲಿ ಈ ವರ್ಷಕ್ಕೆ ತನ್ನದೇ ಆದ ಮಹತ್ವ ಇದೆ. ೧೯೫೯ ರ ನವೆಂಬರ್ ೨೦ರಂದು ವಿಶ್ವಸಂಸ್ಥೆಯ ಜೆನೆರಲ್ ಅಸೆಂಬ್ಲಿಯಲ್ಲಿ ಮಕ್ಕಳ ಹಕ್ಕುಗಳ ಘೋಷಣೆ ಮಾಡಿತ್ತು. ನಂತರ ೧೯೮೯ರಲ್ಲಿ   ಹಲವಾರು ರಾಷ್ಟ್ರಗಳು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿದವು. ಒಡಂಬಡಿಕೆ ಸಹಿ ಹಾಕಿರುವ ರಾಷ್ಟ್ರಗಳು, ಈ ವರ್ಷ ೧೪ ರಿಂದ ೨೦ನೆಯ ತಾರೀಕಿನವರೆಗೂ ಪ್ರಪಂಚದಾದ್ಯಂತ ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಪ್ರಜ್ಞ್ನೆ   ಮೂಡಿಸಲು ಹಲಾವರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಮಕ್ಕಳ ಸಹಾಯವಾಣಿಯ ಬಗ್ಗೆ ಸಾಮಾನ್ಯರಿಗೆ ತಿಳುವಳಿಕೆ ಮೂಡಿಸುವುದು, ಮಕ್ಕಳಿಗಾಗಿಯೇ ಇರುವ ಕಾನೂನುಗಳ ಜಾಗೃತಿ ಶಿಬಿರಗಳನ್ನು ಆಯೋಜಿಸುವುದು, ಮಕ್ಕಳಿಗೆ ಮನೋರಂಜನೆಯ ಮೂಲಕ   ಅವರ ಹಕ್ಕುಗಳ ಅರಿವು ಮೂಡಿಸುವುದು ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಮ್ಮ ಕರ್ನಾಟಕದಾದ್ಯಂತ ನಡೆಯುತ್ತಿವೆ. ಈ ಎಲ್ಲಾ ಕಾರ್ಯಕ್ರಮಗಳು “ UNCRC30 “   ಎನ್ನುವ ಉಪಸಾಲನ್ನು ಹೊತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ವಿಶ್ವಸಂಸ್ಥೆಯು ಈ ಬಾರಿಯ ಮಕ್ಕಳ ಹಕ್ಕುಗಳ ಸಪ್ತಾಹಕ್ಕಾಗಿ ಆಯ್ಕೆ ಮಾಡಿರುವ ಬಣ್ಣ ನೀಲಿ. ’ GO BLUE ‘   ಈ ಘೋಷವಾಕ್ಯ ವಾರವಿಡೀ ಎಲ್ಲಾ ವಯಸ್ಕರು ನೀಲಿ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಲು ಮನವಿ ಮಾಡಲಾಗಿದೆ. ಕಚೇರಿಗಳನ್ನು, ಮನೆಗಳ...

Mental Health ಮತ್ತು ಲಾಕ್ ಡೌನ್

Image
ಲಾಕ್ ಡೌನ್ ಸಮಯದಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಎನ್ನುವ ವಿಷಯದ ಬಗ್ಗೆ 90.4 ಸಾರಥಿ ಝಲಕ್ ರೇಡಿಯೊದಲ್ಲಿ ಮಾತನಾಡಿದ್ದೇನೆ. ಬಿಡುವು ಮಾಡಿಕೊಂಡು ಈ ಲಿಂಕ್ ಮೂಲಕ ಕೇಳಿ please 🙏 https://youtu.be/H2LWoFQ7IxY 30 March 2020

ಬನ್ನಿ ಮನೆಗೆ ಹೋಗೋಣ. . . Lets Go Home !

Image
ಬಡತನ ಮತ್ತು ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತದೆ ಎನ್ನುವ ಕಾರಣಗಳನ್ನು ನೀಡಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಾಯ್ತಂದೆಯರು ತಮ್ಮ ಮಕ್ಕಳನ್ನು ಬೆಂಗಳೂರಿನ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ, NGOಗಳಲ್ಲಿ ದಾಖಲಿಸಿರುತ್ತಾರೆ. ಈ ಕಾರಣಗಳು ಒಂದು ಹಂತದವರೆಗೂ ನಿಜವೇ ಆದರೂ ಹೀಗೆ ಮಕ್ಕಳನ್ನು ದೂರ ಮಾಡಿರುವ ತಂದೆ ತಾಯಿಯರಲ್ಲಿ ತಮ್ಮ ಜವಾಬ್ದಾರಿಯನ್ನು ವರ್ಗಾವಣೆ ಮಾಡುವ ಮನೋಭಾವವೇ ಎದ್ದು ಕಾಣುತ್ತದೆ. ಅವರುಗಳ ಉಡಾಫೆತನವನ್ನು ವ್ಯಾಪಾರೀಕರಣಗೊಳಿಸಿ,  ಸಮಾಜ ಸೇವೆ ಎನ್ನುವ ಹೆಸರಿನಲ್ಲಿ ನಾಯಿಕೊಡೆಗಳಂತೆ ಬೆಂಗಳೂರಿನ ಪ್ರತೀ ಗಲ್ಲಿಯಲ್ಲೂ ’ಸೇವಾಶ್ರಮ’ ಎನ್ನುವ ಬೋರ್ಡ್ ಕಾಣುತ್ತದೆ. ಬಹಳಷ್ಟು ಸಂಸ್ಥೆಗಳಿಗೆ ಸರಿಯಾದ ನೋಂದಾವಣೆ ಇರುವುದಿಲ್ಲ. ಯಾವ ಬಡತನ ಎನ್ನುವ ಕಾರಣಕ್ಕೆ ಮಕ್ಕಳು ಸುಖವಾಗಿರಲು ಇಲ್ಲಿನ ಸಂಸ್ಥೆಗೆ ಬಂದಿರುತ್ತಾರೋ , ವಾಸ್ತವದಲ್ಲಿ ಇಲ್ಲಿ ಇನ್ನೂ ಹಾಳಾದ ಪರಿಸರದಲ್ಲಿ ಇರುತ್ತಾರೆ. ಮಾನಸಿಕ ಆರೋಗ್ಯವೂ ಕುಂದಿರುತ್ತದೆ. Inferiority complexನ ಬಲಿ ಪಶುಗಳಾಗಿರುತ್ತಾರೆ. ಭವಿಷ್ಯದೆಡೆಗೆ ನಿರ್ವಿಣ್ಣರಾಗಿರುತ್ತಾರೆ. ಸಂಸ್ಥೆಗಳು ಅವರಲ್ಲಿನ ಹೆಣ್ಣು ಮಕ್ಕಳನ್ನು ಬ್ಯೂಟಿ ಪಾರ್ಲರ್‍ನ ಕೆಲಸಕ್ಕೆ ಹೊರತಾದ ಯಾವುದೇ ಕೌಶಲ್ಯ ಕಲಿಸಲು ಸೋಲುತ್ತಿವೆ. ಅಬ್ಬಬ್ಬಾ ಎಂದರೆ ಮಕ್ಕಳು ನಾಲ್ಕು ಚೂಡಿದಾರ್ ಹೊಲಿಯುವಷ್ಟು ಟೈಲರ್ ಆಗುತ್ತಿದ್ದಾರೆ ಅಷ್ಟೇ. ಇಲ್ಲಿರುವ ಬಾಲಕಿಯರದ್ದೂ , ಅದೆಷ್ಟೋ ಕುಟುಂಬದ ಜೊತೆಯಲ್ಲಿ ಇರುವ ಹೆಣ್ಣು ಮಕ್ಕ...

Prison visit

Image
ಸಂತಸಕ್ಕೊಂದು ಚಪ್ಪಾಳೆ ನೋವಿಗೆರಡು ಕಣ್ಣ ಹನಿ ಇಷ್ಟೇ ಸಾಮ್ಯ ಮನುಷ್ಯಧರ್ಮದಲ್ಲಿ...ಪ್ರತೀ ನೋವಿನ ಆಳ ಅಗಲ ಬಗೆ ಎಲ್ಲವೂ ಅದೆಷ್ಟು ಭಿನ್ನ! 29th April 2019 Central Prison,  Bengaluru  ಮತ್ತೊಮ್ಮೆ.

ಗ್ರಂಥಾಲಯ ಮತ್ತು ಮಕ್ಕಳ ಮನೋವಿಕಾಸ

Image

Quarantine ಮಕ್ಕಳ ಮನೋವಿಕಾಸ

Image
ಮಹಿಳಾ ಮತ್ತು ಮಕ್ಕಳ ಸಚಿವಾಲಯ, ಕರ್ನಾಟಕ ಸರ್ಕಾರ ಇವರ ಆದೇಶದ ಮೇರೆಗೆ, ಕೊರೋನ ಕಾರಣಕ್ಕಾಗಿ quarantine ನಲ್ಲಿ ಇರುವ ತಾಯ್ತಂದೆಯರ ಮಕ್ಕಳನ್ನು ಸಹ ಪ್ರತ್ಯೇಕವಾಗಿ ಇಡಬೇಕಿರುತ್ತದೆ. ಇಂತಹ ಮಕ್ಕಳಿಗೆ ಆಸ್ಪತ್ರೆಯಲ್ಲಿ ಮನೋರಂಜನೆಗಾಗಿ ಸಾಧನಗಳನ್ನು ಒದಗಿಸಿ ಕೊಡಬೇಕಾದ ಜವಾಬ್ದಾರಿಯನ್ನು ಅಸ್ತಿತ್ವ ನಿಭಾಯಿಸಿದ್ದು ಹೀಗೆ.
Image
ಅಸ್ತಿತ್ವ ಟ್ರಸ್ಟ್ ಮೂಲಕ ಇದು ಸಾಧ್ಯವಾಗಿಸಿದವರು ನೀವು. ಒಪ್ಪಿಸಿಕೊಳ್ಳಿ 🙏

ದೀಪಧಾರಿಣಿ Florance Nightingale

Image
ಮ್ಯೂಸಿಯಂ ಬಾಗಿಲು ಹಾಕಲು ಇನ್ನರ್ಧ ಗಂಟೆ ಮಾತ್ರ ಇತ್ತು. ದಡಬಡಗುಟ್ಟಿಕೊಂಡು ಹೋದೆ . ಪ್ರವೇಶ ದರ £೭ . ಸ್ವಾಗತಕಾರಿಣಿ ಅರ್ಧ ಗಂಟೆಕೋಸ್ಕರ ಪಷ್ಟು ದುಡ್ಡು ಕೊಡಬೇಡಿ ನಾಳೆ ಬನ್ನಿ ಎಂದಳು. ಉಹುಂ ನನಗೆ ನೋಡಲೇಬೇಕೆಂಬ ಹಠ ಬಂದಿತ್ತು. "ಇಲ್ಲಿಗೆ ಪ್ರವಾಸಿಗರು ಬರುವುದೇ ಇಲ್ಲ ಆದರೆ ನೀವು ಇಂಡಿಯಾ  ಅಷ್ಟು ದೂರದಿಂದ ಬಂದಿದ್ದೀರಿ ನಿಮಗಾಗಿ ಇನ್ನೂ ಅರ್ಧ ಗಂಟೆ ತೆರೆದಿರುತ್ತೀನಿ ಹೋಗಿ ನೋಡಿ" ಎಂದು ಟಿಕೆಟ್ ಹರಿದುಕೊಟ್ಟವಳ ಕೈಗೆ ಮುತ್ತಿಡುತ್ತಾ ಒಳ ಹೊಕ್ಕೆ. ಅಲ್ಲಿನ ಎಲ್ಲಾ ಮ್ಯೂಸಿಯಂಗಳಂತೆ ಇದನ್ನು ಬಲು ಒಪ್ಪವಾಗಿರಿಸಿದ್ದಾರೆ .ಆಕೆ ಹುಟ್ಟಿದಾಗಿನಿಂದ ಕೊನೆಯಾಗುವವರೆಗೂ ಮಾಡಿದ ಕೆಲಸ, ತೊಟ್ಟ ಬಟ್ಟೆ,  ಆಡಿದ ಮಾತು, ತೋರಿದ ಅಭಿರುಚಿ ಎಲ್ಲವನ್ನೂ ಲಭ್ಯತೆಗೆ ತಕ್ಕಂತೆ ಚಂದಗಾಣಿಸಿ ಇಟ್ಟಿದ್ದಾರೆ. ಈಕೆ ದೀಪಧಾರಿಣಿ ಫ್ಲೋರೆನ್ಸ್ ನೈಟಿಂಗೇಲ್ ಮಾತ್ರವಲ್ಲ ಕೈ ಬರಹದಲ್ಲೇ 200 ಪುಸ್ತಕ 1400 ಪತ್ರಗಳು ಅದೆಷ್ಟೋ ಕರಪತ್ರ ಲೆಕ್ಕವಿಲ್ಲದಷ್ಟು ಲೇಖನಗಳನ್ನು ಬರೆದಿರುವ ಸಾಹಿತಿಯೂ ಹೌದು ಎನ್ನುವ ಹೊಸ ವಿಷಯ ತಿಳಿದುಕೊಳ್ಳುತ್ತಾ, ನೋಡುತ್ತಾ, ಕ್ಯಾಮೆರಾದಲ್ಲೂ ಕಾಣುತ್ತಾ ಹೊರ ಬರುವಾಗ ಮನಸ್ಸಿನಲ್ಲಿ ನಿಂತದ್ದು ದಾದಿ ಫ್ಲೋರೆನ್ಸ್ ಳ ಈ ಮಾತು - "Now I know what it takes to love life !" ಇನ್ನೇನು ಹೊಸಿಲು ದಾಟುವವಳಿದ್ದೆ ಎನ್ನುವಾಗ ಹಿಂದಿನಿಂದ ಅಟ್ಟಿಸಿಕೊಂಡು ಬಂದ ಒಬ್ಬಾಕೆ ನನ್ನ ಕ್ಯಾಮೆರಾ ಕಡೆಗೆ ಕ...

Law and Reproductive Health

Image
ಮೊನ್ನೆ FBಯಲ್ಲಿಯೇ ಓದಿದೆ, ಆಗತಾನೆ ಹುಟ್ಟಿದ ಹಸುಗೂಸನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಲು ಕಷ್ಟ ಪಟ್ಟ ತಾಯಿಗೆ ಯಾರೋ ಒಂದಷ್ಟು ಜನ ಬಹಳವೇ ಕಷ್ಟಪಟ್ಟು ಮನೆ ಸೇರಿಸಿದೆವು ಎನ್ನುತ್ತಾ ಆ ಕೂಸು ಮತ್ತು ಹಸಿ ಬಾಣಂತಿಯ ಫೋಟೊ ಸಮೇತ ಬರೆದುಕೊಂಡಿದ್ದನ್ನು. ಇವರು ಯಾಕೆ 1098 ಸಹಾಯವಾಣಿಗೆ ಕರೆಮಾಡಲಿಲ್ಲ ಎಂದುಕೊಂಡೆ. ಸಹಾಯ ಮಾಡಲು ಮುಂದಾಗುವ ಜನರ ಮೊದಲ ಗುಣಲಕ್ಷಣ ಸಂಘಟಿಸಿಕೊಳ್ಳುವುದು ಮತ್ತು  ಈಗಾಗಲೇ ಆ ನಿಟ್ಟಿನಲ್ಲಿ ಇರುವ ಸರ್ಕಾರಿ ಮತ್ತು ಸರ್ಕಾರೇತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮತ್ತು ಸಂಪರ್ಕ ಇಟ್ಟುಕೊಳ್ಳುವುದು. ಇವುಗಳು ನಾನು ಕಲಿತಿರುವ ಪಾಠ. ನಾ ಕಲಿತದ್ದನ್ನು ಅಷ್ಟು ಸುಲಭಕ್ಕೆ ಬೇರೆಯವರಿಗೆ ಕೊಡೋಲ್ಲ, ಸ್ವಾರ್ಥಿ ಹಾಗಾಗಿ ಅವರಿಗೆ ಏನೂ ಹೇಳಲಿಲ್ಲ. 😆😆😆 ಈವರೆಗೆ ಹೇಳಿದ್ದು ವೈಯಕ್ತಿಕ, ಈಗ ಇನ್ನು ಮುಂದಿನದು ಸಾರ್ವಜನಿಕ ದಾಖಲೆಯಲ್ಲಿ ಇರುವ ವಿಷಯ: Reproductive Health ಎನ್ನುವುದು ನಮ್ಮ ಸಂವಿಧಾನದದ ಪರಿಚ್ಚೇಧ 14,15 ಮತ್ತು 21 ರಲ್ಲಿ ನಮ್ಮ ಹಕ್ಕು. ಹಾಗೆಯೇ Universal Declaration of Human Rights, Convention For Elimination of all All Forms of Violence  Against Women and Child Rights Coventionಗಳ ಪ್ರಕಾರ ಗರ್ಭವತಿ ಮತ್ತು ಬಾಣಂತಿ ಮತ್ತು ಕೂಸುಗಳಿಗೆ ಆರೋಗ್ಯಕರ ವಾತಾವರಣ, ಪೌಷ್ಠಿಕಾಂಶ, ಚಿಕಿತ್ಸೆಯ ಹಕ್ಕುಗಳು ಇವೆ. ಇದರಲ್ಲಿ ಸಮಯ ಬಿದ್ದಾಗ...

ಆಪ್ತಸಮಾಲೋಚನೆ ಮತ್ತು Mental Helath

Image
ಆಪ್ತಸಮಾಲೋಚನೆ ಮಾಡುವುದು ಎಂದರೆ ಶಾರುಖ್ ಖಾನ್ ನ ಕೆನ್ನೆಯ ಗುಳಿಯಷ್ಟು ರೊಮ್ಯಾಂಟಿಕ್ ಅಲ್ಲ.... #DearZindagi  ಯೇ ಇಲ್ಲಿ ಕೇಳು..... ತಮ್ಮ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹೋದವರನ್ನು 3-6 ತಿಂಗಳ course ಎಂದು ಹೇಳಿ ಅದಕ್ಕೆ ಒಂದು certificate ಕೊಟ್ಟು ಕಳುಹಿಸಿ, ಇನ್ನು ಮುಂದೆ ಅವರುಗಳು ಆಪ್ತ ಸಮಾಲೋಚನೆ ಮಾಡಬಹುದು ಎನ್ನುವ ನಾಯಿಕೊಡೆಗಳನ್ನು ಹುಟ್ಟಿಸುತ್ತಿರುತ್ತಾರೆ ಕೆಲವು ಸಂಸ್ಥೆಗಳು ಮತ್ತು ವೈದ್ಯರೂ. ಆದರೆ ಆಪ್ತಸಮಾಲೋಚನೆ ಸುಲಭ ಕ್ಷೇತ್ರ ವಲ್ಲ. ವರ್ಷಾನುಗಟ್ಟಲೆ ಅದೇ ವಿಷಯದಲ್ಲಿ ಅಧ್ಯಯನ ಮಾಡಿದವರೂ ಈ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಕೆಲಸ ಮಾಡುತ್ತಲೇ ಇದ್ದಾರೆ. ಚೆನ್ನಾಗಿ ಮಾತನಾಡುವವರು, ತಾಳ್ಮೆಯಿಂದ ಕೇಳಿಸಿಕೊಳ್ಳುವವರು, ಅಯ್ಯೋ ಪಾಪ ಎನ್ನುವವರು ಇವರೆಲ್ಲರೂ ಉದ್ಭವ ಮೂರ್ತಿಗಳಂತೆ ಆಪ್ತ ಸಮಾಲೋಚಕರು ಆಗಲು ಸಾಧ್ಯವಿಲ್ಲ. ಮುಖಾಮುಖಿ ಸಮಾಲೋಚನೆಗಿಂತ ಫೋನ್ ಮೂಲಕ online ಮೂಲಕ ಮಾಡಲು ಹೆಚ್ಚಿನ ಕಲಿಕೆ ಬೇಕಿರುತ್ತದೆ. *ಅದರಲ್ಲೂ ಮಕ್ಕಳಿಗೆ ಹದಿಹರೆಯದವರಿಗೆ ಆಪ್ತ ಸಮಾಲೋಚನೆ ಮಾಡಲು*  ಎಷ್ಟು ಅನುಭವ, ಜ್ಞಾನ ಇದ್ದರೂ ಕಡಿಮೆಯೇ. ಸಹಾಯ ಕೇಳುವವರು ಸಮಾಲೋಚಕರ ಮೇಲೆ ಮಾನಸಿಕವಾಗಿ ಎಷ್ಟರ ಮಟ್ಟಿಗೆ ಅವಲಂಬಿತ ಆಗಿರುತ್ತಾರೆ, ಅವರನ್ನು ನಮ್ಮ ಅಂತರಂಗದ ಹೊಸಿಲು ದಾಟದಂತೆ ಯಾವಾಗ ತಡೆಹಿಡಿಯಬೇಕು, ಅದರಿಂದ ಅವರ ಮೇಲೆ ಆಗುವ ಪರಿಣಾಮ ಏನು , ಅವುಗಳ ನಿಭಾವಣೆ ಹೇಗೆ ಎನ್ನುವ ಆರಿವು ಸಾಕ...

Obstructing a public servant is an offence

Image
ದೆಹಲಿಯಲ್ಲಿ ಮನೆ owner ಗಳು ತಮ್ಮ ಮನೆಯಲ್ಲಿ ಬಾಡಿಗೆ ಇರುವ ವೈದ್ಯರನ್ನು ಏಕಾಏಕಿ ಹೊರಹಾಕುತ್ತಿದ್ದಾರೆ. ಅದಕ್ಕೆ ದೆಹಲಿ ಸರ್ಕಾರ ಕೆಳಗಿನಂತೆ ಆದೇಶಿಸಿದೆ. ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 186 ಮತ್ತು 353 ಪ್ರಕಾರ ಪೊಲೀಸ್, health officers, ವೈದ್ಯರು ಇವರುಗಳಿಗೆ ಕರ್ತವ್ಯ ನಿರ್ವಹಣೆಗೆ ಸಂಬಂಧಪಟ್ಟಂತೆ ಯಾವುದೇ ತೊಂದರೆ ಕೊಡುವುದು ಶಿಕ್ಷಾರ್ಹ ಅಪರಾಧ. ಜೈಲು ಶಿಕ್ಷೆಗೆ ಇರುತ್ತದೆ. ಜೀವಕ್ಕೆ ಬೆಲೆ ಕೊಡಬೇಕು ಎನ್ನುವ ಮನಸ್ಸು ಆಳಿದ ಮೇಲೆ, ಕಾನೂನನ್ನು ಗೌರವಿಸಬೇಕು ಎನ್ನುವ ನಾಗರೀಕತೆ ನಶಿಸಿ ಹೋದ ಮೇಲೆಯೇ ಕೊರೋನ ಹುಟ್ಟಿದ್ದು!
Image
ಮಹಿಳೆಯರ ಆಸ್ತಿ ಹಕ್ಕಿನ ಬಗ್ಗೆ ಹಿಂದೊಮ್ಮೆ... https://m.youtube.com/watch?v=wYIsBHEhaVs&feature=youtu.be https://m.youtube.com/watch?v=zuMNJmJZm6k&feature=youtu.be

ಗರ್ಭಾಶಯ ತೆಗೆಯುವುದು Removal of Uterus and Law

Image
ಅಂಗಾಂಗಗಳ ದಾನದ ಬಗ್ಗೆ ಇರುವ ಪ್ರತ್ಯೇಕ ಕಾನೂನಿನ ರೀತಿಯಲ್ಲಿ, ಗರ್ಭಕೋಶ ಅಥವಾ ಗರ್ಭಾಶಯವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ನಮ್ಮಲ್ಲಿ ಯಾವುದೇ ಪ್ರತ್ಯೇಕ ಕಾನೂನು ಇರುವುದಿಲ್ಲ. ಈ ವಿಷಯಕ್ಕೆ ಸಂಬಂಧಪಟ್ಟ ಅಪರಾಧಗಳನ್ನು ಸಂವಿಧಾನದ ಪರಿಚ್ಛೇಧ ೨೧, ಭಾರತೀಯ ದಂಡ ಸಂಹಿತೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಕರಾರು ಕಾಯಿದೆಗಳ ಅಡಿಯಲ್ಲಿ ಪ್ರಕ್ರಿಯೆಗೆ ಒಳ ಪಡಿಸಲಾಗುತ್ತದೆ. ಜೊತೆಗೆ ವೈದ್ಯಕೀಯ ನಿರ್ಲಕ್ಷ್ಯ ಕಾನೂನು ಮತ್ತು ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು ೧೯೭೨ ರ ಅನ್ವಯ ತೀರ್ಮಾನಿಸಲಾಗತ್ತದೆ. ಅಲ್ಲದೆ ಇಂತಹ ಪ್ರಕರಣಗಳನ್ನು ತೀರ್ಮಾನ ಮಾಡುವಾಗ ಭಾರತೀಯ ವೈದ್ಯಕೀಯ ಮಂಡಳಿ  ಈಗಾಗಲೇ ರೂಪಿಸಿರುವ ನಿಯಮಾವಳಿಗಳನ್ನು ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಗಣಿಸಲಾಗುತ್ತದೆ. ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು, ೧೯೭೨ ಮತ್ತು ೧೯೭೫ ರ ತಿದ್ದುಪಡಿ ಹಾಗು ಭಾರತೀಯ ವೈದ್ಯಕೀಯ ಗರ್ಭಪಾತ ತಿದ್ದುಪಡಿ ಕಾನೂನು ೨೦೦೨ ಅಧಿನಿಯಮಗಳ ಪ್ರಕಾರ ಗರ್ಭಕೋಶವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ  ಮೂಲಕ ತೆಗೆದು ಹಾಕುವ ಅವಕಾಶವನ್ನು ವೈದ್ಯರಿಗೆ ನೀಡಲಾಗಿದೆ ಆದರೆ ಅಂತಹ ಸಂದರ್ಭವನ್ನೂ ವಿವರಿಸಲಾಗಿದೆ. ಅಪರೂಪದಲ್ಲಿ ಅಪರೂಪ ಎನ್ನುವ ಪರಿಸ್ಥಿಯಲ್ಲಿ ಗರ್ಭಿಣಿಗೆ ಸಹಜ ಹೆರಿಗೆ ಸಾಧ್ಯವಾಗದಾದಗ, ಕೇವಲ ಸಿಜೇರಿಯನ್ ಮೂಲಕವೂ ಮಗುವನ್ನು ಹೊರ ತೆಗೆಯಲ...
Image
ನಿಮ್ಮ ಬಿಡುವಿನ ವೇಳೆಯಲ್ಲಿ ಕೇಳಿ, ಹೇಳಿ🙏 8th March 2020 ಸಾವಣ್ಣ ಪ್ರಕಾಶನದ ಏನೋ ಹೇಳುತ್ತಿದ್ದಾರೆ  ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಡಿದ ಮಾತುಗಳು    ಕೆಳಗಿನ Link ನಲ್ಲಿ ಇದೆ. https://youtu.be/Cg3_AUdaE0w