Posts

Showing posts from 2025

Constitution ಮತ್ತು ಮಹಿಳಾ ಚಿಂತನೆ

Image
ಅಂಬೇಡ್ಕರ್ ಮತ್ತು ಮಹಿಳಾ ಚಿಂತನೆ ವಿಷಯದ ಬಗ್ಗೆ 14-04-2025 ಬೆಂಗಳೂರು ಆಕಾಶವಾಣಿಯಲ್ಲಿ ಆಡಿದ ಮಾತುಗಳು.

ಬಾಹ್ಯಾಕಾಶ ಯಾನ Book review

Image
  ಸುನೀತಾ ವಿಲಿಯಮ್ಸ್ ಆಕಾಶದಿಂದ ಭೂಮಿಗೆ ಹಿಂದಿರುಗಿ ಬಂದ ರೋಚಕ ಕ್ಷಣದಿಂದ ಬಾಹ್ಯಾಕಾಶ ವಿಷಯದಲ್ಲಿ ಎಲ್ಲರ ಆಸಕ್ತಿಯೂ ಹೆಚ್ಚಿದೆ ಎನ್ನುವುದರಲ್ಲಿ ಅನುಮಾನವಿಲ್ಲ.  ಬಾಹ್ಯಾಕಾಶ ಪರಿಕಲ್ಪನೆ ಮತ್ತು ವಿಸ್ತಾರ, ರಾಕೆಟ್ ವಿಜ್ಞಾನದ ಇತಿಹಾಸ, ಕಕ್ಷೆಯಲ್ಲಿ ತೂಕ ಇಲ್ಲದಿರುವಿಕೆ ಬಾಹ್ಯಾಕಾಶ ಸ್ಪರ್ಧೆ ಆರಂಭಿಕ ಕಾಲ ಹೇಗಿತ್ತು, ಮಾನವ ಸಹಿತ ಬಾಹ್ಯಾಕಾಶಯಾನಕ್ಕಾಗಿ ನೌಕೆಗಳ ಅಭಿವೃದ್ಧಿಯಾಗಿದ್ದು ಯಾವಾಗ ಮತ್ತು ಹೇಗೆ, ಬಾಹ್ಯಾಕಾಶದ ನಿಲ್ದಾಣ ಎಂದರೇನು, ಬಾಹ್ಯಾಕಾಶದಲ್ಲಿ ಆಘಾತಗಳು ಹೇಗೆ ಆಗುತ್ತವೆ, ಬಾಹ್ಯಾಕಾಶದ ಉಡುಪು ಏನಿರುತ್ತದೆ, ಅಂತರಿಕ್ಷದ ಕಡೆ ನಮ್ಮ ನಡೆಯ ಆರಂಭ ಮತ್ತು ಮುಂದುವರಿಕೆ ಹೇಗೆ, ಮೂಳೆ ಮತ್ತು ಸ್ನಾಯುಗಳ ಮೇಲೆ ಏನೆಲ್ಲಾ ಪರಿಣಾಮಗಳು ಆಗುತ್ತವೆ, ವಿಕಿರಣಗಳ ಪ್ರಭಾವ ಹೇಗೆ, ಬಾಹ್ಯಾಕಾಶದಲ್ಲಿ ಒಟ್ಟಾರೆ ಜೀವನ ಹೇಗಿರುತ್ತದೆ, ಅಂತರಿಕ್ಷದಲ್ಲಿ ಆಹಾರ ಏನು, ಬಾಹ್ಯಾಕಾಶ ನಿರ್ವಹಣೆ ಎಂದರೇನು ಅಂತರಿಕ್ಷದ ಪೂರ್ವ ತರಬೇತಿ ಹೇಗಿರುತ್ತದೆ, ಅಂತರಿಕ್ಷದಲ್ಲಿನ ಪ್ರಯೋಗಗಳು ಹೇಗಿರುತ್ತದೆ ಭವಿಷ್ಯದಲ್ಲಿ ಮಾನವ ಸಹಿತ ಗಗನಯಾನ ಸವಾಲುಗಳು ಮತ್ತು ಸಾಧ್ಯತೆಗಳು ಏನೆಲ್ಲ ಇರಬಹುದು ಹೀಗೆ ಅಂತರಿಕ್ಷಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣವಾದ ವಿವರಣೆ ನೀಡುತ್ತದೆ ಈ ಪುಸ್ತಕ. "ಇದುವರೆಗೂ ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಯಾವುದೇ ಕಾರಣದಿಂದ ಬಾಹ್ಯಾಕಾಶದಲ್ಲಿ ಮೃತರಾದ ಘಟನೆ ನಡೆದಿಲ್ಲ ಇಂತಹ ದುರ್ಘಟನೆ ...

ಸುಖ ಸಂಸಾರಕ್ಕೆ ನೂರು ಎಂಟು ಮಾತುಗಳು

Image
  ಈಗಿನ ಎಲ್ಲಾ ಅನಿಷ್ಟಗಳಿಗೂ ಕುಟುಂಬ ವ್ಯವಸ್ಥೆ ಶಿಥಿಲಗೊಳ್ಳುತ್ತಿರುವುದೇ ಕಾರಣ ಎಂದು ಬಲವಾಗಿ ನಂಬಿಕೆ ಬರುತ್ತಿರುವ ಈ ಹೊತ್ತಿನಲ್ಲಿ ಓದಲು ಸಿಕ್ಕ ಪುಸ್ತವಿದು. ಸಂಸಾರ ಮುರಿದು ಹೋಗಲು ಕಾರಣಗಳು ಏನು ಎಂದು ಯಾರನ್ನೇ ಕೇಳಿದರೂ ದೊಡ್ಡ ಪಟ್ಟಿಯೇ ನೀಡುತ್ತಾರೆ. ಆದರೆ  ಪ್ರಖ್ಯಾತ ಹಿರಿಯ ವಕೀಲರು ಮತ್ತು ಮಧ್ಯಾಸ್ಥಿಕೆಗಾರರು ಆಗಿರುವ ಲೇಖಕಿ ಎಸ್ ಸುಶೀಲ ಚಿಂತಾಮಣಿ ಅವರು  ತಮ್ಮ ಅನುಭವದ ಮೂಸೆಯಿಂದ ಬಂದ ನೂರೆಂಟು ಕಾರಣಗಳನ್ನು ವಿಸ್ತರಿಸಿರುವುದನ್ನು ಓದಿದಾಗ ನಮ್ಮದೇ ನಡವಳಿಕೆಗಳಿಗೆ ಕನ್ನಡಿ ಹಿಡಿದಂತೆ ಎನ್ನಿಸುತ್ತದೆ.  "ನನ್ನ ಸಂಸಾರದಲ್ಲಿ ನಾನು ಸರಿ"  ಎಂದುಕೊಳ್ಳುವ ಪ್ರತೀ ಮನಸ್ಸು "ನನ್ನ ಸಂಸಾರದಲ್ಲಿ ನಾವು ಸರಿ" ಎಂದುಕೊಳ್ಳಲು ದೊಡ್ಡ  ಪ್ರೇರೇಪಣೆಯೆಂತಿದೆ ಇದರಲ್ಲಿನ ಸಾಲುಗಳು. ನೂರೆಂಟು ಮಾತುಗಳು ಎನ್ನದೆ ನೂರು ಎಂಟು ಎಂದು ವಿಭಜಿಸಿ ನೀಡಿರುವ ಶೀರ್ಷಿಕೆ ಬಹಳ ಅರ್ಥಗರ್ಭಿತ. ನಮ್ಮನಮ್ಮ ಸoಸಾರದ ವಿಫಲತೆಗೆ ನೂರು ಕಾರಣ ಇಲ್ಲದೆ ಕೇವಲ ಎಂಟು ಸ್ವಭಾವವೂ ಇರಬಹುದು ಎನ್ನುವ ಯೋಚನೆಗೆ ತಾವು ನೀಡುತ್ತದೆ 108 ಸಂಕ್ಷಿಪ್ತ ಅಧ್ಯಾಯಗಳು.  ಗಂಡ ಹೆಂಡತಿಯ ಸಂಬಂಧ ಎಂದರೆ ಇಬ್ಬರೂ ಸೇತುವೆಯ ಮೇಲೆ ನಿತಂತೆ. ಒಬ್ಬರು ಆಕಾಶ ನೋಡುವಾಗ ಮತ್ತೊಬ್ಬರು ಕೆಳಗೆ ಹರಿಯುವ ನೀರನ್ನು ನೋಡುತ್ತಿರಬಹುದು. ಆದರೆ ಇಬ್ಬರೂ ನಿಂತಿರುವುದು ಸೇತುವೆಯ ಮೇಲೆ ಎನ್ನುವುದನ್ನು ಮರೆಯಲಾಗದು ಎಂಬರ್ಥದ ಮಾತುಗಳು ಯಾವ ಅಧ್ಯಾಯ...

Autistic ಜನರ ಹಕ್ಕುಗಳು Law Point

Image
  ರವಿ ಬಾಲ್ಯದಿಂದಲೂ ಬೇರೆ ಮಕ್ಕಳಿಗಿಂತ ವಿಭಿನ್ನ. ಶಾಲೆಯ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲ. ವಯಸ್ಸಿಗೆ ಮೀರಿದ ದೇಹ. ಯಾರೊಂದಿಗೂ ಮಾತನಾಡಲು ಆಸಕ್ತಿ ಇಲ್ಲದ ಬಾಲಕನಿಗೆ ತಜ್ಞರು ಆಟಿಸಮ್ ವಿಕಲತೆ ಇರುವುದಾಗಿ ಹೇಳಿದರು. ಅವನ ಆಸಕ್ತಿಯನ್ನು ಗಮನಿಸಿ ಕ್ಯಾಂಡಲ್ ಮಾಡುವುದರಲ್ಲಿ ತರಬೇತಿ ಕೊಡಿಸಲಾಯ್ತು. ಖ್ಯಾತ ಗೃಹೋದ್ಯಮದವರು 15ರ ಇವನಿಗೆ ಸಂಬಳಕ್ಕೆ ಕೆಲಸ ಕೊಟ್ಟರು. ಬಾಲಕನ ಕೈಯೆಲ್ಲಾ ಮೇಣದಿಂದ ಸುಡಿಸಿಕೊಂಡು ಜಡ್ಡುಗಟ್ಟಿತ್ತು. ಅವನ ಸಮಸ್ಯೆ ಮತ್ತಷ್ಟು ಹೆಚ್ಚಿತು. 27 ವರ್ಷದ ಸಂತೋಷ್ ಶ್ರೀಮಂತ ಉದ್ಯಮಿಯ ಮಗ. ಯಾರೊಡನೆಯೋ ಬೆರೆಯದ, ತನ್ನದೇ ಲೋಕದಲ್ಲಿ ತಲ್ಲೀನನಾಗಿರುವವನಿಗೆ ಮದುವೆ ಮಾಡಿಸಿದರೆ ಸರಿಹೋಗುತ್ತಾನೆ ಎಂದ ಜ್ಯೋತಿಷ್ಯ ನಂಬಿ ಮದುವೆ ಮಾಡಿದ್ದಾರೆ. ಹೆಂಡತಿಗೆ ಇವನೊಡನೆ ಬಾಳುವುದು ಅಸಾಧ್ಯ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿದಿದೆ. ವೈದ್ಯರು ಅವನ ಬಾಲ್ಯದಲ್ಲಿಯೇ ಆಟಿಸಮ್ ಇದೆ ಎಂದು ಹೇಳಿದ್ದರೂ ಯಾವುದೇ ಚಿಕಿತ್ಸೆ ಕೊಡಿಸದ ಪರಿಣಾಮ ಇವತ್ತು ಅವರ ಮದುವೆ ವಿಚ್ಚೇಧನಕ್ಕಾಗಿ ನ್ಯಾಯಾಲಯದಲ್ಲಿದೆ.  ಭಾರತದಲ್ಲಿ ಪ್ರತೀ 40 ವಯಸ್ಕ ಗಂಡಸರಲ್ಲಿ ಒಬ್ಬ ವ್ಯಕ್ತಿ ಆಟಿಸಮ್ ವೈಕಲ್ಯತೆಯಿಂದ ಬಳಲುತ್ತಿದ್ದಾರೆ  ಎನ್ನುತ್ತದೆ ಒಂದು ಅಂಕಿಅಂಶ. ಆದರೆ ಸಂವಿಧಾನದ ಪರಿಚ್ಚೇಧ 14 ಮತ್ತು 15 ಅವರುಗಳಿಗೆ ಕೂಡ ಯಾವುದೇ ತಾರತಮ್ಯವಿಲ್ಲದೆ ಬದುಕುವ ಹಕ್ಕನ್ನು ಖಾತ್ರಿ ಪಡಿಸಿದೆ. ಹಾಗಾಗಿಯೇ ಅವರುಗಳ ಅವಶ್ಯಕತೆಗಳನ್ನು ಗಮನಿಸಿ ಸ...

ಹೆಜ್ಜೇನು

Image
  ಪುಸ್ತಕದ ಹೆಸರು: ಹೆಜ್ಜೇನು ನಿರೂಪಕರು : ರವೀಂದ್ರ ಭಟ್ಟ ಐನಕೈ   ಪ್ರಕಾಶಕರು: ಡೀಡ್ ಸಂಸ್ಥೆ ಮೊದಲ ಮುದ್ರಣ: 2೦೦6  ಕೆಲವು ಪುಸ್ತಕಗಳು ಓದಿ ಮುಗಿಸಿಕೊಳ್ಳುವುದೇ ಇಲ್ಲ. ಆಗಾಗ್ಗೆ ಮನಸ್ಸು ಬಯಸುತ್ತಲೇ ಇರುತ್ತದೆ ಓದಲು ಇನ್ನೊಮ್ಮೆ, ಮತ್ತೊಮ್ಮೆ. ನನ್ನ ಸಂಗ್ರಹದಲ್ಲಿ ಇರುವ ಅಂತಹ ಪುಸ್ತಕಗಳಲ್ಲಿ ಹೆಜ್ಜೇನು ಒಂದು. ಹೆಜ್ಜೇನು ಆದಿವಾಸಿ ಮಹಿಳೆ ಜಾಜಿಯವರ ಆತ್ಮಕಥೆಯಾಗಿದೆ ಕನ್ನಡ ಸಾಹಿತ್ಯ ಸಂಸ್ಕೃತಿ ಹಾಗೂ ಭಾಷೆಯಲ್ಲಿ ಸಮುದಾಯಗಳ 'ವಾಕ್ ಇತಿಹಾಸ'ದ ದಾಖಲೆಯಾಗಿದೆ. ಇತಿಹಾಸವನ್ನು ಬರೆದಿಡಲು ಅಸಾಧ್ಯವಾದ ಸಮುದಾಯದ, ಜನಾಂಗದ ಪ್ರತಿನಿಧಿಯ ಇತಿಹಾಸವನ್ನು ಕಟ್ಟುವ ಪ್ರಯತ್ನ ಈ ಪುಸ್ತಕದಲ್ಲಿ ಇದೆ.  ನಾಗರಹೊಳೆಯ ಕಾಡಿನ ಮೂರ್ಕಲ್ ಎನ್ನುವಲ್ಲಿ ತಾಜ್ ಒಡೆತನದ ಪಂಚತಾರಾ ಹೋಟೆಲ್ ನಿರ್ಮಾಣವಾಗುತ್ತಿದ್ದಾಗ ಅದನ್ನು ವಿರೋಧಿಸಿ ಆದಿವಾಸಿಗಳು ಚಳುವಳಿಯಲ್ಲಿ ನಿರತರಾಗಿದ್ದರು. ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಪಂಚತಾರಾ ಹೋಟೆಲ್ ನಿರ್ಮಾಣ ಕಾಡಿನಲ್ಲಿ ಬೇಡ ಎಂದು ಹೇಳಿದ್ದರು.  ಆದಿವಾಸಿಗಳನ್ನು ಆಲಕ್ಷಿಸಿ, ಹೋಟೆಲ್ ನಿರ್ಮಾಣ ಕಾರ್ಯ ಮುಂದುವರೆದಿತ್ತು. ಒಂದು ದಿನ ಚಳುವಳಿ ನಿರತ ಆದಿವಾಸಿ ಮಹಿಳೆಯರನ್ನು ಮಹಿಳಾ ಪೊಲೀಸ್ ಪೇದೆಗಳು ದಸ್ತಗಿರಿ ಮಾಡಲು ಎಳೆದಾಡುತ್ತಿದ್ದರು.ಒಬ್ಬ ಹೆಣ್ಣುಮಗಳು ಧರಣಿ ಸ್ಥಳದಲ್ಲಿ ಮಲಗಿ ಬಿಟ್ಟಿದ್ದಳು. ಈಕೆಯನ್ನು ಪೇದೆಗಳು ಎಬ್ಬಿಸಲಾಗಲಿಲ್ಲ . ಆಕೆಯ ಕೈಕಾಲು ಜುಟ್ಟು ಹಿಡಿದು ಮೇ...

ಮಕ್ಕಳು ಮತ್ತು summer vacation

Image
  ಈಗ ಮಕ್ಕಳಿಗೆ ಶಾಲಾ ರಜ. ಬೆಳಗಿನ ವಾಕಿಂಗ್ ಹೋದಾಗ ಬೀದಿಬದಿಯಲ್ಲಿ ಆಡುತ್ತಿರುವ ಹತ್ತಾರು ಮಕ್ಕಳು ಸಿಗುತ್ತಾರೆ, ಮುದ್ದಾಗಿರುತ್ತಾರೆ ಕೂಡ. ಅದರ ಅರ್ಥ ನಾವುಗಳು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳಬಹುದು ಅಂತಲ್ಲ! ಬೀದಿಯಲ್ಲಿ ಆಡುತ್ತಿದ್ದಾರೆ ಎಂದ ಮಾತ್ರಕ್ಕೆ ಅವರುಗಳು ಹೊಟ್ಟೆಗಿಲ್ಲದವರು, ದಿಕ್ಕೆಟ್ಟವರು, ಗತಿಯಿಲ್ಲದವರು ಎನ್ನುವ ಷರಾ ಬರೆಯಬಹುದು ಅಂತಲ್ಲ! ಯಾವ ಶಾಲೆ, ಎಷ್ಟನೇ ತರಗತಿ, ಹೆಸರು ಏನು, etc etc ಮಾತುಗಳನ್ನು ಅವರೊಂದಿಗೆ ಆಡಬೇಕು ಅಂತಲ್ಲ! ಮನೆಯಲ್ಲಿ ಉಳಿದ ಊಟ ಅಥವಾ ಅಲ್ಲೇ ಇರುವ ಕೈಗಾಡಿಯಲ್ಲಿ ಪಲಾವ್, ಚಾಕಲೇಟ್ ವಗೈರೆ ಕೊಡಿಸಿ ನಮ್ಮ ಅಹಂ ತಣಿಸಿಕೊಳ್ಳಬೇಕು ಅಂತಲ್ಲ! ಅವರ ತಲೆಸವರುವ, ಕೆನ್ನೆ ಹಿಂಡುವ ಹಿರಿತನ ನಮಗಿದೆ ಅಂತಲ್ಲ! ನಮಗೊಂದು ಒಳ್ಳೆಯ ಹಾಸ್ಟೆಲ್ ಗೊತ್ತು ಅಲ್ಲಿ ಒಳ್ಳೆಯ ಅನುಕೂಲಗಳಿವೆ ಸೇರಿಸುತ್ತೀವಿ ಎಂದು ತಂದೆತಾಯಿಗಳಿಗೆ ಆಮಿಷ ತೋರಿಸಬೇಕು ಅಂತಲ್ಲ!   ಹಾಗಾಗಿ ನೋಟವನ್ನು ಮಾತ್ರ ಆಸ್ವಾದಿಸಿ ಮುಂದಕ್ಕೆ ಹೋಗೋಣ. ಕಂಡ ಮಕ್ಕಳು ನಿಜಕ್ಕೂ ಅಸುರಕ್ಷಿತ, ಆತಂಕದ ಸ್ಥಿತಿಯಲ್ಲಿ ಇದ್ದಾರೆ ಎನಿಸಿದರೆ ಮಾತ್ರ 1098 ಅಥವಾ 112 ಗೆ ಕರೆ ಮಾಡಬೇಕು ಅಷ್ಟೇ.  ಈಗ ಮಕ್ಕಳ ಸುರಕ್ಷತೆಯ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಚುರುಕಾಗಿದೆ. ಸರ್ಕಾರ ಹಲವಾರು ಯೋಜನೆಗಳಿಗೆ ಹಣವನ್ನೂ, ಸ್ಥಳವನ್ನೂ ನೀಡಿದೆ.  ಹಾಗಾಗಿ ನಾವುಗಳು ನಮ್ಮ ಪಾತ್ರವನ್ನು ನಿರ್ವಹಿಸಿದರೆ ಸಾಕು, ನಮ್...

ಅವಳ ಇವಳ ಸುತ್ತ - Book read

Image
  ಪುಸ್ತಕದ ಹೆಸರು : " ಅವಳ ಇವಳ ಸುತ್ತ " ಲೇಖಕಿ : ಎಸ್ ಸುಶೀಲ ಚಿಂತಾಮಣಿ ಸಪ್ನಾ ಬುಕ್ ಹೌಸ್ ಪ್ರಕಟಣೆ  ಮನುಷ್ಯ ನೆಮ್ಮದಿಯಾಗಿ ಇದ್ದಾನೆ ಎನ್ನಲು ಒಂದೇ ಕಾರಣ ಸಾಕು ಆದರೆ ಬದುಕಿನಲ್ಲಿಯ ಅಶಾಂತಿಗೆ ನಾನಾ ಸ್ವರೂಪಗಳು. ಅದರಲ್ಲೂ ಹೆಂಗಸರು ದಾಂಪತ್ಯದೊಳಗೆ ಕತ್ತು ಹಿಸುಕಿಕೊಳ್ಳುತ್ತಲೇ ಕೆಲವೊಮ್ಮೆ ಕಣ್ಣ ನೀರಿಗೂ ತಾವು ಕೊಡಲಾಗದೆ ಬದುಕುವ ಸ್ಥಿತಿ ಬರಹಕ್ಕೆ ನಿಲುಕದು.  ಲೇಖಕಿ ಶ್ರೀಮತಿ ಎಸ್ ಸುಶೀಲ ಚಿಂತಾಮಣಿ ಅವರು ರಾಜ್ಯದ ಹಿರಿಯ ವಕೀಲರು. ಮೀಡಿಯೇಷನ್ ಕೇಂದ್ರದ ಮುಖ್ಯ ಸಂಧಾನಕಾರರು. ತಾವು ಕಂಡ, ನಿರ್ವಹಿಸಿದ ಪ್ರಕರಣಗಳನ್ನು 38 ಅಧ್ಯಾಯಗಳಲ್ಲಿ ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಅಧ್ಯಾಯಗಳ ಸಂಕ್ಷಿಪ್ತತೆ ನೋಡುವಾಗ ಅನಿಸಿದ್ದು ' ನೋವುಗಳನ್ನು ನಲಿವಿನಷ್ಟು ವಿಸ್ತರಿಸಲು ಅಕ್ಷರಗಳು ಶಕ್ಯವಲ್ಲ'. ಈ ಪುಸ್ತಕದಲ್ಲಿ ಪದಗಳಿಗಿಂತ ಮೌನದ್ದೇ ಹೆಚ್ಚು ಕೆಲಸ. ಓದುಗನ ಕೊರಳುಬ್ಬಿ ಬರದಿದ್ದರೆ ಅಕ್ಷರತೆಯ ಮೇಲಾಣೆ.  ಪ್ರತೀ ಹೆಣ್ಣಿನ ಜೀವನ ಯಾನವನ್ನು ಕೈಯಲ್ಹಿಡಿದ ಪುಸ್ತಕದಿಂದ ಕಣ್ಣಿನ ಮೂಲಕವೇ ನಮ್ಮದೇ ಪ್ರಯಾಣವಾಗಿಸಿಕೊಳ್ಳುವ ನಿಡಿದಾದ ನಿಟ್ಟುಸಿರು ' ಅವಳ ಇವಳ ಸುತ್ತ '. ಲೇಖಕಿಯೇ ಹೇಳಿರುವಂತೆ ' ಇದು ಹೆಣ್ಣು ಮಕ್ಕಳ ಸುತ್ತಲಿನ ಕೆಲವು ಘಟನೆಗಳ ಸಂಕಲನ. ಈ ಘಟನೆಗಳಲ್ಲಿ ಹಲವು ನಮ್ಮ ನಿಮ್ಮ ಕಣ್ಣಿಗೆ ಬಿದ್ದ ಅಥವಾ ನಮ್ಮ ನಿಮ್ಮ ಜೀವನದ ಘಟನೆಗಳೇ ಹೌದೇನೋ ಎನ್ನಿಸಲೂಬಹುದು ಎಲ್ಲೋ ಒಂದು ಕಡೆ ಇವು...

ಕಂಡಷ್ಟೂ ಪ್ರಪಂಚ - review

Image
  ಪುಸ್ತಕ ಪರಿಚಯ ೧೬೨: ಕಂಡಷ್ಟೂ ಪ್ರಪಂಚ ಲೇಖಕರು: ಅಂಜಲಿ ರಾಮಣ್ಣ ಪುಸ್ತಕಗಳು ಆಗಷ್ಟೇ ಗಮನ ಸೆಳೆಯುತ್ತಿದ್ದ ಬಾಲ್ಯದ ದಿನಗಳು ಎಂಬತ್ತರ ದಶಕ, ಆಗ "ಸುಧಾ" ವಾರಪತ್ರಿಕೆಯಲ್ಲಿ ಕನ್ನಡದ ಹಿರಿಯ ಲೇಖಕಿ ನೀಳಾದೇವಿಯವರ ಅಮೆರಿಕಾ ಪ್ರವಾಸ ಕಥನ ಧಾರಾವಾಹಿಯಾಗಿ ಬರುತ್ತಿತ್ತು (ಅದೂ ಮಕ್ಕಳ ಪುಟಗಳ ಆಸುಪಾಸಿನ ಪುಟಗಳಲ್ಲಿ). ಹೀಗಾಗಿ  ಗಮನ ಸೆಳೆದು ಓದಿಸಿಕೊಂಡ ಮೊದಲ ಪ್ರವಾಸ ಕಥನ ಅದು!!  ನಾವು ಕಂಡಿರದ ಇನ್ನೊಂದು ಸ್ಥಳಕ್ಕೆ ಭೇಟಿ ನೀಡಿ, ಆ ಪಯಣದ ಅನುಭವವನ್ನು ದಾಖಲಿಸಿ, ಓದುಗರರಲ್ಲಿ ಆಸಕ್ತಿ ಮೂಡಿಸಿ, ಅವರೂ ಆ ಪ್ರವಾಸ ಮಾಡುವಂತೆ ಪ್ರೇರೇಪಿಸುವುದಿರಲಿ, ಪ್ರವಾಸ ಮಾಡಲಾಗದಿದ್ದವರೂ ಮಾನಸಿಕವಾಗಿ ಆ ಅನುಭವವನ್ನು ಗಳಿಸುವಂತೆ ಮಾಡುವ ಈ ಸಾಹಿತ್ಯ ನಿಜಕ್ಕೂ ವಿಶಿಷ್ಟವೇ ಸರಿ.  ಪ್ರವಾಸ ಸಾಹಿತ್ಯದಲ್ಲಿ ನೋಡಿ ಅನುಭವಿಸಿದ್ದನ್ನು ಹಾಗೇ ದಾಖಲಿಸುವುದು ಒಂದು ಬಗೆ. ಪ್ರಸಿದ್ಧ ಸಾಹಿತಿಗಳಾದ ಗೊರೂರು, ಬೀಚಿ, ಟಿ.ಕೆ.ರಾಮರಾವ್, ಬಿ.ಜಿ.ಎಲ್ ಸ್ವಾಮಿ ಆ ದಿನಗಳಲ್ಲೇ ಇಂಥಹ ಕೃತಿ ನೀಡಿದವರು. ಇನ್ನು ಬರಿಯ ಪ್ರವಾಸದ ಅನುಭವಕ್ಕಷ್ಟೆ ಪ್ರಾಶಸ್ತ್ಯ ನೀಡದೆ ಆ ಸ್ಥಳಗಳ ಬಗೆಗೆ ಆಳವಾಗಿ ಕಲೆಹಾಕಿದ ಮಾಹಿತಿಗಳನ್ನೂ ಒಗ್ಗೂಡಿಸಿ, ಪ್ರವಾಸಾನುಭವದೊಂದಿಗೆ ಹೊಸೆದು ಓದುಗರರ ಆಸಕ್ತಿಯ ಆಯಾಮವನ್ನು ಹಿಗ್ಗಿಸಿ, ಓದಿದ ನಂತರವೂ ಇನ್ನಷ್ಟು ಅರಿಯಲು ಪ್ರಯತ್ನ ಪಡುವಂತೆ ಮಾಡುವುದು ಪ್ರವಾಸಿ ಸಾಹಿತ್ಯದ ಇನ್ನೊಂದು ಶೈಲಿ.  ನೇಮಿಚಂದ್ರ ಅವರ ಕೃತಿ...

ಆತ್ಮಹತ್ಯೆ ಬೆದರಿಕೆ - Law Point

Image
  ಅತುಲ್ ಸುಭಾಷ್ ಎನ್ನುವ ವ್ಯಕ್ತಿ ತನ್ನ ಹೆಂಡತಿ ಮತ್ತು ಆಕೆಯ ತಂದೆತಾಯಿ ಕೊಡುತ್ತಿರುವ ಕಾಟವನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎನ್ನುತ್ತಾ ನೂರಕ್ಕೂ ಹೆಚ್ಚು ಪುಟಗಳ ವಿವರ ಬರೆದಿಟ್ಟು ಅದರ ವೀಡಿಯೊ ಕೂಡ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿಷಯ ಇನ್ನೂ ಮರೆಯಲಾಗಿಲ್ಲ. ಮೇಲ್ನೋಟಕ್ಕೆ ಆತನ ಪತ್ನಿ ಅಪರಾಧಿಯಂತೆ ಕಾಣುತ್ತಿದ್ದಾಳೆ ಹಾಗಾಗಿ ತನಿಖೆ ಆಗಬೇಕು ಎಂದು ಉಚ್ಚನ್ಯಾಯಾಲವೂ ಹೇಳಿತ್ತು. ಈಗ ಆಕೆಗೆ ಜಾಮೀನು ಸಿಕ್ಕಿದೆ. ಈ ಘಟನೆಯ ನಂತರ ನೊಂದ ಗಂಡ ಎಂದು ಹೇಳಿಕೊಂಡು ಮತ್ತೊಂದು ಆತ್ಮಹತ್ಯೆಯೂ ಆಯಿತು. ವಿಷಾದವೆಂದರೆ ನಿನ್ನಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆಂಡತಿಯರನ್ನು ಬೆದರಿಸಲು ಗಂಡಂದಿರು ಇದನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ರೇವಮ್ಮನ ಅಣ್ಣನ ಮಗ ಜೈಲಿನಲ್ಲಿದ್ದಾನೆ. ಅವನ ಹೆಂಡತಿ ಜಾಮೀನು ಕೊಡಿಸಲು ಇವಳ ಹಿಂದೇರಿದ್ದಾಳೆ. ಆಗುವುದಿಲ್ಲ ಎಂದವಳಿಗೆ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಒತ್ತಡ ಹಾಕುತ್ತಿದ್ದಾಳೆ. ಹೆದರಿದ ರೇವಮ್ಮ ಆಳುತ್ತಾ ಆಫೀಸಿಗೆ ಬಂದಿದ್ದಳು.  ನೀನೀಗ ನನ್ನ ಜೊತೆ ಓಡಿ ಬರದಿದ್ದರೆ, ಮದುವೆ ಆಗದಿದ್ದರೆ, ಮಲಗದಿದ್ದರೆ, ದುಡ್ಡು ಕೊಡದಿದ್ದರೆ, ಸಾಲ ಹಿಂದಿರುಗಿಸು ಅಂತ ಕೇಳಿದರೆ, ಬಾಡಿಗೆಗೆ ಮನೆ ಬಿಡಿಸಿದರೆ, ಕೆಲಸ ಕೊಡದಿದ್ದರೆ ಹೀಗೆ ಯಾವುದೇ ಕಾರಣವನ್ನು ಕೊಟ್ಟು “ನ...

ಪೊಲೀಸ್ ನೋಟಿಸ್ -- Law Point

Image
  ಕುಟುಂಬಗಳ ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದ ಪೂಜಾಳಿಗೆ ಸಿಕ್ಕಿದ್ದು ಸೋಮಾರಿ ಗಂಡ. ತನ್ನ ವಿದ್ಯೆಯೂ ಪಿಯುಸಿಯಷ್ಟೇ. ಸಾಲ ತಂದು ಬಾಡಿಗೆ ಮನೆಯ ಕೋಣೆಯಲ್ಲಿಯೇ ಬ್ಯೂಟಿಪಾರ್ಲರ್ ನಡೆಸುತ್ತಾ ಸಂಸಾರ ಸಾಕುತ್ತಿದ್ದಳು. ಇನ್ನು ಮೂರು ದಿನದಲ್ಲಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಬರಬೇಕು ಎನ್ನುವ ಫೋನ್ ಕರೆ ಬಂದಾಗ, ವಿವರ ಕೇಳಿದರೂ ಸಿಗದಿದ್ದಾಗ ಕಂಗಾಲಾಗಿ ಹೋದಳು. ಶ್ರೀಮತಿ ಮನೆಯಲ್ಲಿಯೇ ಸೀರೆ ವ್ಯಾಪಾರ ಮಾಡುತ್ತಿದ್ದಳು. ಸೀರೆ ಸಪ್ಲೈ ಮಾಡುತ್ತಿದ್ದವರ ಜೊತೆ ಹಣಕಾಸಿನ ವಿಷಯಕ್ಕೆ ವಾಗ್ವಾದವಾಗಿತ್ತು. ಅದಾದೊಂದೇ ವಾರದಲ್ಲಿ ಆತನ ಊರಿನ ಪೊಲೀಸ್ ಠಾಣೆಯಿಂದ ’ನಿಮ್ಮ ಮೇಲೆ ಎಫ್‍ಐಆರ್ ಆಗಿದೆ ಠಾಣೆಗೆ ಹಾಜರಾಗಬೇಕು’ ಎಂದಿದ್ದ ಪತ್ರವೊಂದು ಕೈಸೇರಿದಾಗ ಮನೆಯವರು ಇವಳನ್ನೇ ನಿಂದಿಸಿ ಆತಂಕ ಒಡ್ಡಿದ್ದರು. ಅವರುಗಳು ವ್ಯಾಪಾರ ಮಾಡಿಕೊಂಡಿರಬಹುದು, ಯಾರಿಗೋ ಜಾಮೀನು ನಿಂತಿರಬಹುದು, ಬ್ಯಾಂಕ್ ಸಾಲಕ್ಕೆ ಶ್ಯೂರಿಟಿ ಹಾಕಿರಬಹುದು, ಜಗಳ ಬಿಡಿಸಲು, ರಾಜಿ ನ್ಯಾಯ ಮಾಡಲು ಹೋಗಿದ್ದಿರಬಹುದು, ಆಸ್ತಿ ಕೊಳ್ಳುವಿಕೆ, ಕುಟುಂಬದ ಆಸ್ತಿ ಪಾಲುದಾರಿಕೆ ವಿಷಯಗಳು, ಚೆಕ್ ಬೌನ್ಸ್ ಆಗಿರುವಾಗ, ಸಾಲವನ್ನು ಹಿಂದಿರುಗಿ ಕೇಳಿರುವಾಗ, ಸಾಲ ತೀರಿಸಲು ಆಗದೆಯಿದ್ದಾಗ, ಉದ್ಯೋಗಸ್ಥ ಸ್ಥಳದಲ್ಲಿಯೋ, ಮನೆ ಮಾಲೀಕರ ಜೊತೆಯಲ್ಲಿಯೋ ನಡೆದ ಜಗಳ, ಗಾಡಿ ಓಡಿಸುತ್ತಿರುವಾಗ ರಸ್ತೆಯಲ್ಲಡ್ಡ ಬಂದವರ ಜೊತೆಗಾದ ವಾದವೂ ಇರಬಹುದು, ಯಾವುದೇ ವಿಷಯದಲ್ಲಿ ವ್ಯಕ್ತಿಯ ಮೇಲೆ ಪೊಲೀಸ್ ಠಾ...

ಆಧುನಿಕತೆ ಮತ್ತು ಸಮಾನತೆ - Oneindia Kannada

Image
 ಮಹಿಳಾ ದಿನಾಚರಣೆಗೆ Oneindia kannada ಈ ಅಂತರ್ಜಾಲ ಪತ್ರಿಕೆಯಲ್ಲಿ ಬರೆದ ಲೇಖನ. ಓದಿ ಅಭಿಪ್ರಾಯ ತಿಳಿಸಿ 🙏 *******  ಆಧುನಿಕ ಕುಟುಂಬವೆಂದರೆ ಯಾವುದು ಎನ್ನುವ ಪ್ರಶ್ನೆಯೊಂದಿಗೇ ಲಿಂಗತಾರತಮ್ಯದ ವಾಸ್ತವವನ್ನು ನಿಕಷಕ್ಕೆ ಒಳಪಡಿಸಬೇಕಿರುತ್ತದೆ. ಹೆಚ್ಚಿನ ವಿದ್ಯಾವಂತರ  ಕುಟುಂಬ ಆಧುನಿಕವೋ ಅಥವಾ ಆರ್ಥಿಕ ಸ್ಥಿತಿಯಲ್ಲಿ ಉತ್ತಮವಾಗಿರುವವರು ಆಧುನಿಕರೋ.   ವಿದ್ಯೆ ಮತ್ತು ಹಣಗಳಿಕೆಗೆ ಸಮನಾದ ಅನುಪಾತವಿಲ್ಲದ ಈ ಕಾಲಘಟ್ಟದಲ್ಲಿ ದಿನಮಾನಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮತ್ತು ಮಾನವೀಯ ಗುಣಗಳನ್ನು ಅಳವಡಿಸಿಕೊಂಡಿರುವ ಮನೋಭಾವವನ್ನು ’ಆಧುನಿಕತೆ ’ ಎಂದು ಒಪ್ಪಿಕೊಳ್ಳಲಾಗದ ದ್ವಂದ್ವದಲ್ಲಿ ಸಾಗುವಳಿ ಕಾಣುತ್ತಿದೆ ಇಂದಿನ ಸಮಾಜ.   ಸ್ನೇಹಿತೆಯೊಬ್ಬಳು ಪ್ರತಿಷ್ಟಿತ  ಸಂಸ್ಥೆಯಲ್ಲಿ ವಿಜ್ಞಾನಿ. ಗಂಡ ಭೌತಶಾಸ್ತ್ರದ ಪ್ರಾಧ್ಯಾಪಕ.  ಮಗ ವಿದೇಶದಲ್ಲಿ ಇಂಜಿನಿಯರ್. ಕಾಲೇಜು ಓದುತ್ತಿರುವ ಮಗಳು. ಮೆಟ್ರೋ ನಗರದಲ್ಲಿ ವಾಸವಿರುವ ಕುಟುಂಬ ಮೇಲ್ನೋಟಕ್ಕೆ ಆಧುನಿಕವೇ ಹೌದು. ಮಗಳನ್ನು ಮುಟ್ಟಿನ ದಿನದಲ್ಲಿ ಮನೆಯ ಮುಂಭಾಗದಲ್ಲಿ ಇರುವ ಕೋಣೆಯಲ್ಲಿ ಮೂರು ದಿನ ಇರಬೇಕು ಎನ್ನುವ ಆಚರಣೆಯನ್ನು ಆಕೆ ಮೈನೆರೆದ ದಿನದಿಂದಲೂ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.  ’ಇದೇನು ಈಗಿನ ಕಾಲದಲ್ಲೂ ಅದೂ ನಿಮ್ಮ ಮನೆಯಲ್ಲಿ ಹೀಗ್ಯಾಕೆ?’ ಎಂದು ಕೇಳಿದಾಗ ಬಂದ ಉತ್ತರ ’ನನಗದರಲ್ಲಿ ನಂಬಿಕೆಯಿಲ್ಲ ಆದರೇನು ಮಾಡಲಿ ಗಂಡ ಒ...

ಸವಾಲು ದಾಟುವ ಸಂಭ್ರಮ in VK

Image
  ಸವಾಲು ದಾಟುವ ಸಂಭ್ರಮ - ಮಹಿಳಾ ದಿನಾಚಾರಣೆಗಾಗಿ ಈ ದಿನದ ವಿಜಯಕರ್ನಾಟಕದಲ್ಲಿ ನಾ ಬರೆದ ಲೇಖನ ಹೇಗಿದೆ. ದಯವಿಟ್ಟು ಓದಿ 🙏 *******  ಅಭಿರುಚಿಯಿರುವವರಿಗೆ ಪ್ರವಾಸವೆನ್ನುವುದು ಆತ್ಮಸಾಂಗತ್ಯದ ಪರಮಾವಧಿ. ಅದರಲ್ಲೂ ಒಂಟಿಯಾಗಿ, ತಿಳಿಯದ ಜಾಗಕ್ಕೆ ಹೋಗುವ, ಅಪರಿಚಿತರೊಡನೆ ಒಡನಾಡುವ ಪ್ರವಾಸವೆಂದರೆ ಅಂತರಂಗಕ್ಕೆ ಪಯಣಿಸುವ ಕುಂಡಲಿನಿ ಯಾತ್ರೆಯಂತೆ.  ’ಜಗದ ಜಂಜಡ ಬೇಡ ನಿನಗೆ ನಾನು ಆಗುವೆ ಕಣ್ಣು ನಿನಗೆ’ ಎನ್ನುತ್ತಾ ಪಾರದರ್ಶಕ  ಗೆಳೆಯನೊಬ್ಬ ತನ್ನನ್ನೇ ಪ್ರೇಯಸಿಯಾಗಿಸಿಕೊಂಡಿದ್ದಾನೇನೋ ಎನ್ನುವಂತಹ ಅಮೂಲ್ಯ ಭಾವವನ್ನು ಅನುಭವಿಸಿದ್ದೇನೆ ಪ್ರವಾಸದಲ್ಲಿ.  ಉದ್ಯೋಗಸ್ಥ ಮಹಿಳೆ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗುವಾಗ ಇಲ್ಲದ ಕೌತುಕ, ಮೆಚ್ಚುಗೆ, ಒಂದು ತೂಕ ಅಸಹನೆ ಮಹಿಳೆಯೊಬ್ಬಳು ಒಂಟಿ ಪ್ರವಾಸಕ್ಕೆ ಹೊರಟಿದ್ದಾಳೆ ಎಂದರೆ ಇರುತ್ತದೆ ಎನ್ನುವುದು ಸೋಜಿಗ.  ಹಾಗೆ ಊರೂರು ಸುತ್ತುವವರು ತಮ್ಮ ಕುಟುಂಬದ ಹೊಣೆಯನ್ನು ಬದಿಗೊತ್ತಿರುವವರೋ, ಮತ್ತ್ಯಾವುದೇ ಯಾವುದೇ ಜವಾಬ್ದಾರಿ ಇಲ್ಲದವರೋ, ವಿಪರೀತ ದುಡ್ಡು ಇರುವವರಾಗಿರುತ್ತಾರೆ ಎನ್ನುವುದೇ ಬಹುಪಾಲು ಜನರ ಆಲೋಚನೆ.  ಆದರೆ ಎಲ್ಲವನ್ನೂ ನಿಭಾಯಿಸಿಯೂ ತನ್ನ ಆಸಕ್ತಿಗಾಗಿ ಸಮಯ ಮತ್ತು ಸೌಲಭ್ಯವನ್ನು ಒದಗಿಸಿಕೊಳ್ಳಲು ಮನಸ್ಸು ಮಾಡುವ ಮಹಿಳೆಯ ಬಗ್ಗೆ ಸಮಾಜಕ್ಕೆ ಅಸಡ್ಡೆ ಇರುವಂತೆಯೇ ತಮಗಾಗದ್ದನ್ನು ಮತ್ತೊಬ್ಬರು ಮಾಡುತ್ತಿದ್ದಾರೆ ಎನ್ನುವ ಖುಷಿ ಅನುಭವಿಸುವ...

ಆಂದೋಲನದಲ್ಲಿ ಶಿವ

Image
  ಉತ್ತರಾಖಂಡವೇ ಪುರಾಣ ಪುಣ್ಯಕಥೆಗೆ ಹಿಡಿದ ಕನ್ನಡಿ. ಪ್ರಕೃತಿ ಮೈಹರವಿಕೊಂಡು ಸೌಂದರ್ಯವನ್ನು ಕೊಡವಿಕೊಳ್ಳುತ್ತಿರುವ ಈ ಭೂಮಿಯಲ್ಲಿ ಸ್ವಯಂಭುಗೊಂಡಿದ್ದಾನೆ ಕೇದಾರನಾಥ. ಅವನನ್ನು ಮುಟ್ಟಲು ಮಾರ್ಗ ಹಲವು. ನಾನು ಆಯ್ಕೆ ಮಾಡಿಕೊಂಡಿದ್ದು ರಿಷಿಕೇಶದಿಂದ ರಸ್ತೆ ಪ್ರಯಾಣ. ರಾಂಪುರವೆನ್ನುವ ಊರು ತಲುಪುವಷ್ಟರಲ್ಲಿ ರಾತ್ರಿಯಾಗಿತ್ತು. ಮಾರನೆಯ ದಿನದ ಪ್ರಯಾಣದಲ್ಲಿ ಸಿಕ್ಕಿದ್ದು ಅಲಕಾನಂದ-ಮಂದಾಕಿನಿಯರ ಸಂಗಮವಾದ ರುದ್ರಪ್ರಯಾಗವು ಶ್ರೀರಾಮಚಂದ್ರ ಪೂರ್ವಿಕರಿಗೆ ತರ್ಪಣಕೊಟ್ಟ ಸ್ಥಳ. ನಂತರ ಸಿಕ್ಕಿದ್ದು ಭಾಗೀರಥಿ-ಮಂದಾಕಿನಿಯರ ಸಂಗಮದ ದೇವಪ್ರಯಾಗ. ಇಲ್ಲಿ ಬ್ರಹ್ಮ ತಪಸ್ಸು ಮಾಡಿದ ಗುರುತಿಗೊಂದು ಶ್ರೀರಾಮ ಮಂದಿರವಿದೆ. ಇನ್ನೊಂದಷ್ಟು ದೂರದಲ್ಲಿ ತ್ರಿಯುಗ ನಾರಾಯಣನ ಸ್ಥಾನ. ಪಾರ್ವತಿ ಕಲ್ಯಾಣ ನಡೆದದ್ದು ಎಂದು ಹೇಳಲಾಗುವ ಮನಮೋಹಕ ಮಂದಿರವದು. ಶಿವ ಪಾರ್ವತಿಯರು ಸಪ್ತಪದಿ ತುಳಿದುದರ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಅದೇ ಅಗ್ನಿಯನ್ನು ಅಂದಿನಿಂದ ಈ ಘಳಿಗೆಯವರೆಗೂ ಆರದಂತೆ ಕಾಯುತ್ತಿದ್ದಾರೆ ಅಲ್ಲಿನ ಭಕ್ತರು. ಅಲ್ಲಿಂದ ತಲುಪಿದ್ದು ಕೇದಾರನಾಥನ ತಪ್ಪಲಿಗೆ. ಭಕ್ತರನ್ನು ಮೀಯಿಸಿ ಶುಚಿಗೊಳಿಸುವ ಬಿಸಿನೀರಿನ ಬುಗ್ಗೆಯ ಗೌರಿಕುಂಡ ಈ ತಪ್ಪಲಿಗೆ ಆತುಕೊಂಡಿದೆ. ಇಲ್ಲಿಂದ ಮುಂದೆ ದುರ್ಗಮ ದಾರಿ. ಕೋಲೂರಿ ಹತ್ತಿ ಹೋಗಬೇಕು ಇಲ್ಲವೇ ಅಲ್ಲಿನ ಕುದುರೆ ಏರಿ ಹೋಗಬೇಕು. ಅದೂ ಸಾಧ್ಯವಿಲ್ಲವೆನಿಸಿದರೆ ಇಬ್ಬರು ಪಾಳಿ ಬದಲಿಸುತ್ತಾ ಹೊತ್ತು ಸಾಗುವ ಪಲ್ಲಕ್ಕಿಯಂಥ...

What is a family - ಕುಟುಂಬ ಎಂದರೆ

Image
 15-02-2025 ಇವತ್ತಿನ ಪ್ರಜಾವಾಣಿಯಲ್ಲಿ ಹೀಗೆ ಬರೆದಿದ್ದೇನೆ. ದಯವಿಟ್ಟು ಓದಿ ಅಭಿಪ್ರಾಯ ತಿಳಿಸಿ 🙏 ********  ಎಲ್ & ಟಿ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಎಸ್ ಎನ್ ಸುಬ್ರಹ್ಮಣಿಯನ್ ಅವರು ಜಾಗತಿಕವಾಗಿ ಜಾಗೃತಗೊಂಡಿರುವ ಸ್ಪರ್ಧೆಯಲ್ಲಿ ಭಾರತವನ್ನು ಆರ್ಥಿಕವಾಗಿ ಮುನ್ನೆಲೆಗೆ ತರಬೇಕು ಎನ್ನುವ ಉದ್ದೇಶದಿಂದ ಕೆಲಸಗಾರರು ಭಾನುವಾರಗಳಂದೂ ರಜೆ ತೆಗೆದುಕೊಳ್ಳದೆ ವಾರಕ್ಕೆ 90 ಘಂಟೆಗಳ ಕಾಲ ಕೆಲಸ ಮಾಡಬೇಕು ’ಎಷ್ಟೆಂದು ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ದಿಟ್ಟಿಸುತ್ತಾ ಕೂರುವುದು’ ಎನ್ನುವ ಬೀಸು ಹೇಳಿಕೆಯನ್ನು ನೀಡಿರುವುದು ಈಗ ಕಾರ್ಮಿಕ ವಲಯದ ಕಾವೇರಿಸಿದೆ. ಅಸಮಾನ ಸಂಬಳದಿಂದ ಹಿಡಿದು, ಮಹಿಳೆಯರಿಗೆ ಮಾಡಿದ ಅವಮಾನ ಎನ್ನುವವರೆಗೂ ಚರ್ಚೆ ನಡೆಯುತ್ತಿದೆ. ಆದರೆ ಕುಟುಂಬ ಎಂದರೆ, ಸಂಬಂಧಗಳು ಎಂದರೆ ಕೇವಲ ಗಂಡ ಹೆಂಡತಿಯ ನಡುವಿನದ್ದು ಎನ್ನುವ ಭಾವವನ್ನು ಮನಸ್ಸಿನಲ್ಲಿ ಬಿತ್ತಿದಾಗ ಆಗುವ ಅಪಾಯಗಳ ಬಗ್ಗೆ ಯಾರ ಗಮನವು ಹೋಗದಿರುವುದು ವಿಪರ್ಯಾಸ. ಹಾಸ್ಯ ಎನ್ನುತ್ತಾ ಕೆಲವು ವರ್ಷಗಳ ಹಿಂದೆ ಕಥೆಯೊಂದು ಓಡಾಡುತ್ತಿತ್ತು. ಮಹಿಳೆಯೊಬ್ಬಳು ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸಕ್ಕಾಗಿ ಇಂಟರ್ವ್ಯೂಗೆ ಹೋದಾಗ ಒಂದು ಪ್ರಶ್ನೆಗೆ ಉತ್ತರವಾಗಿ ತನ್ನದು ಜಾಯಿಂಟ್ ಫ್ಯಾಮಿಲಿ ಎನ್ನುತ್ತಾಳೆ. ಅದಕ್ಕೆ ಅಧಿಕಾರಿಯೊಬ್ಬರು ಹಾಗಾದರೆ ನಿಮ್ಮ ಕುಟುಂಬದಲ್ಲಿ ಯಾರ್ಯಾರು ಇದ್ದೀರಾ ಎಂದು ಕೇಳಿದಾಗ ತಾನು ತನ್ನ ಗಂಡ ಜಾಯಿಂಟಾಗಿ ಇದ್ದೀವಿ ಎನ್ನುತ...

Constitution ಮತ್ತು ಮಹಿಳೆ

Image
   ಆ ಶಾಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತರಬೇತಿ ನಡೆಸಿದ್ದ ಮೂರನೆಯ ದಿನಕ್ಕೆ ಅಲ್ಲಿನ ಜೀವಶಾಸ್ತ್ರ ವಿಷಯದ ಅಧ್ಯಾಪಕಿ ಫೋನ್ ಮಾಡಿ ತಮ್ಮ ಶಾಲೆಯ ಐದನೆಯ ತರಗತಿಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವ ವಿಷಯ ತಿಳಿಸಿ ಆ ಬಾಲಕಿಯನ್ನು ಕರೆದುಕೊಂಡು ಬಂದರು. ಅವಳೊಡನೆಯ ದೀರ್ಘ ಮಾತುಕತೆಯಿಂದ ತಿಳಿದು ಬಂದ ವಿಷಯ ತಂದೆಯಿಲ್ಲದ ಅವಳ ತಾಯಿಯ ಎರಡನೆಯ ಗಂಡ ( ಇಟ್ಟುಕೊಂಡವನು) ಕಳೆದ ಮೂರು ವರ್ಷಗಳಿಂದ ನಿತ್ಯವೂ ಇವಳ ಮೇಲೆರಗುತ್ತಿದ್ದಾನೆ. ಮಾಹಿತಿ ಶಿಬಿರದಲ್ಲಿ ಭಾಗವಹಿಸುವವರೆಗೂ ಈ ಹುಡುಗಿಗೆ ಅದು ತನ್ನ ಮೇಲೆ ನಡೆಯುತ್ತಿರುವ ಅಪರಾಧ ಎನ್ನುವುದೇ ತಿಳಿದಿರಲಿಲ್ಲ.  ನ್ಯಾಯಾಲಯದಲ್ಲಿ ಗಂಡನೇ ಹಾಕಿರುವ ವಿಚ್ಚೇಧನ ಪ್ರಕರಣದಲ್ಲಿ ತನ್ನ ಮಗುವನ್ನು ತಾನು ಪಡೆದುಕೊಳ್ಳುವ ಹಾಗಿಲ್ಲ ಯಾಕೆಂದರೆ ತಂದೆಯೇ ಅದರ ಯಜಮಾನ ಎಂದು ವಕೀಲರು ಹೇಳಿಬಿಟ್ಟಿದ್ದಾರೆ. ಹಾಗಾಗಿ ಅವಳೀಗ ಮಾನಸಿಕ ರೋಗಕ್ಕೆ ತುತ್ತಾಗಿದ್ದಾಳೆ. ಹೆಣಗಾಡುತ್ತಿದ್ದಾಳೆ. ಹೀಗೆ ತಾವು ಅಸಮಾನ ಸಮಾಜದಲ್ಲಿ ಇದ್ದೇವೆ, ತಮ್ಮನ್ನು ಕನಿಷ್ಠ ಮನುಷ್ಯರನ್ನಾಗಿಯೂ ಕಾಣುತ್ತಿಲ್ಲ ಎನ್ನುವ ಅರಿವೂ ಇಲ್ಲದ ಸ್ವಾತಂತ್ರ್ಯ ಪೂರ್ವದ ಮಹಿಳೆಯರಲ್ಲಿ ಸಮಾನತೆ, ಮಾನವ ಹಕ್ಕುಗಳು ಎನ್ನುವ ಪ್ರಜ್ಞೆಯನ್ನು ಮೊದಲ ಬಾರಿಗೆ ಮೂಡಿಸಿದ್ದು ನಮ್ಮ ಸಂವಿಧಾನ. ಸೂಕ್ಷ್ಮತೆಯುಳ್ಳ ಕೆಲವೇ ಮಹಿಳೆಯರು ದನಿಯೆತ್ತುವಾಗ ಅವುಗಳು ಪುರುಷಮನದ ಸಮಾಜದಲ್ಲಿ ಉಡುಗಿ ಹೋಗದಂತೆ ಗಟ್ಟಿಸಿಕೊಳ್ಳಲು ...

ಬಳಸುವ ಭಾಷೆ - words used by women

Image
  ಇವತ್ತಿನ ಆಂದೋಲನ ಪತ್ರಿಕೆಯಲ್ಲಿ ಹೀಗೆ ಬರೆದಿದ್ದೇನೆ. ದಯವಿಟ್ಟು ಓದಿ 🙏😊 ------- ಅದೊಂದು ಜಾಹೀರಾತು. ಹರೆಯದವರು ಮೋಜಿನಲ್ಲಿ ಹೊಟೆಲ್ಲೊಂದರಲ್ಲಿ ಇರುತ್ತಾರೆ. ನಡುವೆ ಯುವತಿಯೊಬ್ಬಳು ತಲೆ ನರೆತ, ಕಟ್ಟುಮಸ್ತಾದ ಗಂಡಸಿನ ಜೊತೆ ಬೈಕ್‍ನಲ್ಲಿ ಬಂದು ಇಳಿಯುತ್ತಾಳೆ. ಕೂಡಲೇ ಅಲ್ಲಿದ್ದ ಸ್ನೇಹಿತೆ ’ ವಾವ್ ನಿನ್ನ ತಂದೆ ಎಷ್ಟು ಹಾಟ್ ’ ಎನ್ನುತ್ತಾ ಆತನತ್ತ ಸೆಳೆತದ ನೋಟ ನೆಡುತ್ತಾಳೆ. ಸ್ವಲ್ಪ ಹೊತ್ತಿನ ನಂತರ ಈ ಯುವತಿ ಆತ ತನ್ನ ತಂದೆಯಲ್ಲವೆಂದು ಬಾಯ್ ಫ್ರೆಂಡ್ ಎಂದೂ ಹೇಳುತ್ತಾಳೆ. ತಮ್ಮ ಪಾನೀಯ ಕುಡಿದು ದಿಲ್ ಖೋಲ್ ಕೆ ಬೋಲೋ ಎನ್ನುವ ಕಂಪನಿಯ ಜಾಹೀರಾತು ಮುಗಿಯುತ್ತದೆ.  ಇದರ ಗುಂಗಿನಲ್ಲೇ ಪೂರ್ತೀ ದಿನ ಕಳೆದು ಹೋಗಿದ್ದಾಗ ಒಮ್ಮೆಗೆ ಎನಿಸಿದ್ದು ಈ ಜಾಹೀರಾತಿನಲ್ಲಿ ಪಾತ್ರ ಪಲ್ಲಟ ಮಾಡಿದರೆ ಹೇಗಿರುತ್ತದೆ?! ನಡುವಯಸ್ಸಿನಲ್ಲಿಯೂ ಮೈಕಟ್ಟು ಸುಂದರವಿರುವ ಹೆಣ್ಣೊಬ್ಬಳ ಜೊತೆ ಯುವಕನೊಬ್ಬ ಬಂದಿಳಿದಾಗ ಆತನ ಸ್ನೇಹಿತ ಆಕೆಯನ್ನೇ ದಿಟ್ಟಿಸುತ್ತಾ ’ ಹೇ ನಿನ್ನ ತಾಯಿ ಎಷ್ಟು ಹಾಟ್ ’ ಎಂದರೆ ಹೇಗಿರುತ್ತದೆ? ಆಗ ಬಹುಶಃ ಅದನ್ನು ಲಿಂಗಾಧಾರಿತ ಹೇಳಿಕೆ ಎಂದು ಗುಲ್ಲೆಬ್ಬಿಸುತ್ತಾ ಮಹಿಳೆಯ ಘನತೆಗೆ ಚ್ಯುತಿ ತಂದ ಜಾಹೀರಾತು ಎಂದು ಅದನ್ನು ತಡೆಹಿಡಿಯಲು ನಾವೆಲ್ಲರೂ ಒಗ್ಗಟ್ಟಾಗಿ ಕೂಗುತ್ತಿದ್ದೆವು. ಹಾಗಾದರೆ ಗಂಡಸಿನ ಬಗ್ಗೆ ಹೆಣ್ಣು ಯಾವ ಪದಗಳನ್ನೇ ಉಪಯೋಗಿಸಬಹುದೇ? ಮಾತುಗಳಲ್ಲಿ ಆತನ ಘನತೆ ಅಡಗಿಲ್ಲವೇ ಅವಳದರ ಹಾಗೆ?  ಹಿಂದೊಮ್...

Marriage registration - ವಿವಾಹ ನೋಂದಾವಣೆ

Image
  ವಿವಾಹ ನೋಂದಣಿ: ಯಾಕೆ? ಹೇಗೆ? ಭಾರತದಂತಹ ಸಾಂಪ್ರದಾಯಿಕ ನೆಲೆಯಲ್ಲಿ ನಿಂತು ನೋಡಿದಾಗ ವಿವಾಹ ನೋಂದಣಿಯ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಅನೇಕರನ್ನು ಕಾಡುವುದುಂಟು. ಸಾವಿರಾರು ಜನರ ಸಮ್ಮುಖದಲ್ಲಿ ವಿವಾಹವಾಗುತ್ತದೆ. ಬಂಧು–ಮಿತ್ರರನ್ನೆಲ್ಲಾ ಆಹ್ವಾನಿಸಲಾಗುತ್ತದೆ. ಹೀಗಿದ್ದ ಮೇಲೆ ವಿವಾಹದ ನೋಂದಣಿ ಯಾಕೆ ಬೇಕು ಎನ್ನುವ ಪ್ರಶ್ನೆ ಸಾಮಾನ್ಯ. ಎಲ್ಲವೂ ಸರಿ ಇದ್ದಾಗ ವಿವಾಹ ನೋಂದಣಿಯ ಪ್ರಶ್ನೆಯೇ ಬರುವುದಿಲ್ಲ ನಿಜ. ಆದರೆ, ಕೆಲವೊಮ್ಮೆ ಎಲ್ಲೋ ಏನೊ ಸಮಸ್ಯೆ ತಲೆದೋರಿದಾಗ ವಿವಾಹ ನೋಂದಣಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಮದುವೆಗಳು ಹಳಿ ತಪ್ಪುವ ಪ್ರಕರಣಗಳು ಹೆಚ್ಚಾಗಿ ಘಟಿಸುತ್ತಿರುವ ಈ ಕಾಲದಲ್ಲಿ ಸುರಕ್ಷತೆಗಾಗಿ, ಅದರಲ್ಲೂ ಹೆಣ್ಣುಮಕ್ಕಳ ರಕ್ಷಣೆಗಾಗಿ ವಿವಾಹ ನೋಂದಣಿ ಬಹಳ ಸಹಾಯಕಾರಿ. ವಿವಾಹ ನೋಂದಣಿ ಎಂದರೇನು? ಅದು ಯಾಕೆ ಬೇಕು? ಯಾವ ಪ್ರಕಾರದ ವಿವಾಹಗಳನ್ನು ನೋಂದಣಿ ಮಾಡಿಸಬಹುದು? ಅರ್ಹತೆಗಳೇನು? ನಿಯಮಗಳೇನು? ಯಾವ ದಾಖಲೆಗಳು ಬೇಕು? ಮದುವೆಯಾಗಿ ವರ್ಷಗಳ ನಂತರವೂ ನೋಂದಣಿ ಮಾಡಿಸಬಹುದೇ? ಎನ್ನುವ ಕುರಿತು ವಕೀಲೆ ಅಂಜಲಿ ರಾಮಣ್ಣ ಇಲ್ಲಿ ಮಾತನಾಡಿದ್ದಾರೆ. ಯಾಕೆ ಬೇಕು ವಿವಾಹ ನೋಂದಣಿ: ಮದುವೆ ಪ್ರಮಾಣ ಪತ್ರ ಒಂದು ಸರ್ಕಾರಿ ದಾಖಲೆಯಾಗಿದ್ದು, ವಿಶೇಷವಾಗಿ ಮಹಿಳೆಯರಿಗೆ ಸಾಮಾಜಿಕ ರಕ್ಷಣೆ, ಸಾಮಾಜಿಕ ಭದ್ರತೆ ಹಾಗೂ ಇತರ ಸವಲತ್ತುಗಳನ್ನು ಪಡೆಯಲು ಅಗತ್ಯವಾಗಿದೆ. ವಿದೇಶಗಳಿಗೆ ಪತಿ/ಪತ್ನಿಯನ್ನು ಕರೆದೊಯ್ಯಬೇಕಾದ ಸಂದರ್ಭದಲ್ಲಿ ವಿಸ...