ಮದುವೆಯಾದ ಪುರುಷ livin relationship ನಲ್ಲಿ ಇದ್ದರೆ ಅಪರಾಧ ಅಲ್ಲ ಅಂತ ಅಲಹಾಬಾದ್ ಕೋರ್ಟ್ ಹೇಳಿದೆ ಎನ್ನುವ ಸುದ್ದಿ ಓದಿ ಲಿವ್ ಇನ್ ಸಂಬಂಧಗಳ ಬಗ್ಗೆ ರಮ್ಯ ಕಲ್ಪನೆ ಮಾಡಿಕೊಂಡರೆ ನಿರಾಸೆ ಕಟ್ಟಿಟ್ಟ ಬುತ್ತಿ. ಅಲ್ಲಿನ ಪ್ರಕರಣದ Facts ಬೇರೆ ಮತ್ತು ಪಾರ್ಟಿಗಳು ಕೇಳಿಕೊಂಡಿದ್ದ ಪರಿಹಾರಕ್ಕೆ ಅನುಗುಣವಾಗಿ ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲ್ಲಿನ ಕೋರ್ಟ್ ತೀರ್ಪು ಕೊಟ್ಟಿದೆ ಅಷ್ಟೇ. Livin relationship ಎನ್ನುವುದರ ಮೂಲಭೂತ ಗುಣಲಕ್ಷಣ ಇಬ್ಬರಿಗೂ ಅಸ್ತಿತ್ವದಲ್ಲಿ ಇರುವ ಮದುವೆ ಇರಬಾರದು ಎನ್ನುವುದೇ ಆಗಿದೆ. ಒಬ್ಬಾಕೆ ಸುಮಾರು 10 ವರ್ಷಗಳಿಂದ ಸಂಬಂಧದಲ್ಲಿದ್ದಳು. ಸಂಬಂಧಕ್ಕೆ ತನ್ನ ನಂಬಿಕೆ, ಸಮಯ, ಯೌವನ, ಭಾವನೆ, ದೇಹವನ್ನೂ ವ್ಯಯಿಸಿದ್ದಳು. ಏಕಾಏಕಿ ಒಂದು ದಿನ ಆತ ಖೇಲ್ ಖತಂ ಟಾಟಾ ಬೈ ಬೈ ಎಂದು ಹೊರನಡೆದು ಬಿಟ್ಟ. ಚೂರಾದ ಅವಳು ಪೊಲೀಸರ ಬಳಿ ಹೋಗಲು ನಿರ್ಧರಿಸಿದಳು. ಅವಳು ಭಾವಿಸಿದಂತೆ ಅವನು ಮಾಡಿದ ಗಂಭೀರ ದ್ರೋಹಕ್ಕೆ ಕಾನೂನು ಅವನಿಗೆ ಶಿಕ್ಷೆ ನೀಡಬೇಕೆಂದು ಅವಳು ಬಯಸಿದಳು. ಆದರೆ ಕಾನೂನು ಎಂದಿಗೂ ಭಾವನಾತ್ಮಕ ಗಾಯವನ್ನು ಅದಕ್ಕೆ ಪರ್ಯಾಯವಾಗಿ ಗುರುತಿಸುವಷ್ಟು ಸಮರ್ಥವಾಗಿಲ್ಲ ಮತ್ತು ಅದು ಸಾಧ್ಯವೂ ಇಲ್ಲ. ಲಿವ್-ಇನ್ ಸಂಬಂಧವು ಸಬಲೀಕರಣದ ಸಂಬಂಧವಲ್ಲ, ಅದೊಂದು ಪರಸ್ಪರ ನಿರೀಕ್ಷೆಗಳ ಬಂಧವಾಗಿದೆ. ಸಾರ್ವಜನಿಕ ಪ್ರವಚನದಲ್ಲಿ, ಲಿವ್-ಇನ್ ಸಂಬಂಧಗಳನ್ನು ಸ್ವಾತಂತ್ರ್ಯ, ಆಯ್ಕೆ ಮತ್ತು ಆಧುನಿಕತೆ ಎಂದು ಬಿಂಬ...
Madam can I have ur contact details I want some legal suggestions regarding ancestral properties
ReplyDelete