Posts

ಬನ್ನಿ ಮನೆಗೆ ಹೋಗೋಣ. . . Lets Go Home !

Image
ಬಡತನ ಮತ್ತು ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತದೆ ಎನ್ನುವ ಕಾರಣಗಳನ್ನು ನೀಡಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಾಯ್ತಂದೆಯರು ತಮ್ಮ ಮಕ್ಕಳನ್ನು ಬೆಂಗಳೂರಿನ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ, NGOಗಳಲ್ಲಿ ದಾಖಲಿಸಿರುತ್ತಾರೆ. ಈ ಕಾರಣಗಳು ಒಂದು ಹಂತದವರೆಗೂ ನಿಜವೇ ಆದರೂ ಹೀಗೆ ಮಕ್ಕಳನ್ನು ದೂರ ಮಾಡಿರುವ ತಂದೆ ತಾಯಿಯರಲ್ಲಿ ತಮ್ಮ ಜವಾಬ್ದಾರಿಯನ್ನು ವರ್ಗಾವಣೆ ಮಾಡುವ ಮನೋಭಾವವೇ ಎದ್ದು ಕಾಣುತ್ತದೆ. ಅವರುಗಳ ಉಡಾಫೆತನವನ್ನು ವ್ಯಾಪಾರೀಕರಣಗೊಳಿಸಿ,  ಸಮಾಜ ಸೇವೆ ಎನ್ನುವ ಹೆಸರಿನಲ್ಲಿ ನಾಯಿಕೊಡೆಗಳಂತೆ ಬೆಂಗಳೂರಿನ ಪ್ರತೀ ಗಲ್ಲಿಯಲ್ಲೂ ’ಸೇವಾಶ್ರಮ’ ಎನ್ನುವ ಬೋರ್ಡ್ ಕಾಣುತ್ತದೆ. ಬಹಳಷ್ಟು ಸಂಸ್ಥೆಗಳಿಗೆ ಸರಿಯಾದ ನೋಂದಾವಣೆ ಇರುವುದಿಲ್ಲ. ಯಾವ ಬಡತನ ಎನ್ನುವ ಕಾರಣಕ್ಕೆ ಮಕ್ಕಳು ಸುಖವಾಗಿರಲು ಇಲ್ಲಿನ ಸಂಸ್ಥೆಗೆ ಬಂದಿರುತ್ತಾರೋ , ವಾಸ್ತವದಲ್ಲಿ ಇಲ್ಲಿ ಇನ್ನೂ ಹಾಳಾದ ಪರಿಸರದಲ್ಲಿ ಇರುತ್ತಾರೆ. ಮಾನಸಿಕ ಆರೋಗ್ಯವೂ ಕುಂದಿರುತ್ತದೆ. Inferiority complexನ ಬಲಿ ಪಶುಗಳಾಗಿರುತ್ತಾರೆ. ಭವಿಷ್ಯದೆಡೆಗೆ ನಿರ್ವಿಣ್ಣರಾಗಿರುತ್ತಾರೆ. ಸಂಸ್ಥೆಗಳು ಅವರಲ್ಲಿನ ಹೆಣ್ಣು ಮಕ್ಕಳನ್ನು ಬ್ಯೂಟಿ ಪಾರ್ಲರ್‍ನ ಕೆಲಸಕ್ಕೆ ಹೊರತಾದ ಯಾವುದೇ ಕೌಶಲ್ಯ ಕಲಿಸಲು ಸೋಲುತ್ತಿವೆ. ಅಬ್ಬಬ್ಬಾ ಎಂದರೆ ಮಕ್ಕಳು ನಾಲ್ಕು ಚೂಡಿದಾರ್ ಹೊಲಿಯುವಷ್ಟು ಟೈಲರ್ ಆಗುತ್ತಿದ್ದಾರೆ ಅಷ್ಟೇ. ಇಲ್ಲಿರುವ ಬಾಲಕಿಯರದ್ದೂ , ಅದೆಷ್ಟೋ ಕುಟುಂಬದ ಜೊತೆಯಲ್ಲಿ ಇರುವ ಹೆಣ್ಣು ಮಕ್ಕ...

Prison visit

Image
ಸಂತಸಕ್ಕೊಂದು ಚಪ್ಪಾಳೆ ನೋವಿಗೆರಡು ಕಣ್ಣ ಹನಿ ಇಷ್ಟೇ ಸಾಮ್ಯ ಮನುಷ್ಯಧರ್ಮದಲ್ಲಿ...ಪ್ರತೀ ನೋವಿನ ಆಳ ಅಗಲ ಬಗೆ ಎಲ್ಲವೂ ಅದೆಷ್ಟು ಭಿನ್ನ! 29th April 2019 Central Prison,  Bengaluru  ಮತ್ತೊಮ್ಮೆ.

ಗ್ರಂಥಾಲಯ ಮತ್ತು ಮಕ್ಕಳ ಮನೋವಿಕಾಸ

Image

Quarantine ಮಕ್ಕಳ ಮನೋವಿಕಾಸ

Image
ಮಹಿಳಾ ಮತ್ತು ಮಕ್ಕಳ ಸಚಿವಾಲಯ, ಕರ್ನಾಟಕ ಸರ್ಕಾರ ಇವರ ಆದೇಶದ ಮೇರೆಗೆ, ಕೊರೋನ ಕಾರಣಕ್ಕಾಗಿ quarantine ನಲ್ಲಿ ಇರುವ ತಾಯ್ತಂದೆಯರ ಮಕ್ಕಳನ್ನು ಸಹ ಪ್ರತ್ಯೇಕವಾಗಿ ಇಡಬೇಕಿರುತ್ತದೆ. ಇಂತಹ ಮಕ್ಕಳಿಗೆ ಆಸ್ಪತ್ರೆಯಲ್ಲಿ ಮನೋರಂಜನೆಗಾಗಿ ಸಾಧನಗಳನ್ನು ಒದಗಿಸಿ ಕೊಡಬೇಕಾದ ಜವಾಬ್ದಾರಿಯನ್ನು ಅಸ್ತಿತ್ವ ನಿಭಾಯಿಸಿದ್ದು ಹೀಗೆ.
Image
ಅಸ್ತಿತ್ವ ಟ್ರಸ್ಟ್ ಮೂಲಕ ಇದು ಸಾಧ್ಯವಾಗಿಸಿದವರು ನೀವು. ಒಪ್ಪಿಸಿಕೊಳ್ಳಿ 🙏

ದೀಪಧಾರಿಣಿ Florance Nightingale

Image
ಮ್ಯೂಸಿಯಂ ಬಾಗಿಲು ಹಾಕಲು ಇನ್ನರ್ಧ ಗಂಟೆ ಮಾತ್ರ ಇತ್ತು. ದಡಬಡಗುಟ್ಟಿಕೊಂಡು ಹೋದೆ . ಪ್ರವೇಶ ದರ £೭ . ಸ್ವಾಗತಕಾರಿಣಿ ಅರ್ಧ ಗಂಟೆಕೋಸ್ಕರ ಪಷ್ಟು ದುಡ್ಡು ಕೊಡಬೇಡಿ ನಾಳೆ ಬನ್ನಿ ಎಂದಳು. ಉಹುಂ ನನಗೆ ನೋಡಲೇಬೇಕೆಂಬ ಹಠ ಬಂದಿತ್ತು. "ಇಲ್ಲಿಗೆ ಪ್ರವಾಸಿಗರು ಬರುವುದೇ ಇಲ್ಲ ಆದರೆ ನೀವು ಇಂಡಿಯಾ  ಅಷ್ಟು ದೂರದಿಂದ ಬಂದಿದ್ದೀರಿ ನಿಮಗಾಗಿ ಇನ್ನೂ ಅರ್ಧ ಗಂಟೆ ತೆರೆದಿರುತ್ತೀನಿ ಹೋಗಿ ನೋಡಿ" ಎಂದು ಟಿಕೆಟ್ ಹರಿದುಕೊಟ್ಟವಳ ಕೈಗೆ ಮುತ್ತಿಡುತ್ತಾ ಒಳ ಹೊಕ್ಕೆ. ಅಲ್ಲಿನ ಎಲ್ಲಾ ಮ್ಯೂಸಿಯಂಗಳಂತೆ ಇದನ್ನು ಬಲು ಒಪ್ಪವಾಗಿರಿಸಿದ್ದಾರೆ .ಆಕೆ ಹುಟ್ಟಿದಾಗಿನಿಂದ ಕೊನೆಯಾಗುವವರೆಗೂ ಮಾಡಿದ ಕೆಲಸ, ತೊಟ್ಟ ಬಟ್ಟೆ,  ಆಡಿದ ಮಾತು, ತೋರಿದ ಅಭಿರುಚಿ ಎಲ್ಲವನ್ನೂ ಲಭ್ಯತೆಗೆ ತಕ್ಕಂತೆ ಚಂದಗಾಣಿಸಿ ಇಟ್ಟಿದ್ದಾರೆ. ಈಕೆ ದೀಪಧಾರಿಣಿ ಫ್ಲೋರೆನ್ಸ್ ನೈಟಿಂಗೇಲ್ ಮಾತ್ರವಲ್ಲ ಕೈ ಬರಹದಲ್ಲೇ 200 ಪುಸ್ತಕ 1400 ಪತ್ರಗಳು ಅದೆಷ್ಟೋ ಕರಪತ್ರ ಲೆಕ್ಕವಿಲ್ಲದಷ್ಟು ಲೇಖನಗಳನ್ನು ಬರೆದಿರುವ ಸಾಹಿತಿಯೂ ಹೌದು ಎನ್ನುವ ಹೊಸ ವಿಷಯ ತಿಳಿದುಕೊಳ್ಳುತ್ತಾ, ನೋಡುತ್ತಾ, ಕ್ಯಾಮೆರಾದಲ್ಲೂ ಕಾಣುತ್ತಾ ಹೊರ ಬರುವಾಗ ಮನಸ್ಸಿನಲ್ಲಿ ನಿಂತದ್ದು ದಾದಿ ಫ್ಲೋರೆನ್ಸ್ ಳ ಈ ಮಾತು - "Now I know what it takes to love life !" ಇನ್ನೇನು ಹೊಸಿಲು ದಾಟುವವಳಿದ್ದೆ ಎನ್ನುವಾಗ ಹಿಂದಿನಿಂದ ಅಟ್ಟಿಸಿಕೊಂಡು ಬಂದ ಒಬ್ಬಾಕೆ ನನ್ನ ಕ್ಯಾಮೆರಾ ಕಡೆಗೆ ಕ...

Law and Reproductive Health

Image
ಮೊನ್ನೆ FBಯಲ್ಲಿಯೇ ಓದಿದೆ, ಆಗತಾನೆ ಹುಟ್ಟಿದ ಹಸುಗೂಸನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಲು ಕಷ್ಟ ಪಟ್ಟ ತಾಯಿಗೆ ಯಾರೋ ಒಂದಷ್ಟು ಜನ ಬಹಳವೇ ಕಷ್ಟಪಟ್ಟು ಮನೆ ಸೇರಿಸಿದೆವು ಎನ್ನುತ್ತಾ ಆ ಕೂಸು ಮತ್ತು ಹಸಿ ಬಾಣಂತಿಯ ಫೋಟೊ ಸಮೇತ ಬರೆದುಕೊಂಡಿದ್ದನ್ನು. ಇವರು ಯಾಕೆ 1098 ಸಹಾಯವಾಣಿಗೆ ಕರೆಮಾಡಲಿಲ್ಲ ಎಂದುಕೊಂಡೆ. ಸಹಾಯ ಮಾಡಲು ಮುಂದಾಗುವ ಜನರ ಮೊದಲ ಗುಣಲಕ್ಷಣ ಸಂಘಟಿಸಿಕೊಳ್ಳುವುದು ಮತ್ತು  ಈಗಾಗಲೇ ಆ ನಿಟ್ಟಿನಲ್ಲಿ ಇರುವ ಸರ್ಕಾರಿ ಮತ್ತು ಸರ್ಕಾರೇತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮತ್ತು ಸಂಪರ್ಕ ಇಟ್ಟುಕೊಳ್ಳುವುದು. ಇವುಗಳು ನಾನು ಕಲಿತಿರುವ ಪಾಠ. ನಾ ಕಲಿತದ್ದನ್ನು ಅಷ್ಟು ಸುಲಭಕ್ಕೆ ಬೇರೆಯವರಿಗೆ ಕೊಡೋಲ್ಲ, ಸ್ವಾರ್ಥಿ ಹಾಗಾಗಿ ಅವರಿಗೆ ಏನೂ ಹೇಳಲಿಲ್ಲ. 😆😆😆 ಈವರೆಗೆ ಹೇಳಿದ್ದು ವೈಯಕ್ತಿಕ, ಈಗ ಇನ್ನು ಮುಂದಿನದು ಸಾರ್ವಜನಿಕ ದಾಖಲೆಯಲ್ಲಿ ಇರುವ ವಿಷಯ: Reproductive Health ಎನ್ನುವುದು ನಮ್ಮ ಸಂವಿಧಾನದದ ಪರಿಚ್ಚೇಧ 14,15 ಮತ್ತು 21 ರಲ್ಲಿ ನಮ್ಮ ಹಕ್ಕು. ಹಾಗೆಯೇ Universal Declaration of Human Rights, Convention For Elimination of all All Forms of Violence  Against Women and Child Rights Coventionಗಳ ಪ್ರಕಾರ ಗರ್ಭವತಿ ಮತ್ತು ಬಾಣಂತಿ ಮತ್ತು ಕೂಸುಗಳಿಗೆ ಆರೋಗ್ಯಕರ ವಾತಾವರಣ, ಪೌಷ್ಠಿಕಾಂಶ, ಚಿಕಿತ್ಸೆಯ ಹಕ್ಕುಗಳು ಇವೆ. ಇದರಲ್ಲಿ ಸಮಯ ಬಿದ್ದಾಗ...

ಆಪ್ತಸಮಾಲೋಚನೆ ಮತ್ತು Mental Helath

Image
ಆಪ್ತಸಮಾಲೋಚನೆ ಮಾಡುವುದು ಎಂದರೆ ಶಾರುಖ್ ಖಾನ್ ನ ಕೆನ್ನೆಯ ಗುಳಿಯಷ್ಟು ರೊಮ್ಯಾಂಟಿಕ್ ಅಲ್ಲ.... #DearZindagi  ಯೇ ಇಲ್ಲಿ ಕೇಳು..... ತಮ್ಮ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹೋದವರನ್ನು 3-6 ತಿಂಗಳ course ಎಂದು ಹೇಳಿ ಅದಕ್ಕೆ ಒಂದು certificate ಕೊಟ್ಟು ಕಳುಹಿಸಿ, ಇನ್ನು ಮುಂದೆ ಅವರುಗಳು ಆಪ್ತ ಸಮಾಲೋಚನೆ ಮಾಡಬಹುದು ಎನ್ನುವ ನಾಯಿಕೊಡೆಗಳನ್ನು ಹುಟ್ಟಿಸುತ್ತಿರುತ್ತಾರೆ ಕೆಲವು ಸಂಸ್ಥೆಗಳು ಮತ್ತು ವೈದ್ಯರೂ. ಆದರೆ ಆಪ್ತಸಮಾಲೋಚನೆ ಸುಲಭ ಕ್ಷೇತ್ರ ವಲ್ಲ. ವರ್ಷಾನುಗಟ್ಟಲೆ ಅದೇ ವಿಷಯದಲ್ಲಿ ಅಧ್ಯಯನ ಮಾಡಿದವರೂ ಈ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಕೆಲಸ ಮಾಡುತ್ತಲೇ ಇದ್ದಾರೆ. ಚೆನ್ನಾಗಿ ಮಾತನಾಡುವವರು, ತಾಳ್ಮೆಯಿಂದ ಕೇಳಿಸಿಕೊಳ್ಳುವವರು, ಅಯ್ಯೋ ಪಾಪ ಎನ್ನುವವರು ಇವರೆಲ್ಲರೂ ಉದ್ಭವ ಮೂರ್ತಿಗಳಂತೆ ಆಪ್ತ ಸಮಾಲೋಚಕರು ಆಗಲು ಸಾಧ್ಯವಿಲ್ಲ. ಮುಖಾಮುಖಿ ಸಮಾಲೋಚನೆಗಿಂತ ಫೋನ್ ಮೂಲಕ online ಮೂಲಕ ಮಾಡಲು ಹೆಚ್ಚಿನ ಕಲಿಕೆ ಬೇಕಿರುತ್ತದೆ. *ಅದರಲ್ಲೂ ಮಕ್ಕಳಿಗೆ ಹದಿಹರೆಯದವರಿಗೆ ಆಪ್ತ ಸಮಾಲೋಚನೆ ಮಾಡಲು*  ಎಷ್ಟು ಅನುಭವ, ಜ್ಞಾನ ಇದ್ದರೂ ಕಡಿಮೆಯೇ. ಸಹಾಯ ಕೇಳುವವರು ಸಮಾಲೋಚಕರ ಮೇಲೆ ಮಾನಸಿಕವಾಗಿ ಎಷ್ಟರ ಮಟ್ಟಿಗೆ ಅವಲಂಬಿತ ಆಗಿರುತ್ತಾರೆ, ಅವರನ್ನು ನಮ್ಮ ಅಂತರಂಗದ ಹೊಸಿಲು ದಾಟದಂತೆ ಯಾವಾಗ ತಡೆಹಿಡಿಯಬೇಕು, ಅದರಿಂದ ಅವರ ಮೇಲೆ ಆಗುವ ಪರಿಣಾಮ ಏನು , ಅವುಗಳ ನಿಭಾವಣೆ ಹೇಗೆ ಎನ್ನುವ ಆರಿವು ಸಾಕ...

Obstructing a public servant is an offence

Image
ದೆಹಲಿಯಲ್ಲಿ ಮನೆ owner ಗಳು ತಮ್ಮ ಮನೆಯಲ್ಲಿ ಬಾಡಿಗೆ ಇರುವ ವೈದ್ಯರನ್ನು ಏಕಾಏಕಿ ಹೊರಹಾಕುತ್ತಿದ್ದಾರೆ. ಅದಕ್ಕೆ ದೆಹಲಿ ಸರ್ಕಾರ ಕೆಳಗಿನಂತೆ ಆದೇಶಿಸಿದೆ. ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 186 ಮತ್ತು 353 ಪ್ರಕಾರ ಪೊಲೀಸ್, health officers, ವೈದ್ಯರು ಇವರುಗಳಿಗೆ ಕರ್ತವ್ಯ ನಿರ್ವಹಣೆಗೆ ಸಂಬಂಧಪಟ್ಟಂತೆ ಯಾವುದೇ ತೊಂದರೆ ಕೊಡುವುದು ಶಿಕ್ಷಾರ್ಹ ಅಪರಾಧ. ಜೈಲು ಶಿಕ್ಷೆಗೆ ಇರುತ್ತದೆ. ಜೀವಕ್ಕೆ ಬೆಲೆ ಕೊಡಬೇಕು ಎನ್ನುವ ಮನಸ್ಸು ಆಳಿದ ಮೇಲೆ, ಕಾನೂನನ್ನು ಗೌರವಿಸಬೇಕು ಎನ್ನುವ ನಾಗರೀಕತೆ ನಶಿಸಿ ಹೋದ ಮೇಲೆಯೇ ಕೊರೋನ ಹುಟ್ಟಿದ್ದು!
Image
ಮಹಿಳೆಯರ ಆಸ್ತಿ ಹಕ್ಕಿನ ಬಗ್ಗೆ ಹಿಂದೊಮ್ಮೆ... https://m.youtube.com/watch?v=wYIsBHEhaVs&feature=youtu.be https://m.youtube.com/watch?v=zuMNJmJZm6k&feature=youtu.be

ಗರ್ಭಾಶಯ ತೆಗೆಯುವುದು Removal of Uterus and Law

Image
ಅಂಗಾಂಗಗಳ ದಾನದ ಬಗ್ಗೆ ಇರುವ ಪ್ರತ್ಯೇಕ ಕಾನೂನಿನ ರೀತಿಯಲ್ಲಿ, ಗರ್ಭಕೋಶ ಅಥವಾ ಗರ್ಭಾಶಯವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ನಮ್ಮಲ್ಲಿ ಯಾವುದೇ ಪ್ರತ್ಯೇಕ ಕಾನೂನು ಇರುವುದಿಲ್ಲ. ಈ ವಿಷಯಕ್ಕೆ ಸಂಬಂಧಪಟ್ಟ ಅಪರಾಧಗಳನ್ನು ಸಂವಿಧಾನದ ಪರಿಚ್ಛೇಧ ೨೧, ಭಾರತೀಯ ದಂಡ ಸಂಹಿತೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಕರಾರು ಕಾಯಿದೆಗಳ ಅಡಿಯಲ್ಲಿ ಪ್ರಕ್ರಿಯೆಗೆ ಒಳ ಪಡಿಸಲಾಗುತ್ತದೆ. ಜೊತೆಗೆ ವೈದ್ಯಕೀಯ ನಿರ್ಲಕ್ಷ್ಯ ಕಾನೂನು ಮತ್ತು ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು ೧೯೭೨ ರ ಅನ್ವಯ ತೀರ್ಮಾನಿಸಲಾಗತ್ತದೆ. ಅಲ್ಲದೆ ಇಂತಹ ಪ್ರಕರಣಗಳನ್ನು ತೀರ್ಮಾನ ಮಾಡುವಾಗ ಭಾರತೀಯ ವೈದ್ಯಕೀಯ ಮಂಡಳಿ  ಈಗಾಗಲೇ ರೂಪಿಸಿರುವ ನಿಯಮಾವಳಿಗಳನ್ನು ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಗಣಿಸಲಾಗುತ್ತದೆ. ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು, ೧೯೭೨ ಮತ್ತು ೧೯೭೫ ರ ತಿದ್ದುಪಡಿ ಹಾಗು ಭಾರತೀಯ ವೈದ್ಯಕೀಯ ಗರ್ಭಪಾತ ತಿದ್ದುಪಡಿ ಕಾನೂನು ೨೦೦೨ ಅಧಿನಿಯಮಗಳ ಪ್ರಕಾರ ಗರ್ಭಕೋಶವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ  ಮೂಲಕ ತೆಗೆದು ಹಾಕುವ ಅವಕಾಶವನ್ನು ವೈದ್ಯರಿಗೆ ನೀಡಲಾಗಿದೆ ಆದರೆ ಅಂತಹ ಸಂದರ್ಭವನ್ನೂ ವಿವರಿಸಲಾಗಿದೆ. ಅಪರೂಪದಲ್ಲಿ ಅಪರೂಪ ಎನ್ನುವ ಪರಿಸ್ಥಿಯಲ್ಲಿ ಗರ್ಭಿಣಿಗೆ ಸಹಜ ಹೆರಿಗೆ ಸಾಧ್ಯವಾಗದಾದಗ, ಕೇವಲ ಸಿಜೇರಿಯನ್ ಮೂಲಕವೂ ಮಗುವನ್ನು ಹೊರ ತೆಗೆಯಲ...
Image
ನಿಮ್ಮ ಬಿಡುವಿನ ವೇಳೆಯಲ್ಲಿ ಕೇಳಿ, ಹೇಳಿ🙏 8th March 2020 ಸಾವಣ್ಣ ಪ್ರಕಾಶನದ ಏನೋ ಹೇಳುತ್ತಿದ್ದಾರೆ  ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಡಿದ ಮಾತುಗಳು    ಕೆಳಗಿನ Link ನಲ್ಲಿ ಇದೆ. https://youtu.be/Cg3_AUdaE0w
Image
11th April 2019 ಒಬ್ಬಳು ಹುಡುಗಿ. ಹದಿಹರೆಯ ಪ್ರೀತಿಯಲ್ಲಿ ಬಿದ್ದಳು. ಅವರಿಬ್ಬರೂ ಮದುವೆಯಾದರು. ಕೂಡಲೇ ಬಸುರಿಯಾದ ಹುಡುಗಿ ಪೊಲೀಸರ ಭಯದಿಂದ ಕಣ್ಣುತಪ್ಪಿಸುವ ಆಟದಲ್ಲಿ ಮತ್ತೊಂದು ರಾಜ್ಯದಲ್ಲಿ ಒಬ್ಬಳೇ ಬಂದು ನಿಂತಳು . 18 ವರ್ಷದ ಒಳಗಿನವಳು ತುಂಬು ಗರ್ಭಿಣಿ ಸರ್ಕಾರದ ಆಶ್ರಯಕ್ಕೆ ಬಂದಳು ಮಗುವಿಗೆ ಈಗ ಮೂರು ತಿಂಗಳು. ಇವಳನ್ನು ಹುಡುಕಿ ಪತ್ತೆ ಹಚ್ಚಿದ ಹುಡುಗ ಮತ್ತದೇ ಪೊಲೀಸ್ ಹೆದರಿಕೆಗೆ ಅವಳಿರುವಲ್ಲಿಗೆ ಬರುತ್ತಿಲ್ಲ. ಆದರೆ ಹುಡುಗಿ ಮತ್ತವರ ಮಗುವನ್ನು ಕರೆಯುತ್ತಿದ್ದಾನೆ. ಕಾನೂನಿನ ಪ್ರಕಾರ ಅವಳೀಗ ಈ ರಾಜ್ಯದ ಮಗಳು. 18 ತುಂಬದವಳನ್ನು ಅವಳ ರಾಜ್ಯದ ಮಗಳು ಮಾಡಬೇಕೆ ಹೊರತು ಸೊಸೆಯನ್ನಾಗಿಸಿ ಕಳುಹಿಸಿಕೊಡಲು ಸಾಧ್ಯವಿಲ್ಲ. ಇದಕ್ಕೆ ಸರ್ಕಾರದ ಕೆಲವು ನಿರ್ದಿಷ್ಟ  ಪ್ರಕ್ರಿಯೆ ಇದೆ ಮತ್ತು ಅದಕ್ಕೆ ನಿಗಧಿತ ಸಮಯವೂ ಇದೆ. ಹಾಗಾಗಿ ಕಾಯಲೇ ಬೇಕು. ಅಲ್ಲಿಯವರೆಗೂ ಆ ಮಗು ಮತ್ತದರ ಅಮ್ಮ ಕೌಟುಂಬಿಕ ಪರಿಸರದಿಂದ ವಂಚಿತರೇ. ಹಾಲ್ಕರೆಯ ತುಟಿಗಳ ಅ ಕೂಸಿನ ಎದುರು ಕುಳಿತು ಯೋಚಿಸುತ್ತೇನೆ “ನಿನ್ನ ಅಮ್ಮನಿಗೆ ಸ್ವಲ್ಪ ತಿಳುವಳಿಕೆ ಒಂದಿಷ್ಟು ಆತ್ಮವಿಶ್ವಾಸ ಇನ್ನೊಂದಿಷ್ಟು ಅಕ್ಷರ ಜ್ಞಾನ ಇದ್ದಿದ್ದರೆ ಕಂದ ನೀ ಕೂಡ ಸರಿಯಾದ ಸಮಯಕ್ಕೆ  ಭೂಮಿಗೆ ಬರುತ್ತಿದ್ದೆ ಮತ್ತು ಎತ್ತಾಡಿಸುವ ನಿನ್ನವರೊಡನೆಯೇ ಇರುತ್ತಿದ್ದೆ” ಎಂದು. ಗತ್ಯಂತರವಿಲ್ಲ ಮಗುವಿಗೆ ಮಗುವಾಗಿಯೇ ಉಳಿಯದೆ. ಆದರೆ ಮಗುವಿನ ಅಮ್ಮನಿಗೂ ಎಲ್ಲಾ ರೀತಿಯಿಂದಲೂ ಅಮ್ಮ...

Adoption - ದತ್ತು ತೆಗೆದುಕೊಳ್ಳಿ

Image
ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳಿ ಈ ಭೂಮಂಡಲವನ್ನು ಮುಂದಿನ ಪೀಳಿಗೆಗಳು ಬಾಳುವಂತಹ ಸ್ಥಿತಿಯಲ್ಲಿ ಬಿಟ್ಟು ಹೋಗಬೇಕೆಂದರೆ ಈಗಾಗಲೇ ಕಾಡುತ್ತಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಅವುಗಳ ಸಮೂಹಕ್ಕೆ ಬಾಡಿಗೆ ತಾಯ್ತನ ಎನ್ನುವ ಹೊಸ ಭೂತವನ್ನು ಹಾಕುವುದು ಉಚಿತವೇ? ಮಮತೆಗಾಗಿ ಕಾತರಿಸುತ್ತಿರುವ ಮಕ್ಕಳ ಬಾಳು ಹಸನಾಗಲಿ. : ಅಂಜಲಿ ರಾಮಣ್ಣ ತಾಯಿ ಆಗುವ ಅನುಪಮ ಅವಕಾಶ ಮತ್ತು ಅಪರಿಮಿತ ಸಂಭ್ರಮವನ್ನು ಹೆಣ್ಣಿಗೆ ಸ್ವಂತ ಮಾಡಿಕೊಟ್ಟ ಪ್ರಕೃತಿಯನ್ನು ಇನ್ನಷ್ಟು ಪ್ರೀತಿಸುತ್ತಲೇ, ತಾಯಿ ಆಗುವುದು ಬರಿಯ ಹೆಣ್ಣಲ್ಲ ಗಂಡು ಕೂಡ ಅಪ್ಪನ ರೂಪದಲ್ಲಿ ಎನ್ನುವ ಇಂದಿನ ಸತ್ಯವನ್ನು ಅಪ್ಪಿಕೊಂಡು ಮುದ್ದಿಸಲೇಬೇಕಿದೆ. ಬಾಡಿಗೆ ತಾಯ್ತನ ಹೊಂದುವ ಸಾಧ್ಯತೆಯನ್ನು ತೆರೆದುಕೊಟ್ಟಿದ್ದು ವಿಜ್ಞಾನದ ಅಸೀಮ ಸಾಧನೆಯೇ ಹೌದು. ಮಕ್ಕಳಿಲ್ಲದವರ ಕಣ್ಣೀರು ಒರೆಸುವ ಒಂದು ಸಾಧನ ಎಂದು ಈ ಅವಿಷ್ಕಾರವನ್ನು ಬಣ್ಣಿಸುವುದನ್ನು ಮಾತ್ರ ಒಪ್ಪಲಾಗದು. ಭಯೋತ್ಪಾದಕರಾಗಿ ಪರಿವರ್ತಿತರಾಗುವ ಮಕ್ಕಳ ವಿಷಯದಲ್ಲಿ ವಿಯೆನ್ನಾ ದೇಶದಲ್ಲಿರುವ ವಿಶ್ವ ಸಂಸ್ಥೆಯ ಕೇಂದ್ರದಲ್ಲಿ ವಿಶೇಷವಾಗಿ ಅಧ್ಯಯನ ನಡೆಸಲಾಗುತ್ತದೆ. ಅಲ್ಲಿನ ಸಮೀಕ್ಷೆಯ ಪ್ರಕಾರ ಧರ್ಮದ ಆಫೀಮು ಮೆದ್ದು ಭಯೋತ್ಪಾದನೆಗೆ ತೊಡಗುವವರ ಸಂಖ್ಯೆಗಿಂತ ಬಡತನ ಮತ್ತು ಕುಟುಂಬದ ವಾತ್ಸಲ್ಯದಿಂದ ವಂಚಿತರಾಗಿ ಭಯೋತ್ಪಾದನೆಗೆ ಇಳಿಯುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮ ದೇಶದಲ್ಲಿಯೇ ಕಾರಣಗಳಿಂದ ಜನ್ಮ ಕಾಲದಲ್ಲ...
Image
ಅವಳು ಈ ದಿನವೂ ಮನೆ ಕೆಲಸಕ್ಕೆ ಬರಲಿಲ್ಲ. "ಯಾವೊನ ಜೊತೆ ಆಡಕ್ಕೆ ಹೋಗಿದ್ದೆ?" "ಮಲಕೊಳಕ್ಕೆ ಹೋಗ್ತೀಯ" - ಇಂತಹ ಮಾತುಗಳು ಅವಳನ್ನು ರೇಜಿಗೆ  ಬೀಳಿಸುತ್ತವೆ. ವಾದ ಮಾಡ್ತಾಳೆ. ಜಗಳ ಆಡ್ತಾಳೆ. ಅವನು ಬಾಸುಂಡೆ ಬರುವ ಹಾಗೆ ಬಡೀತಾನೆ. ಇವಳು ರಕ್ತ ಒರೆಸಿಕೊಳ್ಳುತ್ತಾ ಕಣ್ಣೀರು ಸುರಿಸುತ್ತಾ ಮೂಲೆ ಸೇರುತ್ತಾಳೆ. ಇದು ಆ ವೃತ್ತಿಯವರ ಬಗೆ ಮಾತ್ರವಲ್ಲ. ಹೆಂಗಸು ಲಾಯಾರ್ಗಳೂ ಗೋಳಿಡ್ತಾರೆ. ಕಾರ್ಪೊರೇಟ್ ವಲಯದ ಹೆಂಗಸರ ವಿಷಯ ಡೈವೋರ್ಸ್ ವರೆಗೂ ಹೋಗಿದೆ. ಬ್ಯಾಂಕ್ ಉದ್ಯೋಗಿಗಳು VRS ನಲ್ಲಿ ಕೊನೆಯಾಗಿಬಿಟ್ಟಿದ್ದಾರೆ. ಗಂಡಸರು ಯಾಕೆ ಹೀಗೆ ಎನ್ನುವುದಕ್ಕಿಂತ ನಾವ್ಯಾಕೆ ನಮ್ಮ charecter ಬಗ್ಗೆ ಅವರ validation ಬಯಸುತ್ತೇವೆ ಎನ್ನುವುದು ನನ್ನನ್ನು ಕಾಡುತ್ತೆ. "So Be It" ಎನ್ನುವವರೆಗೂ ನಮಗೆ ಉಳಿಗಾಲವಿಲ್ಲ. #FamilyCourtಕಲಿಕೆ
15th March 2019 ಗುಲ್ಜ಼ಾರ್‍ರ ಕವಿತೆಗಳನ್ನು ಓದುವುದೆಂದರೆ ಒಡೆದ ಕನ್ನಡಿಯ ಪ್ರತಿ ಚೂರಿನಲ್ಲೂ ನನ್ನದೇ ಪೂರ್ಣ ಬಿಂಬಗಳನ್ನು ನೋಡಿಕೊಂಡಂತಹ ಅನುಭವ. ಮೊನ್ನೆಯ ಓದಿನಲ್ಲಿ ಸಿಕ್ಕ ಸಾಲುಗಳು “ಎಂತಹ ಅಪರಿಚಿತ ಈ ಪರಿಚಯದಾಟ? ನೋವಿಗೂ ನೆರಳಿಗೂ ಇದ್ಯಾವ ಪರಿಯ ಕಣ್ಣುಮುಚ್ಚಾಲೆಯಾಟ” ಓದುತ್ತಿದ್ದಂತೆ ನನ್ನೊಳಗೂ ಹೊರಗೂ ಮೌನದ್ದೇ ಓಡಾಟ. ‘ಬಣ್ಣ ಶಕ್ತಿ ರುಚಿ’ ಮೂರು ಗುಣಗಳುಳ್ಳ ಚಹಾ ಎನ್ನುವ ತಲೆಬರಹ ಹೊತ್ತು ಬರುವ ಚಹಾದ ಜಾಹೀರಾತೊಂದು ನೆನಪಾಯ್ತು. ನಮಗೂ ಈ ಸಾಲಿಗೂ ಎಷ್ಟೊಂದು ಸಾಮ್ಯತೆ ಎನಿಸಿತು. ಈ ಜಗತ್ತಿನ ಪ್ರತೀ ಹೆಣ್ಣು ದೇಹವೂ ಈ ಮೂರು ಗುಣಗಳನ್ನು ಹೊತ್ತು ತಂದರೂ ತಮ್ಮತಮ್ಮಲ್ಲೇ ವಿಭಿನ್ನವಾಗಿ ನಿಲ್ಲುವ ಸೄಷ್ಟಿಯ ಸೋಜಿಗವೇ ಸರಿ. ಕೋಟ್ಯಾಂತರ ಸಂಖ್ಯೆಯಲ್ಲಿ ಭೂಮಂಡಲದ ಉದ್ದಗಲಕ್ಕೂ ಹಂಚಿಹೋಗಿದ್ದರೂ ಯಾರದ್ದೋ ಖುಷಿಯ ಒಂದು ನಗು ನಮ್ಮ ಮನಸ್ಸಿನಲ್ಲಿ ಅರಳುತ್ತೆ. ಮತ್ತ್ಯಾರದ್ದೋ ದೇಹಕ್ಕಾದ ಒಂದು ಗಾಯ ನಮ್ಮ ಮನಸ್ಸನ್ನು ಘಾಸಿಗೊಳಿಸುತ್ತೆ. ನಾವೆಲ್ಲರು ಅಪರಿಚಿತರು ಆದರೂ ಎಷ್ಟೊಂದು ಪರಿಚಿತರು ಎನ್ನಿಸುವ ಹೊತ್ತಿನಲ್ಲೇ ಒಂದಷ್ಟು ಅಪರಿಚಿತ ಹೆಂಗಸರ ಪಾಡು ನೆನಪಾಯ್ತು. ಅವಳಿಗೆ ಮೂವತ್ತಾಗಿದೆ. ಸಾಫ್ಟ್‍ವೇರ್ ತಂತ್ರಜ್ಞೆ. ಹೊತ್ತುಗೊತ್ತಿಲ್ಲದ ಕೆಲಸ. ಕಣ್ಣಿಗೆ ರಾಚುತ್ತಿರುವ ಆಕಾಂಕ್ಷೆ-ಗುರಿ, ಆದರೆ ಬಸಿರಾಗಬೇಕೆನ್ನುವ ಬಯಕೆ. ಸಂಸಾರವೋ? ಉದ್ಯೋಗವೋ? ಯಾವುದನ್ನು ಹೇಗೆ ಆಯ್ಕೆ ಮಾಡುವುದು ಎನ್ನುವ ಗೊಂದಲದಲ್ಲಿದ್ದಾಳೆ. ದಿನ ಕಳೆ...
Image
ಕೊಂಡಿ ಕಳಚುವ ಮುನ್ನ.... ಅವಳು ಹಾಡುತ್ತಿದ್ದದ್ದು ಶುದ್ಧ ದೈವತವೇನು ಶೃತಿ ಪೆಟ್ಟಿಗೆ ಎಲ್ಲಿ ವೇದಿಕೆಯ ಮೇಲೆ ಓಹ್ ಇವಳು ತಂಬೂರಿ ಮೀಟಿದವಳಲ್ಲವೆ.... ಕೆಂಪಂಚಿನ ಸೀರೆಯಾಕೆ ದಿನಪತ್ರಿಕೆ ಓದಿದವರಂತೆ ಇವಳೇ ಅಲ್ಲವೇ ತಂಗಿ - ತಂಗೀ ಎಂದವಳು ಕಾಲು ಚಾಚದೆಯೇ ಅಕ್ಕನಾದವಳು..... ಮಡಿ ಹೆಂಗಸಿನ ಮನೆಯ ಸೊಸೆಯಾದವಳು ವರಳು ಕಲ್ಲಿನಲಿ ಗರಿ ದೋಸೆಯ ಹದ ಕಲಿತವಳು ಈಗ ಯಾರ ಮಾತೂ ಕೇಳದ ಬೀಗಿತ್ತಿಯ ಹಠದವಳು.... ಮುತ್ತೈದೆ ಸಾವಾಗಲಿ ಸಾಲಲ್ಲಿ ಗಂಡುಗಳ ಹೆರಲಿ ಅಲ್ಲುರಿಯುತ್ತಿರುವ ದೀಪಕ್ಕೆ ಮತ್ತೊಬ್ಬಳು ಹೂಬತ್ತಿ  ಹೊಸೆಯುತಿರಲಿ.... ಚಿತ್ರಮಂದಿರ ಭರ್ತಿಯಾಗಿದೆ ಬೋರ್ಡು ಸಿಕ್ಕಿಸಿಯಾರು ಧಾವಂತದಲ್ಲೇ ಸರತಿಯಲಿ ನಿಲ್ಲುವರು ಬರಿದಾದವರು ಸಿನೆಮಾ ನೂರು ದಿನ ಓಡಿಸುತ್ತಾರೇನು ಅವರು... ಮೈಭರ್ತಿ ಹೂವು ಹೊದ್ದವಳ ನೆತ್ತಿಯಲಿ ಬಿಳಿಕೂದಲ ಮುಷ್ಕರ ಇಂದು ಸದ್ದು - ಮೌನ ಇಬ್ಬರಿಗೂ  ಸಂಬಂಧಿಯಲ್ಲ ಅವಳಿಂದು.... ಅವಳು...ಅವಳು  ಸೋದರತ್ತೆ ಹೇಳುತ್ತಿದ್ದಾಳೆ ಕೊಂಡಿ ಕಳಚುವ ಮುನ್ನ ಕೊಂಚ ಮಾತಾಡಿ ಪ್ಲೀಸ್ ! #ಸೋದರತ್ತೆಏನೋಹೇಳುತ್ತಿದ್ದಾಳೆ 07 ಜನವರಿ 2020 10.20 ರಾತ್ರಿ Photo Taken at Athens, Greece
Image
ಇಂದಿನ ಆಂದೋಲನ ಪತ್ರಿಕೆಯಲ್ಲಿ .... 17th November  2019 #UNCRC30 ಗುಬ್ಬಚ್ಚಿ ದೇಹದ ಒಂಭತ್ತರ ಹರೆಯದ ಅವಳು ನನ್ನ ಮುಂದೆ ಕುಳಿತಾಗ ಆತಂಕದ ಮುಖದಲ್ಲಿ ಸಣ್ಣಗೆ ಅಳುತ್ತಿದ್ದಳು, ಭಯದಿಂದ ಸ್ವಲ್ಪವೇ ನಡುಗುತ್ತಿದ್ದಳು. ಏನಾಯ್ತು ಮಗು ಎನ್ನುತ್ತಾ  ಅವಳ ಹತ್ತಿರ ಹೋದಾಗ ಅವಳ ಉಸಿರು ನಿಲ್ಲುತ್ತದೆಯೇನೋ ಎನ್ನಿಸಿತು. ಅದು ಆ ದಿನದ ಮೊದಲ ಕೇಸ್. ಮಕ್ಕಳ ಸಹಾಯವಾಣಿಯವರು ತಮಗೆ ಬಂದ ಕರೆಯನ್ನು ಆಧರಿಸಿ ಯಾರದ್ದೋ ಮನೆಯಲ್ಲಿ ಮನೆಗೆಲಸಕ್ಕೆ ಇದ್ದ ಸಲ್ಮಾಳನ್ನು ರಕ್ಷಿಸಿ ಹೀಗೆ ಇಲ್ಲಿ ಕರೆತಂದಿದ್ದರು. ಅವಳ ಕತ್ತು ಹಣೆಯ ಮೇಲೆ ಬಾಯ್ದೆರೆದು ನಿಂತ್ತಿದ್ದ ಗಾಯಗಳಲ್ಲಿ ನನ್ನ ರಕ್ತ ಕುದಿಯುತಿತ್ತು. ಬಾಲ ಕಾರ್ಮಿಕ ನಿಷೇಧ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಲು ವೈದ್ಯಕೀಯ ಪರೀಕ್ಷೆ ಮಾಡಿಸಬೇಕಿತ್ತು. ಸಲ್ಮಾಳನ್ನು ಸಮಾಧಾನ ಪಡಿಸಿ ವೈದ್ಯರ ಬಳಿ ಕಳುಹಿಸಿದ್ದಾಯ್ತು. ಹತ್ತೇ ನಿಮಿಷದಲ್ಲಿ ಮೊಬೈಲ್ ರಿಂಗುಣಿಸಿತು. ಅತ್ತ ಕಡೆಯಿಂದ ಡಾಕ್ಟರ್ ’ಏನು ಮೇಡಮ್ ಇದು, ಯಾವ ರಾಕ್ಷಸರ ಮನೆಯಲ್ಲಿ ಇತ್ತು ಈ ಮಗು? ಛೇ, ನನಗೇ ತಡೆದುಕೊಳ್ಳಲು ಆಗುತ್ತಿಲ್ಲ” ಎಂದು ಖಿನ್ನರಾಗಿದ್ದರು. “ನಮ್ಮ ವೃತ್ತಿಯಲ್ಲಿ ಇದೆಲ್ಲಾ ಸಾಮಾನ್ಯ ಅಲ್ಲ್ವಾ ಡಾಕ್ಟರ್, ಏನು ಮಾಡೋದು ಹೇಳಿ. ನೀವೊಂದು ರೆಪೋರ್ಟ್ ಮಾಡಿಕೊಟ್ಟರೆ ಈಗಲೇ FIR ಹಾಕಿಸಲಾಗುತ್ತೆ ’ ಎಂದೆ. ಅದಕ್ಕಾತ “ ಬರೀ ಕಂಪ್ಲೇಂಟ್ ಅಲ್ಲ ಮೇಡಮ್ ಅವರನ್ನು ನೇರವಾಗಿ ನೇಣುಗಂಭಕ್ಕೇ ಹಾಕಬೇಕು “ ...
Image
ಇವತ್ತು ಆಂದೋಲನ ಪತ್ರಿಕೆಯಲ್ಲಿ ...... ಜಗದಾಂಬ ನನ್ನಲ್ಲಿಗೆ ಬರಲಾರಂಭಿಸಿ ಮೂರು ವರ್ಷವಾಗಿತ್ತು.  ಸುಭದ್ರ ಸರ್ಕಾರಿ ಕೆಲಸ, ಬದುಕಲು ಬೇಕಾದಷ್ಟು ವಿದ್ಯ್, ಅನುಮಾನದ ಮನಸ್ಸುಗಳನ್ನು ಕಾಡಲಾರದ ವಯಸ್ಸು. ಲಕ್ಷಣವಾದಾಕೆ. ಅವಳಿಗೊಬ್ಬ ಗಂಡ. ವಕೀಲ. ಎಂಟು ಗಂಡಂದಿರು ಅಷ್ಟಪತ್ನಿಯರನ್ನು ಹಿಂಸಿಸುವಷ್ಟು ಇವನೊಬ್ಬನೇ ಅವಳನ್ನು ಕಾಡಿ ಪೀಡಿಸಿದ್ದಾನೆ. ಆಕೆ ಕಚೇರಿಯಿಂದ ಸಾಲ ಪಡೆದು ತೆಗೆದುಕೊಂಡ ಸೈಟು ಅದರಲ್ಲಿ ಕಟ್ಟಿದ ಮನೆ. ಅಲ್ಲೇ ವಾಸ. ಅವನು ರಾತ್ರೊರಾತ್ರಿ ಬೀರುವಿನಿಂದ ಮನೆಯ ದಾಖಲೆ ಪತ್ರಗಳನ್ನು ಲಪಟಾಯಿಸಿಕೊಂಡು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡು ಮಾರಾಟ ಮಾಡಲು ಗಿರಾಕಿಯನ್ನು ಕರೆತಂದಾಗ ಈಕೆ ನನ್ನಲ್ಲಿಗೆ ಓಡಿ ಬಂದಳು. ಅದೊಂದು ದಿನ ಅವಳು ಬಂದಾಗ ಕೊರಳು, ಬೆನ್ನು, ಕೈ ಮೇಲೆಲ್ಲಾ ಯಾವ ಬ್ರಾಂಡಿನ ಸಿಗರೇಟು ಅಂತಲೂ ಹೇಳಬಹುದಾದಷ್ಟು ಕಿಡಿ ಗುರುತುಗಳು! ಅವಳ ಮುಖದಲ್ಲಿ ಸ್ವಲ್ಪವೂ ನೋವಿಲ್ಲ. ಇನ್ನೊಂದು ದಿನ ಇವಳಿಂದಲೇ ಅಲಂಕರಿಸಿಕೊಂಡ  ಮಂಚಕ್ಕೆ ಲಲನೆಯೊಡನೆ ಲಗ್ಗೆ ಇಟ್ಟಾಗ ಇವಳೇ ಕೋಣೆಯ  ಕದವಿರಿಸಿ  ಬಂದಿದ್ದಳು.  ನನ್ನ ಬಳಿ ಹೇಳುವಾಗ ಅವಳ ಧ್ವನಿಯಲ್ಲಿ ಯಾವ ಏರಿಳಿತವೂ ಕಾಣದು. ಅವನು ಕುಡಿದ ಅಮಲಿನಲ್ಲಿ ಎಲುಬಿಲ್ಲದ ನಾಲಿಗೆ ಹರಿಬಿಡುವಾಗ ಅಕ್ಕಪಕ್ಕದ ಮನೆಗಳ ಕಿಟಕಿ ತೆರೆ ಸರಿಯುವುದೇ ಇವಳಿಗೆ ಮಾನಭಂಗ. ಅದಕ್ಕೆ ನಾಗರಭಾವಿಗಿಂತಲೂ ಆಳವಾದ, ಜನ ಮುಟ್ಟದ ಏರಿಯಾದಲ್ಲಿ ಮನೆಮಾಡಿಕೊಂಡು ಅಲ್ಲಿಗೆ ವ...
Image
Juvenile Justice Act ಮತ್ತು Rules ಅಡಿಯಲ್ಲಿ ಮಕ್ಕಳ ಅನುಸರಣ ಸಂಸ್ಥೆಗಳ ಪಾತ್ರ ಮತ್ತು ಜವಾಬ್ದಾರಿ ಏನು ಎನ್ನುವುದರ ಬಗ್ಗೆ ವಿವಿಧ ರಾಜ್ಯಗಳಿಂದ ಬಂದಿದ್ದ ಅಧಿಕಾರಿಗಳಿಗೆ ತಿಳಿದದ್ದು ಹೇಳಿ ಬಂದೆ. At NIPCCD, ಬೆಂಗಳೂರು 11 ಮಾರ್ಚ್ 2020

Dalai Lama a droplet of divinity!

Image
25/Oct/2015 ಊರಲೆಲ್ಲಾ ಬೊಂಬೆ ಹಬ್ಬದ ಸಡಗರ ಶುರುವಿಟ್ಟಿತ್ತು.  ಲಕ್ಷಣವಾಗಿ ಮೆಟ್ಟಿಲು ಮೆಟ್ಟಿಲಾಗಿ ಬೊಂಬೆಗಳನ್ನು ಕೂರಿಸಿ, ಕಲಶವಿಟ್ಟು ಸಂಭ್ರಮಿಸದೆ ‘ ನಿನ್ನ ಕೈಲಾಡೋ ಬೊಂಬೆ ನಾನಯ್ಯ. . .ತಾನೋ ತಂದಾನೋ ತಾನೊ. . .’ ಅಂತ ಊರು ಸುತ್ತಲು ಹೊರಟವಳನ್ನು ಈ ಬಾರಿ ಸ್ವಾಗತಿಸಿದ್ದು ಹಿಮಾಚಲಪ್ರದೇಶದಲ್ಲಿ ಇರುವ ಧರ್ಮಶಾಲ ಎನ್ನುವ ಪುಟ್ಟ ಗಿರಿಧಾಮ. ಇಲ್ಲಿನ ಜನ ‘ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನು ಇದಕೆ ಸಂಶಯ ಬೇಡ’ ಎನ್ನುವ ಕನಕೋಕ್ತಿಯನ್ನು ಅಕ್ಷರಶಃ ಬದುಕುತ್ತಿದ್ದಾರೆ. ನಾಳಿನ ಬಗ್ಗೆ ಆತಂಕ, ಹಿಂದಿನವನೊಡನೆ ಜಂಜಾಟ, ಮುಂದಿನವನೊಡನೆ ಕಾದಾಟ, ಏಣಿಯೇರುವ ಆಕಾಂಕ್ಷೆಗಳ ಭರಾಟೆ ಏನೊಂದೂ ಕಂಡುಬಾರದ ಇಲ್ಲಿನ ಜನರೊಳಗಿನ ಶಾಂತಿಯನ್ನು ಆಸ್ವಾದಿಸುತ್ತಲೇ ಒಂದು ಹದಿನೈದು ಕಿಲೋಮೀಟರ್ಗಳಷ್ಟು ಬೆಟ್ಟ ಹತ್ತಿ, ಕಣಿವೆಯೊಳಗೆ ತೂರಿ, ಹಸಿರು ಪ್ರಪಾತವನ್ನು ಕಂಡು ಪುಂಗಿ ನಾದದಂತೆ ಬಾಗಿದರೆ, ಹಾವಿನಂತೆ ಹೊರಳಿ ಬಿಟ್ಟರೆ ಸಿಗುತ್ತೆ ಮೆಕ್ಲಿಯಾಡ್ ಗಂಜ್ ಎನ್ನುವ ಪ್ರಶಾಂತಿ ಧಾಮ. ಅಲ್ಲಿಯೇ ಇದೆ ‘ನ್ಯಾಂಗಲ್ ಬೌದ್ಧ ಮಂದಿರ’. ಇಲ್ಲಿ ವಾಸವಿರುವುದು ಹದಿನಾಲ್ಕನೆಯ ಬೌದ್ಧಗುರು ಇಂದಿನ ದಲೈ ಲಾಮ ಅವರು. ಇವರ ನಿಜ ನಾಮಧೇಯ ತೆಂಡ್ಜಿನ್ ಗ್ಯಾಟ್ಸೋ ಎಂದು. ದಲೈ ಲಾಮ ಪರಂಪರೆಗೆ 500 ವರ್ಷಗಳ ಇತಿಹಾಸವಿದೆ. ಆದರೆ ಅದರ ಮುಖ್ಯಸ್ಥಾನ ಭಾರತಕ್ಕೆ ಸ್ಥಳಾಂತರಗೊಂಡಿದ್ದು ಮಾತ್ರ 1959ರಲ್ಲಿ ಇದೇ ನ್ಯಾಂಗಲ್ ಬೌದ್ಧ ಮಂದಿರಕ್ಕೆ. ಇದು ದ...

ನಿಮಗೆ ದಾನ ಮಾಡುವ ಮನಸ್ಸಿದ್ದರೆ ಹೀಗೆ ಮಾಡಿ ...

Image
ಅನಾಥ , ಬಡ, ಗತಿಯಿಲ್ಲದ,ಮಕ್ಕಳು ಇವರ ಸೇವೆ  ಎನ್ನುವ ಹೆಸರಿನಲ್ಲಿ ಸಂಸ್ಥೆಗಳನ್ನು ನಡೆಸುವುದು ಒಂದು ಮಾಫಿಯಾದಂತೆ ಬೆಳೆಯುತ್ತಿದೆ. ಇದರಲ್ಲಾದರೂ ಸಂಪೂರ್ಣ ಕೆಟ್ಟು ನಿರ್ನಾಮರಾಗುವ ಮೊದಲೇ ಎಚ್ಚೆತ್ತುಕೊಳ್ಳೋಣ. ನಿಮಗೆ ದಾನ ಮಾಡುವ ಮನಸ್ಸಿದ್ದರೆ ಹೀಗೆ ಮಾಡಿ - *ಆ ಸಂಸ್ಥೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳ ಬಳಿ ನೋಂದಾವಣೆಯಾಗಿದೆಯೇ ಕೇಳಿ. *ಅನಾಥ ಮಕ್ಕಳು ಇದ್ದರೆ ಅವರನ್ನು ಜಿಲ್ಲಾಮಕ್ಕಳ ರಕ್ಷಣಾಧಿಕಾರಿಗಳ ಬಳಿ ನೋಂದಾಯಿಸಲಾಗಿದೆಯೇ ಕೇಳಿ. *ಅಲ್ಲಿರುವ ಮಕ್ಕಳನ್ನು ಆಯಾ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಎದುರು ಹಾಜರು ಪಡಿಸಿದ್ದಾರೆಯೇ ಕೇಳಿ. ಇದು ಸಾಧ್ಯವಾಗದಿದ್ದರೆ ನಿಮಗೆ ದಾನ ಮಾಡಬೇಕು ಎನಿಸಿದಾಗ ಅಂತಹ ದಾನಕ್ಕೆ ಯಾವ ಸಂಸ್ಥೆ ಅರ್ಹ ಎಂದು ಜಿಲ್ಲಾಮಕ್ಕಳ ರಕ್ಷಣಾ ಅಧಿಕಾರಿಗಳ ಕಚೇರಿಯಿಂದ ತಿಳಿದುಕೊಂಡು ಅಂತಹ ಸಂಸ್ಥೆಗೆ ಮಾತ್ರ ದಾನ ಮಾಡಿ. ನೀವು ಕೊಡುವ ದವಸ ಧಾನ್ಯ ಆಟಿಕೆ ಹೊಸ ಬಟ್ಟೆ ಪುಸ್ತಕ ಎಲ್ಲವೂ ಲಾಭಕ್ಕಾಗಿ ಅಂಗಡಿ ಸೇರುವುದನ್ನು ತಪ್ಪಿಸಿ. ಹಣ ದುರ್ಬಳಕೆ  ಆಗುವುದನ್ನು ತಡೆಗಟ್ಟಿ. ಇದು ಸಾಧ್ಯವಾಗದಿದ್ದರೆ ಅನಾಥ ಮಕ್ಕಳಿಗೆ ನಾವೇ ಅಪ್ಪ ಅಮ್ಮ ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ. ದಾನ ಮಾಡಬೇಡಿ. ನಮ್ಮ  ದಾನಮಹಾತ್ಮೆಯ ಫೋಟೋ  ಫೇಸಬುಕ್ನಲ್ಲಿ ಖಂಡಿತಾ ಹಾಕದಿರೋಣ.  ಇರುವ ಸುಪ್ತ ಅಹಂ ಅನ್ನು ತಣಿಸಿಕೊಳ್ಳುವ ದಾನವರಾಗದಿರೋಣ. ಮಕ್ಕಳ ಮನಸ್ಸು, ದೇಹ ಅವರ ಹಕ್ಕು #ಮಕ್ಕಳ...
Image
ಜಿಪುಣ ಅಂದ್ರೆ ಜಿಪುಣ ಈ ಕಾಲ ಅಂತ ರೇಗಿಕೊಳ್ಳುವಂತೆ ಮಾಡಿದ ಒಂದು ಸಂಜೆ... ವಿಜಯನಗರ ಬಿಂಬ ಸಂಸ್ಥೆಯ ಮಕ್ಕಳು ಮತ್ತು ಅವರ ತಾಯ್ತಂದೆಯರ ಜೊತೆ "ಮಕ್ಕಳು ಮತ್ತು ಸ್ವಾತಂತ್ರ್ಯ" ವಿಷಯದಲ್ಲಿ ಸಂವಾದ  20/April/2019

ಮತ ಹಾಕೋಣ ಬನ್ನಿ

Image
ಇವತ್ತು ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ..... ಅವತ್ತು ನನಗೆ 18 ತುಂಬಿದ ಮಾರನೆಯ ದಿನವೇ ಮತದಾರ ಗುರುತಿನ ಚೀಟಿ ಮಾಡಿಸಿಕೊಟ್ಟರು ನನ್ನ ತಂದೆ. ಇದೊಂದೇ  ಗುರುತಿಗಾಗಿ 18 ಆಗುವುದನ್ನೇ ಕಾಯುತ್ತಿದ್ದೆ. ಆಗ ತಿಳಿದೇ ಇರಲಿಲ್ಲ ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಎಂದು ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಎಂದು. ಕೈಯಲ್ಲಿ ವೋಟರ್ಸ್ ಐಡಿ ಇತ್ತು, ಮತ ಹಾಕಲೇ ಬೇಕು ಎನ್ನುವ ಹಠವೂ ಜೊತೆಯಾಗಿತ್ತು. ಆದರೇನು ಮಾಡುವುದು ಆಗ ಮೈಸೂರಿನಲ್ಲಿ ಕಾರ್ಪೊರೇಷನ್ ಚುನಾವಣೆಯೂ ಇರಲಿಲ್ಲ. ಅಂದು ಈಗಿನಷ್ಟು ಸರಾಗವಾಗಿ ಸರ್ಕಾರ ಬೀಳುವ ಭಯವಾಗಲೀ, ಪದ್ದತಿಯಾಗಲೀ ಇರಲಿಲ್ಲ. ಹಾಗಾಗಿ ಮತ್ತೆರಡು ವರ್ಷ ಕಾದೆ ಬೆರಳು ಮಸಿ ಮಾಡಿಕೊಳ್ಳಲು. ನಂತರದ ಒಂದು ಅವಕಾಶವನ್ನೂ ಬಿಡದೆಯೇ ಮತ ಚಲಾಯಿಸಿದ್ದೇನೆ ಎನ್ನುವ ಹೆಮ್ಮೆಯೊಂದಿಗೇ ವಯಸ್ಸು ರಾಜಕೀಯ ನಿಲುವುಗಳಷ್ಟೇ ಅತಂತ್ರದಿಂದ ಓಡುತ್ತಿದೆ. ಮೊನ್ನೆಮೊನ್ನೆಯವರೆಗೂ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಓಡಿ ಬರುತ್ತಿದ್ದೆ ಮೈಸೂರಿಗೆ, ನನ್ನೂರಿಗೆ ಅವಳಾತ್ಮದ ಒಂದು  ತುಣುಕೇ ಆದ ನಾನು ಮತಹಾಕಲು. ಈಗ ಬದುಕು ಕಲಿಸಿದೆ ತವರು ನೆಲದಲ್ಲೋ, ಅನ್ನ ಕೊಡುತ್ತಿರುವ ಭೂಮಿಯಲ್ಲೋ ರಾಜಕಾರಣಿಗಳೆಲ್ಲಾ ಒಂದೇ ಎಂದು ಹಾಗಾಗಿ ಮತಗುರುತಿನ ಚೀಟಿಯನ್ನು ಈ ಊರಿನ ವಿಳಾಸಕ್ಕೆ ಬದಲಾಯಿಸಿಕೊಂಡಿದ್ದೇನೆ ಆದರೆ ತಪ್ಪದ ಮತ ಹಾಕುವ ನನ್ನ ಚಾಳಿಯನ್ನಲ್ಲ. ಅನುಸರಿಸಿಕೊಂಡು ಬಂದ ಪದ್ದತಿಯನ್ನ...
Image
Consortium for Street Children ಜಗತ್ತಿನ 100ಕ್ಕೂ ಹೆಚ್ಚಿನ ದೇಶಗಳಲ್ಲಿ ಬೀದಿ ಮಕ್ಕಳ ಅಭಿವೃದ್ಧಿಗಾಗಿ ದಶಕಗಳಿಂದ  ಕೆಲಸ ಮಾಡುತ್ತಿರುವ Consortium for Street Children ಸಂಸ್ಥೆಯ ಅಧಿಕಾರಿ Jessica Clark ಮತ್ತು Stacy, Criminal Lawyer ಇವುಗಳಿಂದ ಕಲಿತದ್ದು ಅಪಾರ. Cambridge Heath Road, London 18th October 2018
Image
ಮಕ್ಕಳ ಸಂತೆ Children Fair at Freedom Park, Bangalore, Karnataka, India 18th March 2019

ಅಪರಿಚಿತ ಸಾವು- Dead body not claimed

15th April 2019 ಮೇಡಂ ಕಳೆದ ಹತ್ತು ವರ್ಷಗಳಿಂದ ನಮ್ಮ ಮನೆ ಎದುರುಗಡೆ ಒಬ್ಬ ವಾಚ್ಮನ್ ಕೆಲಸ ಮಾಡ್ತಿದ್ದ. ನೆನ್ನೆ ರಾತ್ರಿ ಅವನು ಸತ್ತು ಹೋಗಿದ್ದಾನೆ. ಅವನು ಯಾರು ಮನೆಯವರು ಯಾರು  ಒಂದೂ ಗೊತ್ತಿಲ್ಲಾ. ಹೆಣ ತೆಗೆದುಕೊಳ್ಳಲೂ ಯಾರೂ ಬಂದಿಲ್ಲ . ಯಾವುದಾದರೂ NGO ಅವನ ಕ್ರಿಯಾಕರ್ಮ ಮಾಡುತ್ತಾರಾ? ಕಾಂಟಾಕ್ಟ್ ನಂಬರ್ ಕೊಡಿ ಮೇಡಂ. ಹೀಗೆ ಗೊತ್ತು ಗುರಿ ಇಲ್ಲದ ಶವಗಳನ್ನು ಸಮಾಜ ಸೇವೆ ಹೆಸರಿನಲ್ಲಿ ಯಾರೋ ಕ್ರಿಯಾಕರ್ಮ ಮಾಡಿ ಮುಗಿಸುವುದು ಕ್ರಿಮಿನಲ್ ಅಪರಾಧ. ಪೊಲೀಸರಿಗೆ ತಿಳಿಸಬೇಕು ಮತ್ತು ತಿಳಿಸಲೇ ಬೇಕು. ಕಾರ್ಪೋರೇಶನ್ ವ್ಯಾನ್ ಅವರಿಗೆ ತಿಳಿಸಿದ್ದೇವೆ ಅವರು ಬಂದು ತೊಗೊಂಡು ಹೋಗ್ತಾರಂತೆ. ಉಹುಂ ಅದು ಕೂಡ ವಿಷಯ ತಿಳಿಸಿದವರನ್ನು ತೊಂದರೆಗೆ ಸಿಕ್ಕಿಸುತ್ತೆ. ಪೊಲೀಸ್ರಿಗೆ ತಿಳಿಸುವುದಕ್ಕಿಂದ ಬೇರೆ ಯಾವುದು "ಸನ್ಮಾರ್ಗ" ಇಲ್ಲ ನೆನಪಿರಲಿ.