Posts

Talk in News 1st TV

Image
 ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಎಂದು ಬ್ರಹ್ಮಚಾರಿಗಳು ಬಯಸಿಯೂ ಹೆಣ್ಣು ಸಿಗದೆ ಒಂಟಿ ಕಣ್ಣಲ್ಲಿ ಅಳುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂದು News 1st TV ಯವರು ಮೊನ್ನೆ (18-06-2023) ಕೇಳಿದಾಗ ಇಷ್ಟು ಹೇಳಿದೆ. ಸಮಯ ಆದಾಗ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.  https://youtu.be/X8S5pnXQJDc

Special Markets of Chirapunji

Image
    ಮನೆಯಿಂದ ಹೊರಟಾಗ ಚಿರಾಪುಂಜಿ ಎಂದರೆ ಪ್ರೈಮರಿ ಶಾಲೆಯಲ್ಲಿ ಹೇಳಿಕೊಟ್ಟಿದ್ದಂತೆ ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎನ್ನುವುದು ಮಾತ್ರ ತಲೆಯಲ್ಲಿ ಇತ್ತು.   ಶಿಲ್ಲಾಂಗ್ನಿಂದ ಒಂದುವರೆ ಗಂಟೆಯ ಪ್ರಯಾಣ ಮಾತ್ರ ಎಂದಾಗ ಖುಷಿಯೋ ಖುಷಿ. ಹೋಗ್ತಾನೇ ಇದ್ದರೂ ಎಲ್ಲೂ ಚಿರಾಪುಂಜಿ ಅಂತ ಬೋರ್ಡ್ ಕಾಣದೆ ಚಾಲಕ ಬುರಿತ್ ಧೊತ್‍ದಾಂಗ್‍ನನ್ನು ಕೇಳಿದೆ. “ನೀವೀಗ ಚಿರಾಪುಂಜಿಯಲ್ಲಿಯೇ ಇದ್ದೀರ” ಎಂದ. ಹೌದು, ಚಿರಾಪುಂಜಿಯ ಮೂಲ ಹೆಸರು ಸೋಹ್ರಾ. ನಾಲಿಗೆ ಹೊರಳದ ಬ್ರಿಟೀಷರು ಚಿರಾಪುಂಜಿ ಎಂದಿದ್ದಾರೆ. ಇಂದಿಗೂ ಇಲ್ಲಿನ ಜನ ಸೋಹ್ರಾ ಎಂತಲೇ ಕರೆಯುವುದು. ಇಲ್ಲಿ ಈಗ ಪುಸ್ತಕಗಳಲ್ಲಿ ಓದಿದ ಹಾಗೆ ಮಳೆ ಬರುವುದಿಲ್ಲ. ಖಸಿ ಬೆಟ್ಟಗಳ ಸಾಲಿನ ನಟ್ಟನಡುವೆ ಹಸಿರಾಡುತ್ತಾ ಇರುವ ಈ ಊರಿಗೆ ಬೇಸಿಗೆಯ ಧಾಳಿ ಆಗಿದೆ. ಹೆಚ್ಚಿದ ಗಣಿಗಾರಿಕೆಗೆ ಮಳೆ ಬೆಚ್ಚಿಬಿದ್ದಿದೆ. ಫ್ಯಾನ್ ಇಲ್ಲದೆ ಇರಲು ಕಷ್ಟ ಎನ್ನುವಷ್ಟೇ ಬಿಸಿ ಏರಿಬಿಟ್ಟಿದೆ.   ಇನ್ನೂ ಅರ್ಧ ದಿನ ಸಮಯ ಇತ್ತು ಕತ್ತಲಾಗಲು. ಸ್ಥಳೀಯರು ಹೋಗುವ ಮಾರುಕಟ್ಟೆಗೆ ಹೋಗುವುದು ನನಗೆ ಬಲು ಅಚ್ಚುಮೆಚ್ಚು. ಹೊರಟಾಗ “ಇವತ್ತು ಮಾರುಕಟ್ಟೆ ಇಲ್ಲ, ನಾಳೆ ಇದೆ” ಎಂದ ಸೆರಿನಿಟಿ ಟ್ರ್ಯಾವೆಲೆರ್ಸ್ ಇನ್ನ್ ತಂಗುದಾಣದ ಮಾಲೀಕ ಮಿಚೇಲ್. “ಅರೆ, ಅದೇನು ಸಂತೆಯೇ ನಿಗಧಿತ ದಿನದಲ್ಲಿ ಇರಲು” ಎನ್ನುವ ಪ್ರಶ್ನೆಗೆ ಅಲ್ಲಿದ್ದವರೆಲ್ಲಾ ಕೊಟ್ಟ ವಿವರ ಆಸಕ್ತಿದಾಯಕವಾಗಿತ್ತು. ಬೆಳಿಗ್ಗೆ ಹತ್ತು ಗಂ...

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

Image
  ಎರಡನೆಯ ಬಾರಿಗೆ ಈ ಮಕ್ಕಳನ್ನು ರಸ್ತೆಯಲ್ಲಿ ಸಿಕ್ಕರು ಎನ್ನುವ ಕಾರಣಕ್ಕೆ ಪೋಲೀಸರು ತಂದು ನಿಲ್ಲಿಸಿದ್ದರು. ಕಂಕುಳಲ್ಲಿ ಒಣಗಿದ ಪಿಳ್ಳೆಯೊಂದನ್ನು ಎತ್ತಿಕೊಂಡು, ಸಿಂಬಳ ಸುರಿಸುತ್ತಾ ತಪ್ಪು ಹೆಜ್ಜೆ ಇಡುತ್ತಿದ್ದ ಇನ್ನೊಂದು ಮಗುವೊಂದನ್ನು ದರದರ ಎಳೆದುಕೊಂಡು ಅಳುತ್ತಾ ಬಂದು ನಿಂತಳು ತಾಯಿ. ಗಂಡನನ್ನು ಕರೆದುಕೊಂಡು ಬರಲು ತಾಕೀತು ಮಾಡಲಾಯಿತು. ಅದೇ ಸ್ಥಿತಿಯಲ್ಲಿ ಇಬ್ಬರೂ ಬಂದು ನಿಂತರು. ಹಿಂದಿನ ರಾತ್ರಿ ಅವನು ಮದ್ಯದಲ್ಲಿ ಮಿಂದೆದ್ದಿದ್ದ ಎನ್ನುವುದರಲ್ಲಿ ಅನುಮಾನವೇ ಇರಲಿಲ್ಲ. ಸಿಟ್ಟು ನೆತ್ತಿಗೇರಿತು. “ಸಾಕಲು ಯೋಗ್ಯತೆ ಇಲ್ಲದಿದ್ದ ಮೇಲೆ ಅದ್ಯಾಕೆ ಮಕ್ಕಳು ಮಾಡಿಕೊಳ್ಳುತ್ತೀರ? ಏನಮ್ಮ ನಿನಗೆ ನಾಚಿಕೆ ಆಗಲ್ಲ್ವಾ?” ಅಂತ ಜೋರು ದನಿ ಮಾಡಿದೆ. ಕೂಡಲೇ ಗೊಳೋ ಅಂತ ಅವಳ ದನಿ ನನ್ನದಕ್ಕಿಂತ ದುಪ್ಪಟ್ಟಾಯ್ತು. “ನಾಚಿಕೆ ಏನ್ ಮೇಡಂ ಜೀವನಾನೇ ಸಾಕಾಗಿದೆ. ಈ ಮಕ್ಕಳಿಗೆ ಅನ್ನಕ್ಕೆ ಒಂದು ದಾರಿ ಮಾಡಿ ಕೊಡಿ ನೀವು ಇವನನ್ನೂ ಬಿಟ್ಟು ಎಲ್ಲಾದರು ಹೋಗಿ, ದುಡ್ಕೊಂಡು ತಿನ್ನ್ಕೋತೀನಿ” ಎನ್ನುತ್ತಾ ಅಳು ಮುಂದುವರೆಸಿದಳು. ಆರು ವರ್ಷಗಳ ಹಿಂದೆ ಮದುವೆಯಾದವಳ ಗಂಡ ಕುಡುಕ. ಎರಡು ಹೆಣ್ಣು ಮಕ್ಕಳನ್ನು ಕೈಗಿತ್ತು ಅಪಘಾತದಲ್ಲಿ ಸತ್ತಿದ್ದ. “ಗಂಡು ದಿಕ್ಕಿಲ್ಲದೆ ಹೆಂಗೆ ಬಾಳ್ವೆ ಮಾಡೋದು ಮೇಡಂ” ಎಂದಳು. ಅದಕ್ಕೇ ಹೀಗೆ ಮುಂದೆ ನಿಂತಿದ್ದವನನ್ನು ಮದುವೆಯಾಗಿದ್ದಳು. “ ಇವನಿಗೆ ಅವರಪ್ಪ ಕೊಟ್ಟಿರೋ ಮನೆ ಇದೆ ಮೇಡಂ. ನೀನು ಮಕ್ಕಳನ್ನು ನೋಡಿಕೊಂಡು ...

ಮಹಿಳೆ - Woman as leader in ವಿಜಯಕರ್ನಾಟಕ

Image

ಹಂದಿಜೋಗಿ ರಾಮಕ್ಕ ಭೇಟಿ - Meet with Handijogi Ramakka

Image
 ನಮ್ಮ ಭೇಟಿಯಲ್ಲಿ ಹಂದಿ ಜೋಗಿ ರಾಮಕ್ಕ ಹೇಳಿದ್ದು ಹಾಡಿದ್ದು.... ಆಕೆಯ ಕೈಯಲ್ಲಿ ಇರುವುದು ಅವರ ದೇವರಂತೆ. ಬೆಳ್ಳಿ ನಾಣ್ಯದ ಮೇಲೆ ಬೋಳು ತಲೆಯಂತಹ ಆಕೃತಿ. ಅವರುಗಳು ನಮ್ಮ ಹಾಗೆ ಬೇರೆ ವಿಗ್ರಹಗಳ ಆರಾಧಕರಲ್ಲ. (ಈಗ ಬಹಳ ಬದಲಾಗಿದ್ದಾರೆ). ಅವರ ದೇವರುಗಳು ಯಾವಾಗಲೂ ಪೆಟ್ಟಿಗೆಯಲ್ಲಿ ಭದ್ರ. ವರ್ಷಕ್ಕೊಮ್ಮೆ ಯುಗಾದಿಯ ದಿನ ಹೊರ ತೆಗೆದು ಪೂಜಿಸುತ್ತಾರೆ. ಪ್ರತೀ ಮದುವೆಯಲ್ಲೂ ಮನೆತನದ ಆಸ್ತಿಯಾಗಿ ಇದನ್ನು ಮುಂದಿನವರಿಗೆ ಕೊಡುತ್ತಾರಂತೆ. ಇವರುಗಳು ಹಂದಿಗಳಿಗಾಗಿ ಜೀವ ಕೊಡುತ್ತಾರೆ. ಒಟ್ಟಿಗೆ ಮಲಗುತ್ತಾರೆ, ಒಂದೇ ತಾಟಿನಲ್ಲಿ ಉಣ್ಣುತ್ತಾರೆ. ಕಳೆದ ಅದೆಷ್ಟೋ ತಲೆಮಾರುಗಳಿಂದ ಖಾಯಿಲೆಯಿಂದ ಯಾರೂ ಸತ್ತಿಲ್ಲ ಅವರ community ಯಲ್ಲಿ, ಅದಕ್ಕೆ ಹಂದಿಯೆ ಕಾರಣ ಎಂದು ನಂಬುತ್ತಾರೆ. ಈಕೆಯOತೂ ತನ್ನ ಹಂದಿಗಳನ್ನು ಶುಚಿತ್ವ ಆರೋಗ್ಯ ಅಂತೆಲ್ಲಾ ಕಾರ್ಪೊರೇಷನ್ ಅವರು ಹೊಡೆದುಕೊಂಡು ಹೋದಾಗ್ಲಿಂದ ಇಡೀ communityಗಾಗಿ ಹೋರಾಟ ಮಾಡುತ್ತಿದ್ದಾರೆ. ಒಂದು ಹಂದಿ ಎಷ್ಟು ಬೆಲೆ ಬಾಳುತ್ತದೆ, ಹೀಗೆ ವಕ್ಕಲೆಬ್ಬಿಸುವ ಹಿಂದೆ ಇರುವ ರಾಜಕೀಯ ಎಲ್ಲವನ್ನೂ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ. ಇವರ ಮಕ್ಕಳುಗಳನ್ನು ಶಾಲೆಗೆ ತರಲು ಕಾರ್ಯಕರ್ತರು ಹರಸಾಹಸ ಪಟ್ಟಿದ್ದಾರೆ. ಬಾಣಂತಿಗೆ ಗುಡಿಸಲಿನಿಂದ ಹೊರಗೆ ಗುಡ್ಲು ಹಾಕುವುದು ಸೇರಿ ಇನ್ನೂ ಕೆಲವು ವಿದ್ಯಾವಂತರಿಗೆ ಒಗ್ಗದ ಸಂಪ್ರದಾಯಗಳು ಈಗಲೂ ಮುಂದುವರೆಯುತ್ತಿವೆ. ನಾನು ಹೋದಾಗ ಒಂದು ಗುಡ್ಲಿನ ಮುಂದೆ ಮೂರು ದಿನದ...

On Jeans Talk book

Image
 ವಿಜಯಕರ್ನಾಟಕ ಪತ್ರಿಕೆಯಲ್ಲಿ ಸತತವಾಗಿ 180 ವಾರಗಳು ಬರೆದ ಅಂಕಣ " ಜೀನ್ಸ್ ಟಾಕ್ "  ಮೊದಲ 40 ಅಂಕಣಗಳ ಪುಸ್ತಕದ ಬಗ್ಗೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ಡಾ ನಾ ಸೋಮೇಶ್ವರ ಅವರು ವಿವರವಾಗಿ 4 ನಿಮಿಷಗಳ ಅಭಿಪ್ರಾಯ ತಿಳಿಸಿದ್ದಾರೆ. ದಯವಿಟ್ಟು ಕೇಳಿ. ಪುಸ್ತಕ ಬೇಕಿದ್ದಲ್ಲಿ ಕಾಮೆಂಟ್ ನಲ್ಲಿ ತಿಳಿಸಿ.🙏

Award for Travelogue ಬೆಳಕಿನ ಸೆರಗು

Image
  ಅರುಣಾಚಲ ಪ್ರದೇಶದ ಬಗ್ಗೆ ಪ್ರವಾಸಕಥನ " ಬೆಳಕಿನ ಸೆರಗು" ಪುಸ್ತಕಕ್ಕೆ ಕರ್ನಾಟಕ ಲೇಖಕಿಯರ ಸಂಘದಿಂದ ನೀಡಿದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನದ ಸಂದರ್ಭ.

About Sandipani ashram

Image
ಇವತ್ತಿನ ಆಂದೋಲನ ಪತ್ರಿಕೆಯಲ್ಲಿ...ಓದಿ ಅಭಿಪ್ರಾಯ ತಿಳಿಸಿ 🙏  ’ಊಟಾ ಊಟಾ’ ಎಂದು ಹಪಹಪಿಸುತ್ತಿದ್ದವಳನ್ನು ಚಾಲಕ ಪವನ್ “ಏನ್ಮೇಡಂ ನಿಮ್ಮಂಥವರು ಜ್ಞಾನದ ಭೂಕ್ (ಹಸಿವು) ಅನ್ನಬೇಕು ಅದು ಬಿಟ್ಟು ಹೀಗೆ ಊಟಾ ಊಟಾ ಅನ್ನುತ್ತಿದ್ದಿರಲ್ಲ” ಎಂದು ರೇಗಿಸುತ್ತಾ ಗಾಡಿಯನ್ನು ರೋಂಯ್ ಅಂತ ನಿಲ್ಲಿಸಿ, ಇಳಿಯಲು ಹೇಳಿದ. ಪಕ್ಕದ ಕಾಂಪೌಂಡಿನ ದೊಡ್ಡ ಕಮಾನಿನ ಮೇಲೆ ಬರೆದಿತ್ತು ’ಮಹರ್ಷಿ ಸಾಂದಿಪನಿ ಆಶ್ರಮ್”. ಕೃಷ್ಣ, ಬಲರಾಮ, ಸುಧಾಮ ಓದಿದ ಗುರುಕುಲ. ನಾನೋದಿದ ಮೈಸೂರಿನ ಶಾಲೆ ಅವಿಲಾ ಕಾನ್ವೆಂಟಿನ ಮುಖ್ಯ ಗೇಟಿನ ಕಮಾನೂ ಹೀಗೇ ಇತ್ತು. ಎಲ್ಲಾ ಶಿಕ್ಷಕರೂ ನಿಸ್ಪೃಹವಾಗಿ ನನ್ನನ್ನೂ ಕೃಷ್ಣನ ಅರ್ಧದಷ್ಟಾದರೂ ಜಾಣೆ ಮಾಡಬೇಕೆನ್ನುವ ಪ್ರಯತ್ನ ನಡೆಸಿ ಸೋತಿದ್ದನ್ನು ನೆನೆಸಿಕೊಂಡೇ ಒಳಹೊಕ್ಕೆ. ಉಜ್ಜನಿಯ ಸಾಂದಿಪನಿ ಆಶ್ರಮದಲ್ಲಿ ಆ ದಿನ ಹೆಚ್ಚಿನ ಜನರಿರಲಿಲ್ಲ.  ಕುಟಿರಾಕಾರದ ಸಿಮೆಂಟಿನ ಅಂಗಳದೊಳಗಿನ ಗೋಡೇಗಳ ಮೇಲೆಲ್ಲಾ ಕೃಷ್ಣ ಕಲಿತ ಹದಿನಾಲ್ಕು ವಿದ್ಯೆಗಳನ್ನು ಬಣ್ಣಬಣ್ಣದಲ್ಲಿ ರಚಿಸಿದ್ದಾರೆ. ಗಾಢ ಬಣ್ಣಗಳು ಈಗಿನ ಆಧುನಿಕ ಶಾಲೆಗಳನ್ನು ಹೋಲುತ್ತಿದ್ದರೂ ಕೃಷ್ಣಭಾವ ಕೊಡುವುದರಲ್ಲಿ ಸೋಲುವುದಿಲ್ಲ. ಆ ಕೋಣೆಯ ದೊಡ್ಡ ಆಕರ್ಷಣೆ ಎಂದರೆ ಗಿರಿಧಾರಿ ಕಲಿತನೆನ್ನಲಾದ ಹದಿನಾಲ್ಕು ವಿದ್ಯೆಗಳು ಯಾವುವು ಎನ್ನುವ ಪಟ್ಟಿಯೊಂದನ್ನು ಬಾಗಿಲಿನ ಹಿಂದಿನ ಗೋಡೆಯ ಮೇಲೆ ತೂಗು ಹಾಕಿರುವುದು. ನಾಲ್ಕು ವೇದಗಳು, ಕಲ್ಪಗಳು, ತಂತ್ರಜ್ಞತೆ, ವ್ಯಾಕರಣ, ಪುರಾಣ, ಜ್ಯೋತ...

Women's day at Samrakshana

Image
 ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಜೂಗನಹಳ್ಳಿ, ರಾಜಾಜಿನಗರ ಇಲ್ಲಿ ಸಂರಕ್ಷಣಾ ಸಂಸ್ಥೆಯವರು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಈ ದಿನ.... ಕಳೆದ ಬಾರಿ ಅಲ್ಲಿಗೆ ಹೋಗಿದ್ದಾಗ ಮಕ್ಕಳಿಗೆ ಒಂದು ಗಿಡ ಕೊಟ್ಟು ಇದನ್ನು ಚೆನ್ನಾಗಿ ಬೆಳೆಸಿ, ಬಂದು ನೋಡುತ್ತೇನೆ ಎಂದು ಹೇಳಿದ್ದೆ, ಮರೆತಿದ್ದೆ. ಈ ದಿನ ಚಿಲ್ಟಾರಿಗಳು ತಾವೇ ಕೈ ಹಿಡಿದು ಕರೆದುಕೊಂಡು ಹೋಗಿ ನಳನಳಿಸುತ್ತಿದ್ದ ಗಿಡ ತೋರಿಸಿ ಕುಣಿದರು. ಹೌದಲ್ಲ, ಅಕ್ಷರ ಗಿಡ ಎರಡೂ ಅಕ್ಕರೆ ತೋರಿದಷ್ಟೂ ನಮ್ಮವೇ ಆಗುತ್ತಾ ಹೋಗುವ ಪರಿ ಚಂದ, ಚಂದ ಥೇಟ್ ಮಕ್ಕಳಂತೆ. 12-03-2023 #FamilyCourtಕಲಿಕೆ

On Period leave

Image
  ಅವತ್ತು ಎವಿಡೆನ್ಸ್ ಆಕ್ಟ್ ನ ಅಂತಿಮ ಪರೀಕ್ಷೆ. ಈ ಬಾರಿ ಅವನಿಗಿಂತ ಎರಡಾದರೂ ಮಾರ್ಕ್ಸ್ ಹೆಚ್ಚು ತೆಗೆಯಲೇ ಬೇಕು ಎಂದುಕೊಂಡು ಓದಿದ್ದೆ. ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ವಿಸ್ಪರ್ ಧರಿಸಿಯೇ ಹೋಗಿದ್ದೆ. ಅದು ಶುರುವಾಗುವಷ್ಟರಲ್ಲಿ ಪರೀಕ್ಷೆ ಮುಗಿದಿರತ್ತೆ ಎನ್ನುವ ಹರೆಯದ ಹುಮ್ಮಸ್ಸಿನ ನಂಬಿಕೆ. ಬರೆಯಲು ಶುರು ಮಾಡಿ 20 ನಿಮಿಷವೂ ಇಲ್ಲ ಶುರುವಾಯ್ತು ಬೊಳಕ್ಬೊಳಕ್! ಆ ದಿನಗಳಲ್ಲಿ ಬಹಳ ಹೊಟ್ಟೆನೋವು ಬರುತ್ತಿತ್ತು, ಕಣ್ಣ್ಕತ್ತಲಿಡುತ್ತಿತ್ತು. ಕೈಕಾಲು ತಣ್ಣಗಾಗುತ್ತಿದ್ದವು, ಒದ್ದಾಡಿ ಒದ್ದಾಡಿ ಒದ್ದಾಡಿದ ನಂತರ ವಾಂತಿ ಆಗುತ್ತಿತ್ತು. ಕೂಡಲೇ ನಾನಾಗ ಪೊರೆ ಕಳಚಿದ ಹಾವು, ಸರಬರನೆ ನನ್ನ ಬಿಟ್ಟರೆ ಜಗತ್ತಿಲ್ಲ ಎಂದು ಎದ್ದು, ಕೂತು, ಓಡಿ ಹಾರಾಡುತ್ತಿದ್ದೆ. ಬರೆಯುತ್ತಿದ್ದ ಹಾಳೆ ಮೇಲೆ ಪೆನ್ನು ದಬಕ್ ಅಂತು. ಕಣ್ಣು ಮೇಲ್ಮೇಲಾಗುತ್ತಿದೆ. “ಸರ್, ನನಗೆ ಬ್ರೇಕ್ ಬೇಕು “ ಎಂದಿದ್ದಷ್ಟೇ ಧೊಪ್ಪ್ ಅಂತ ಬಿದ್ದೆ. ಮುಂದಿನ ಕ್ಷಣದಲ್ಲಿ ಪಕ್ಕದಲ್ಲಿಯೇ ಇದ್ದ ಸ್ಟ್ಯಾಫ್ ರೂಮ್‍ನ ನೆಲದ ಮೇಲಿನ ಹಾಸಾಗಿದ್ದೆ. ಸಹಾಯಕ ಪ್ರಭುಸ್ವಾಮಿ ನೀರು ಕೊಡುತ್ತಿದ್ದ. ಸಿದ್ದ್ಲಿಂಗು ಪಪ್ಪನಿಗೆ ಫೋನ್ ಮಾಡುತ್ತಿದ್ದ. ಪೊಲಿಟಿಕಲ್ ಸೈನ್ಸ್ ಅಧ್ಯಾಪಕ ರಾಜಣ್ಣ ಅವರು “ಈಗಿನ ಕಾಲದ ಹುಡುಗೀರು ಪೀರಿಯಡ್ಸ್ ಮುಂದೂಡಲು ಏನೇನೋ ಮಾತ್ರೆ ತೊಗೋತಾರೆ ಅದಕ್ಕೆ ನೋಡಿ ಹೀಗೆಲ್ಲಾ ಆಗತ್ತೆ” ಎಂದು ಹೇಳುತ್ತಿರೋದು ಕೇಳಿಸುತ್ತಿದೆ. “ಇಲ್ಲಾ ಇಲ್ಲಾ ಇಲ್ಲ ನಾನು ಮಾತ್...

Child Rights Trust

Image
 ಮಕ್ಕಳ ಹಕ್ಕುಗಳು ಎಂದರೆ ಅತ್ಯವಶ್ಯಕವಾಗಿ ಹಾಗೂ ಅನಿವಾರ್ಯವಾಗಿ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿಗೆ ಬರುವುದು ಸಿಆರ್‌ಟಿ Child Rights Trust - ಈ ಸಂಸ್ಥೆಯ ಒಡನಾಟವನ್ನು ಇಟ್ಟುಕೊಳ್ಳುತ್ತಾ, ಇದರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಆಸೆಗೂ ದುರಾಸೆಗೂ ನಡುವೆ ಇರುವ ತೆಳುವಾದ ಗೆರೆಯನ್ನು ಕಡೆಗಣಿಸಿ, " ಇಂತಹ ಒಂದು ಸಂಸ್ಥೆ ನನ್ನದಾಗಬೇಕು" ಎನ್ನುವ ಕನಸನ್ನು ಮೌನದಲ್ಲಿಯೆ ಕಂಡಿದ್ದೆ. ಬ್ರಹ್ಮಾಂಡಕ್ಕೆ ಕೇಳಿಸಿರಬೇಕು ಆ ಕನಸು. ಅದಕ್ಕೇ ಇರಬೇಕು ಈ ಕ್ಷೇತ್ರದಲ್ಲಿ ನನ್ನ ಗುರುಗಳು ಮಾರ್ಗದರ್ಶಕರು ಆದ ಡಾಕ್ಟರ್ ವಾಸುದೇವ ಶರ್ಮಾ ಅವರು ನನ್ನನ್ನು ಅತ್ಯಂತ ವಿಶ್ವಾಸದಿಂದ, ಕೆಲವು ತಿಂಗಳುಗಳ ಹಿಂದೆಯಿಂದ CRT ಯ ಟ್ರಸ್ಟೀ ಮಾಡಿಕೊಂಡಿದ್ದಾರೆ. ತಿಂದುಂಡ ಮನೆಗೆ ಧನ್ಯವಾದ ಹೇಳಲು ಪದಗಳದ್ದು ಅದೆಷ್ಟು ಕೃಪಣತೆ!   ಭಾರತದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ತನ್ನನ್ನು ವಿಭಿನ್ನವಾಗಿ, ವಿಶೇಷವಾಗಿ ಗುರುತಿಸಿಕೊಂಡಿರುವ CRT "ಎಲ್ಲಾ ಮಕ್ಕಳಿಗೂ ಎಲ್ಲಾ ಹಕ್ಕುಗಳು" ಎನ್ನುವ ಧ್ಯೇಯದೊಂದಿಗೆ ಮಕ್ಕಳ ಹಕ್ಕುಗಳಿಗೆ ಕರ್ನಾಟಕದಲ್ಲಿ ತಂದೆಯ ಬೆಂಬಲ, ತಾಯಿಯ ಮಿಡಿತ ನೀಡುತ್ತಾ ಬಂದಿದೆ.  ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಹೆಣ್ಣು ಮಕ್ಕಳನ್ನು ದೇವದಾಸಿ ಪದ್ಧತಿಯಿಂದ ಹೊರಗೆ ತರುವುದು, ಬಾಲ್ಯ ವಿವಾಹಕ್ಕೆ ಒಳಗಾದ ಹದಿಹರಿಯದ ಹೆಣ್ಣು ಮಕ್ಕಳ ಪೋಷಣೆ ಮತ್ತು ಪೌಷ್ಟಿಕಾಂಶ ಹಾಗೂ ಇತರೆ ಅಭಿವೃದ...

March ಮತ್ತು ಮಹಿಳೆ

Image
 ಮಾರ್ಚ್ ಎಂದರೆ ಹೀಗೆ, ಬರಿ ಮಾತು ಪೂರ್ತೀ ತಿಂಗಳು.Hope this too would help someone , somewhere. ಮಹಿಳಾ ದಿನಾಚರಣೆಗೆ ಅರ್ಥ ಬರಲಿ, ಬಲ ತಾಗಲಿ 🌻

Legal awareness JJ Nagar

Image
 ಒಬ್ಬ ಪೊಲೀಸ್ ಅಧಿಕಾರಿ ತನ್ನ ವ್ಯಾಪ್ತಿ ಪ್ರದೇಶದ ಮುಖ್ಯ ಸಮಸ್ಯೆಯನ್ನು ಗುರುತಿಸಿ ಅದರ ಬಗ್ಗೆ ಅಲ್ಲಿನ ಹದಿಹರೆಯದವರಿಗೆ ಕಾನೂನು ಅರಿವು ಮೂಡಿಸುವಂತಹ ಕಾರ್ಯಕ್ರಮ ಏರ್ಪಡಿಸಲು, ಇಲಾಖೆ ಮಟ್ಟದಲ್ಲಿ, ಸಮುದಾಯದೊಡನೆ ಎಷ್ಟೆಲ್ಲಾ ಕೆಲಸ ಮಾಡಿರಬೇಕು ಮತ್ತು ನಿಜಾರ್ಥದಲ್ಲಿ ಸಮಾಜದ ಬಗ್ಗೆ ಅದೆಷ್ಟು ಕಾಳಜಿ ಇಟ್ಟುಕೊಂಡಿರಬೇಕು. JJ ನಗರ , ಬೆಂಗಳೂರು ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ಇಂದಿಗೂ ಇರುವ ದೊಡ್ಡ ಸಮಸ್ಯೆ ಎನ್ನುವುದನ್ನು ಅನುಭವದ ಮೂಲಕ ಕಂಡುಕೊಂಡಿರುವ ಸಬ್ ಇನ್ಸ್ಪೆಕ್ಟರ್ ಲೋಕೇಶ್.ಕೆ ಇವರು ಈ ದಿನ 250ಕ್ಕೂ ಹೆಚ್ಚು ಜನರಿಗೆ ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಿದ್ದರು. ಇದು ತುರ್ತಾಗಿ ಎಲ್ಲಾ ಠಾಣಾ ವ್ಯಾಪ್ತಿಯಲ್ಲೂ ಆಗಬೇಕಾದ ಕೆಲಸ. ಸಬ್ ಇನ್ಸ್ಪೆಕ್ಟರ್ ಲೋಕೇಶ್. ಕೆ ಹಾಗೂ PSI ಹನುಮಂತಪ್ಪ ಇವರುಗಳಿಗೆ ಧನ್ಯವಾದ ಹೇಳಲೇಬೇಕು. ಇದರ ಜೊತೆಗೆ ಜವಾಬ್ದಾರಿಯನ್ನು ಹೆಚ್ಚಿಸಿದ ಮತ್ತೊಂದು ವಿಷಯ; ಸಯದ್ ಮೈಮೂನ ಎನ್ನುವ ಮಹಿಳೆಯೊಬ್ಬರು " ನಿಮ್ಮ ಬ್ಲಾಗ್ ಅನ್ನು ಎಲ್ಲಾ ಬರಹಗಳನ್ನು ನಾನು follow ಮಾಡ್ತೀನಿ. ಇವತ್ತಿನ ಲೇಖನವನ್ನೂ ಓದಿದೆ" ಎಂದು ಹೇಳಿದ್ದು. ಜನರ ನಡುವೆ ಇರುವುದು ನಿತ್ಯವಾದಷ್ಟೂ ಹೊಣೆಗಾರಿಕೆ ಮಾತ್ರ ಅಲ್ಲ ಮನುಷ್ಯ ಪ್ರೀತಿಯೂ ಹೆಚ್ಚಾಗುತ್ತದೆ ಎಂದು ತೋರಿಸಿಕೊಟ್ಟ ಇಂತಹ ದಿನಗಳು ಎಲ್ಲರ ಬದುಕಿನಲ್ಲೂ ಹೆಚ್ಚಾಗಬೇಕು. 27-02-2023

Gandhi in Gadag

Image
  ಇಳಿದುಕೊಂಡಿದ್ದ ಅತಿಥಿಗೃಹದಿಂದ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ಹತ್ತಿರ ಹತ್ತಿರ ಒಂದೂವರೆ   ಕಿಲೋಮೀಟರ್ಗಳ ದೂರ. ಸುತ್ತಲೂ ಕೆಮ್ಮಣ್ಣಿನ ಒಣ ಬಯಲು, ನೆತ್ತಿಯ ಬೈತಲೆಯಂತೆ ಕಡೆದಿದ್ದ ಮಣ್ಣಿನ ಡೊಂಕು ಸಪೂಟು ರಸ್ತೆ.   ಹೆಜ್ಜೆಗಳು ನೀರೆತ್ತುವ ಏತದಂತೆ ಏರಬೇಕಿತ್ತು ಅಷ್ಟೇ. ಬೆಂಗಳೂರಿನಲ್ಲಿ ಆಗತಾನೆ ಹುಟ್ಟುತ್ತಿದ್ದ ಸೂರ್ಯ ಅಲ್ಲಾಗಲೇ ಶಾಖವಾಗಿಬಿಟ್ಟಿದ್ದ. ಸೆರಗ ಹೊದ್ದು ಸರಸರನೆ ನಡೆವಾಗ ಸಭಾಂಗಣಕ್ಕೆ ಇಪ್ಪತ್ತು ಹೆಜ್ಜೆ ಮೊದಲೇ ಕಂಡ ಬೋರ್ಡಿನಲ್ಲಿತ್ತು ’ಸಾಬರಮತಿ ಆಶ್ರಮ’. ಹೆತ್ತೂರಿಂದ ವಿದೇಶದವರೆಗೂ ಕಂಡಿದ್ದ ಪುಣ್ಯಾತ್ಮ ಇಲ್ಲೂ ಕಂಡಿದ್ದ. ಆಸಕ್ತಿ ಬಿಸಿಲಿನಂತೆಯೇ ಏರುತ್ತಿತ್ತು. ಕಾರ್ಯಕ್ರಮದ ಸಮಯ ಬಂದಿತ್ತು. ಹಿಂದಿರುಗುವ ಮೊದಲು ಇಲ್ಲಿನ ಗಾಂಧಿಯ ಭೇಟಿ ಆಗಲೇ ಬೇಕು ಎಂದುಕೊಂಡು ಮುಂದೆ ಹೋದೆ.          ಆ ದಿನ ಮಕ್ಕಳ ಹಕ್ಕುಗಳ ಗ್ರಾಮಸಭೆ, ಪರಿಣಾಮಕಾರಿ ಆಯೋಜನೆ ಮತ್ತು ಜಾರಿ ಕುರಿತು ಕರ್ನಾಟಕ   ರಾಜ್ಯ ಮಟ್ಟದ ಸಮ್ಮೇಳನವನ್ನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇವರು ಆಯೋಜಿಸಿದ್ದರು. ಉಪಸ್ಥಿತಿಗಾಗಿ ಹೋಗಿದ್ದೆ. ಮಾತುಕತೆಗಳಲ್ಲಿ ಕುಲಪತಿ ಪ್ರೊ.ವಿಷ್ಣುಕಾಂತ್ ಎಸ್ ಚಟಪಲ್ಲಿ ಅವರು “ಬೆಳಗಿನ ಭಜನೆಗೆ ನೀವು ಬರುತ್ತೀರ ಎಂದುಕೊಂಡಿದ್ದೆ” ಎಂದಾಗ ಅಲ್ಲಿನ ಸಾಬರಮತಿಯ ಬಗೆಗಿನ ಕುತೂಹಲ ಮತ...

Child marriage prevention Lecture in Tumakur a report

Image
 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರು, ಇವರು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮದಲ್ಲಿ, ಬಾಲ್ಯವಿವಾಹ ನಿಷೇಧ ಕುರಿತು ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ ಬಳಿ 9ನೇ ತರಗತಿಯ ಇಬ್ಬರು ಬಾಲಕಿಯರು ಬಂದು " ನಿಮ್ಮ ಮಾತು ಕೇಳುತ್ತಿರುವಾಗ I went little emotional " ಎಂದು ಹೇಳಿದ್ದು ದಿನವನ್ನು ಸಾರ್ಥಕ ಗೊಳಿಸಿತ್ತು. ಪತ್ರಿಕಾ ವರದಿ ಇಲ್ಲಿದೆ. 25.02.2023

Reaction on state budget 2023

Image
             ಬಜೆಟ್ ಎಂದರೆ ಹಾಗೆ, ಬಾಯಿ ಹೊಲೆದು ಮೂಗಿಗೆ ತುಪ್ಪ ಸವರೋದು, ಕೈಬೆರಳುಗಳ ತುದಿಗೆ   ಚಾಕಲೇಟನ್ನೂ ಮೆತ್ತುವುದು. ಆದರಲ್ಲೂ ಚುನಾವಣೆ ಎನ್ನುವ ನರಸಿಂಹ ಹೊಸಲಿನ ನಡುವಲ್ಲಿ ಕುಳಿತಿರುವಾಗ ಮಂಡಿತವಾಗುವ   ಬಜೆಟ್ ಕಶ್ಯಪ ಬ್ರಹ್ಮನ ಸುಕುಮಾರನೇ ಸರಿ.    ಎಂದಿನಂತೆ, ಈ ವರ್ಷದ ರಾಜ್ಯ ಆಯವ್ಯಯದಲ್ಲೂ ಹೊಸಹೊಸ ಘೋಷಣೆಗಳಾಗಿವೆ. ಅದು ಎಷ್ಟರ ಮಟ್ಟಿಗೆ ಅನುಮೋದನೆ ಪಡೆದು ಸಮಯಕ್ಕೆ ಸರಿಯಾಗಿ ಜಾರಿಗೆ ಬರಲಿದೆ ಎನ್ನುವುದು ಉತ್ತರವಿಲ್ಲದ ಪ್ರಶ್ನೆ. ಮೊನ್ನೆ ಸಿದ್ದರಾಮಯ್ಯನವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆಜಿ ಉಚಿತ ಅಕ್ಕಿ ಎಂದ ಧ್ವನಿ ಮುಗಿಯುವ ಮೊದಲೇ ಮುಖ್ಯಮಂತ್ರಿಗಳು 6 ಕೆಜಿ ಕೊಡಲು ಮುಂದಾಗಿದ್ದಾರೆ. ಆದರೆ ಕೊನೆ ಮನೆಯ ಒಲೆಯ ಮೇಲೆ ಅಕ್ಕಿ ನೆಮ್ಮದಿಯ ಕುದಿಯಾಗುವವರೆಗೂ ಇದು ರಾಜಕೀಯವಾಗಿ ಬೇಯುವ ಬೇಳೆಯೇ ಹೊರತು ನಿಜಾರ್ಥದ ಸಾಮಾಜಿಕ ನ್ಯಾಯ ಅಲ್ಲ. ಆಸ್ಪತ್ರೆಯಲ್ಲಿ ಮಗು ಹೆತ್ತು ತಮ್ಮತಮ್ಮ ಮನೆಗೆ ಹೋಗಲು ನಲುಗುವ ಬಾಣಂತಿ ಮಗುವಿಗೆ ’ನಗು ಮಗು ವಾಹನ’ ಎನ್ನುವ ಯೋಜನೆ ಅತ್ಯಾವಶ್ಯಕವಾದದ್ದು. ಇದಿಲ್ಲದೆ ಕರೋನಾ ಸಮಯದಲ್ಲಿ ಒದ್ದಾಡಿದ ಜನರನ್ನು ಮರೆಯಲು ಸಾಧ್ಯವೇ ಇಲ್ಲ. ~ಆಸಿಡ್ ಧಾಳಿಯಿಂದ ನೊಂದವರಿಗೆ 3 ಸಾವಿರ ಮಾಸಾಶನವನ್ನು 10 ಸಾವಿರಕ್ಕೆ ಏರಿಸಿರುವುದು ಸ್ವಾಗತಾರ್ಹ ಆದರೆ ಅವರುಗಳ ಶಸ್ತ್ರಚಿಕಿತ್ಸೆಗೆ ನೀಡುತ್ತಿರುವ...

Traing to CMPOs of Tumkur and Bengaluru Urban

Image
  ದಿನಾಂಕ 6 ಜನವರಿ 2023 ರಂದು ತುಮಕುರು ಜಿಲ್ಲೆಯ ಬಾಲ್ಯವಿವಾಹ ತಡೆಗಟ್ಟುವಿಕೆ ಅಧಿಕಾರಿಗಳಿಗೆ ಕಾನೂನು ಮತ್ತು ನಿಗಧಿತ ಪ್ರಕ್ರಿಯೆ ಬಗ್ಗೆ ತರಬೇತಿ ಕೊಟ್ಟೆ. ಬಾಲ್ಯವಿವಾಹ 0% ಆದರೆ ನೀವುಗಳು ತೆಗೆದು ಕೊಳ್ಳುತ್ತಿರುವ ಸಂಬಳಕ್ಕಿಂತ ಒಂದುವರೆ ಪಟ್ಟು ಹೆಚ್ಚಿನ ಸಂಬಳ ಪಡೆಯಬಹುದು ಮತ್ತು ಅದಕ್ಕೆ ನೀವು ಅರ್ಹರಿದ್ದೀರ ಎಂದಾಗ ಅವರುಗಳು ಚಕಿತರಾಗಿದ್ದು ಸುಳ್ಳಲ್ಲ. ಬಾಲ್ಯವಿವಾಹ ಎಂದರೆ ಕೇವಲ ಹೆಣ್ಣು ಮಕ್ಕಳ ದೇಹಕ್ಕೆ ಸಂಬಂಧ ಪಟ್ಟ ವಿಷಯ ಅಲ್ಲ ಈ ದೇಶದ ಆರ್ಥಿಕತೆಗೂ ಸಂಬಂಧ ಪಟ್ಟಿದ್ದಾಗಿದೆ. ಬೆಂಗಳೂರು ನಗರ ಜಿಲ್ಲೆಯ ಬಾಲ್ಯವಿವಾಹ ನಿಷೇಧಾಧಿಕಾರಿಗಳಿಗೆ ಕಾನೂನು ಮತ್ತು ನಿಗಧಿತ ಕಾರ್ಯವಿಧಾನದ ತರಬೇತಿ ಕೊಡುವಾಗ ಹಾಜರಿದ್ದ ಯುವ ಪೊಲೀಸ್ ಒಬ್ಬರು ತರಬೇತಿಯ ಕೊನೆಯಲ್ಲಿ "ಮೇಡಮ್, ನಾನು ಪ್ರೊಬೇಷನರಿಯಲ್ಲಿ ಇದ್ದಾಗ ಒಮ್ಮೆ ನಿಮ್ಮ ಬಳಿ ಫೋನ್ ನಲ್ಲಿ ಮಾತನಾಡಬೇಕಾದ ಸಂದರ್ಭ ಬಂತು. ಆಗ ನಮ್ಮ ಇನ್ಸ್ಪೆಕ್ಟರ್ ಆ ಮೇಡಂ ಜೊತೆ ಎಚ್ಚರಿಕೆಯಿಂದ ಮಾತನಾಡು ಅಂತ ಹೇಳಿದ್ದರು. ಈಗಿನಂತೆ ಆಗಲೂ ನಿಮ್ಮ ಮಾತುಗಳು ನನಗೆ ತುಂಬಾ ಸಹಾಯ ಆಯ್ತು" ಎಂದಾಗ ...... ನಿರಾಸೆ ಎನ್ನುವ ಗಂಧ ಗಾಳಿಯಲ್ಲಿ ತೇಲಿ ಬಂದಾಗ ಇಂತಹ ಘಂ ಎನ್ನುವ ಮಾತುಗಳು ಉಚ್ಛ್ವಾಸ ಆಗಿ ಮತ್ತೆ ಮತ್ತೆ ’ರಸ್ತೆಗೆ’ ಇಳಿಸುತ್ತದೆ. ಮನದ ಭಾವಿಯಿಂದ ನೀರು ಸೇದಿಸುವ ಎಲ್ಲರಿಗೂ ಅದೆಷ್ಟು ಋಣವಿದೆ!