Posts

Live - in Relationship

Image
  20-11-2022 ರ ಉದಯವಾಣಿಯಲ್ಲಿ ಲಿವಿನ್ ರೆಲೇಶನ್ಶಿಪ್ ಬಗ್ಗೆ ಬರಹ ;   ಇತ್ತು ಆ ಸಮಯ ಒಮ್ಮೆ, ಪ್ರೀತಿಸುವುದೆಂದರೆ ಮದುವೆಯಾಗುವುದು ಎಂದು. ಈಗ ಹಾಗಲ್ಲ, ಪ್ರೀತಿಸುವುದೆಂದರೆ ವಯೋಬೇಧವಿಲ್ಲದೆ ಪೋಷಕರನ್ನು ಧಿಕ್ಕರಿಸುವುದು, ಮನೆ ಬಿಟ್ಟು ಓಡಿಹೋಗುವುದು, ಕಾಮಾಕರ್ಷಣೆ ಮುಗಿದ ನಂತರ ಬೀದಿಪಾಲಾಗುವುದು. ಆಗೆಲ್ಲಾ, ಇಷ್ಟು exposure ಇರಲಿಲ್ಲ. ಮಕ್ಕಳು ಕುಟುಂಬದಂತೆ ಎನ್ನುವ ವ್ಯಕ್ತಿಗಳಾಗುತ್ತಿದ್ದರು. ಈಗ ಹಾಗಲ್ಲ, ಹೊಟ್ಟೆಯಿಂದಲೂ ಅವರ ನಿರ್ಧಾರ ಅವರದ್ದು.  ಕೆಲವಾರು ವರ್ಷ ಮದುವೆಯಿಲ್ಲದ ಕೂಡುವಿಕೆಯಲ್ಲಿ ಇದ್ದು, ಮಕ್ಕಳನ್ನು ಹೆತ್ತ ನಂತರ ಗಂಡಸು ಬಿಟ್ಟೆದ್ದು ಹೋಗಿರುವ ಏಕಪೋಷಕಿಯರು ಇದ್ದಾರೆ. ಸ್ನೇಹಿತೆಯರ ತಂದೆಯರ ಜೊತೆ ಎಲ್ಲವನ್ನು ತಿಳಿದೂ ಲಿವಿನ್ ರೆಲೇಷನ್ಷಿಪ್‍ನಲ್ಲಿರುವ ಯುವತಿಯರೂ ಇದ್ದಾರೆ. ಯಾಕೆ ಹೀಗೆ, ಹೌದು ಇದು ಎಲ್ಲರೂ ಈಗ ಕೇಳಿಕೊಳ್ಳುತ್ತಿರುವ ಪ್ರಶ್ನೆ. ಒಂದೊಮ್ಮೆ ಪ್ರೀತಿ ಎನ್ನುವ ಹೆಸರಿನಿಂದ ಒಂದಾಗಿ, ಒಪ್ಪಿ ಜೊತೆಯಲ್ಲಿ ನಡೆಸುವ ಜೀವನ, “ತನಗೆ ಬದುಕಲು ಬರುವುದಿಲ್ಲ, ನಿನ್ನನ್ನು ಬಾಳಲು ಬಿಡುವುದಿಲ್ಲ” ಎನ್ನುವ ಹಂತ ಯಾಕಾಗಿ ತಲುಪುತ್ತಿದೆ? ಮೊನ್ನೆಮೊನ್ನೆ ಓದಿದ 32 ಹದಿಹರೆಯದವರ ಬರಹಗಳಲ್ಲಿ ಬಹುಪಾಲು ಕುಟುಂಬದ ಪ್ರೀತಿಗಾಗಿ ಹಪಾಹಪಿಕೆಯದ್ದೇ ಆಗಿತ್ತು. ಆದರೆ ಅದನ್ನು ಮೀರಿದ್ದು ವಾಸ್ತವದಲ್ಲಿ ಯುವಜನರಲ್ಲಿ ಹೆಚ್ಚುತ್ತಿರುವ ಕಾಮಾತುರ ಮತ್ತು ಅಸಹನೆ. ಯಾವುದರ ನಿರಂತರತೆಯೂ ಅವರಿಗೆ ಅಸಹಜ ಎನ್ನುವಂತಾಗಿದೆ.

ಪುರುಷರ ದಿನ - Men Day

Image
  1. ಗಂಡು ಮಕ್ಕಳೇನ್ ಮೇಡಂ ಹೆಂಗಿದ್ರೂ ಆಗತ್ತೆ - ಅವನು ಗಂಡು ಹುಡುಗ ಅವನ್ ಮಾಡಿದ್ದೆಲ್ಲಾ ಇವಳೂ ಮಾಡ್ತೀನಿ ಅಂದ್ರೆ ಆಗತ್ತಾ - ಮನೆ ಹತ್ರ ಸೇಫ್ಟಿ ಇಲ್ಲ ಅದಕ್ಕೆ ಮಗಳನ್ನು ಹಾಸ್ಟೆಲ್ ಗೆ ಹಾಕಿದ್ದೀನಿ ಮೇಡಂ , ಮಗನ್ನ ಮನೇಲೇ ಇಟ್ಟ್ಕೊಂಡಿದ್ದೀನಿ - ಮಗನಿಗೆ ಸ್ಕೂಲ್ ಹೋಗದಿದ್ರೂ ಆಗತ್ತೆ ಮೇಡಂ ಗಂಡು ಹುಡುಗ ಅಲ್ಲವಾ ಜೀವನ ಹೇಗೋ ನಡೆಯತ್ತೆ ಆದರೆ ಮಗಳಿಗೆ ಹಂಗಾಗತ್ತಾ ಮೇಡಂ - ಈ ರೀತಿಯ ಮಾತುಗಳನ್ನು ಆಡುತ್ತಾ ಮುಂದೆ ನಿಲ್ಲುವ ತಾಯಂದಿರನ್ನು ಕಂಡಗೆಲ್ಲಾ ಅನುಭವದಿಂದ ಕಂಡುಕೊಂಡ ಮಾತುಗಳನ್ನು ಅವರಿಗೆ, ಇವರಿಗೆ ಹೇಳಬೇಕು ಅನ್ನಿಸತ್ತೆ! ಇವತ್ತು ಯಾವುದೇ ದೌರ್ಜನ್ಯ ಆದರೂ ಗಂಡಸೇ ಕಾರಣ ಎಂದು ಕೈತೋರಿಸಿ ಕಣ್ಣೊರೆಸಿಕೊಳ್ಳುತ್ತೇವೆ ಆದರೆ ಅವನು ಹಾಗಾಗಲು ಇವಳೇ ಕಾರಣ ಎನ್ನುವ ಮರೆವಿಗೆ ಬಲು ವೇಗ! ವಾಸ್ತವದಲ್ಲಿ ಭಾವನಾತ್ಮಕ ಭದ್ರತೆ ತುಸು ಹೆಚ್ಚು ಬೇಕಿರುವುದು ಗಂಡಸಿಗೆ, ಆದರೆ ಮಗಳಿಗೆ ರಕ್ಷಣೆ ಬೇಕು ಎನ್ನುವ ತಾಯಿ ಮಗ ಹೇಗಿದ್ದರೂ ಆಗತ್ತೆ ಎನ್ನುವ ಮನೋಭಾವ ಇಟ್ಟುಕೊಂಡಿರುವುದು ಅವನನ್ನು ಮನುಷ್ಯನನ್ನಾಗಿ ಮಾಡುವಲ್ಲಿ ದಾರಿ ತಪ್ಪುತ್ತಿದೆ. ಹೆಚ್ಚು ಪ್ರೀತಿ ಎನ್ನುವ ಸೋಗಿನಲ್ಲಿ ಗಂಡು ಮಕ್ಕಳಿಗೆ ಶಿಸ್ತು, ಮಾರ್ಗದರ್ಶನ, ನಡವಳಿಕೆ ಕಲಿಸುವಲ್ಲಿ ಸೋತು ಅವನು ಸ್ಪಷ್ಟ ರೂಪದಲ್ಲಿ ಬೆಳೆಯುವುದಕ್ಕೆ ತಾಯಿತಂದೆಯರೇ ಮುಳುವಾಗಿದ್ದಾರೆ. ಭಾವನಾತ್ಮಕ ಸಂಬಂಧ ಸಿಗದೆ ಅವನು ಭಾವನೆಗಳ ಸರಿವ್ಯಕ್ತದಲ್ಲಿ ಎಡುವುತ್ತಿದ್ದಾನೆ. ನೀ ಮಾಡಿದ್ದೆಲ್ಲಾ ಸರಿ ಎನ

Police Notice in ಪ್ರಜಾವಾಣಿ

Image
 ಎರಡೂ ಕುಟುಂಬಗಳ ಒಪ್ಪಿಗೆ ಇಲ್ಲದೆ ಪ್ರೀತಿಸಿ ಮದುವೆಯಾಗಿದ್ದ ಪೂಜಾಳಿಗೆ ವರ್ಷದಲ್ಲೇ ತಿಳಿಯಿತು ಗಂಡ ಮಹಾನ್ ಸೋಮಾರಿಯೆಂದು. ತನ್ನ ವಿದ್ಯೆಯೂ ಎರಡನೆಯ ಪಿಯುಸಿಯಷ್ಟೇ. ಯಾರ ಬೆಂಬಲವೂ ಇಲ್ಲದೆ ಎಲ್ಲಿಂದಲೋ ಸಾಲ ತಂದು ಬಾಡಿಗೆ ಮನೆಯ ಕೋಣೆಯಲ್ಲಿಯೇ ಬ್ಯೂಟಿ ಪಾರ್ಲರ್ ತೆರೆದುಕೊಂಡು ಸಂಸಾರ ಸಾಕುತ್ತಿದ್ದಳು. ಇನ್ನು ಮೂರು ದಿನದಲ್ಲಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಬರಬೇಕು ಎನ್ನುವ ಫೋನ್ ಕರೆ ಬಂದಾಗ, ವಿವರ ಕೇಳಿದರೂ ಸಿಗದಿದ್ದಾಗ ಕಂಗಾಲಾಗಿ ಹೋದಳು. ಶ್ರೀಮತಿ ಮನೆಯಲ್ಲಿಯೇ ಸೀರೆ ವ್ಯಾಪಾರ ಮಾಡುತ್ತಿದ್ದಳು. ಹೋಲ್ಸೇಲ್ ದರದಲ್ಲಿ ಸೀರೆ ಸಪ್ಲೈ ಮಾಡುತ್ತಿದ್ದ ಮಾರಾಟಗಾರನಿಗೂ ಈಕೆಗೂ ಹಣಕಾಸಿನ ವಿಷಯಕ್ಕೆ ವಾಗ್ವಾದವಾಗಿತ್ತು. ಅದಾದೊಂದೇ ವಾರದಲ್ಲಿ ಆತನ ಊರಿನ ಪೊಲೀಸ್ ಠಾಣೆಯಿಂದ ’ನಿಮ್ಮ ಮೇಲೆ ಎಫ್‍ಐಆರ್ ಆಗಿದೆ ನೀವು ಠಾಣೆಗೆ ಹಾಜರಾಗಬೇಕು’ ಎಂದಷ್ಟೇ ಇದ್ದ ಪತ್ರವೊಂದು ಕೈಸೇರಿದಾಗ ಗಂಡ, ಅತ್ತೆ, ಮಾವ ಎಲ್ಲರೂ ಇವಳನ್ನೇ ನಿಂದಿಸಿ ಮತ್ತಷ್ಟು ಗಾಬರಿ, ಆತಂಕ ಒಡ್ಡಿದ್ದರು. ಹೀಗೆ ಅವರುಗಳು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿರಬಹುದು, ಕಷ್ಟದಲ್ಲಿ ಕೈಸಾಲ ತೆಗೆದುಕೊಂಡಿರಬಹುದು, ಯಾರದ್ದೋ ಕಷ್ಟಕ್ಕೆ ಜಾಮೀನು ನಿಂತಿರಬಹುದು, ಮತ್ತ್ಯಾರದ್ದೋ ಬ್ಯಾಂಕ್ ಸಾಲಕ್ಕೆ ಶ್ಯೂರಿಟಿ ಹಾಕಿರಬಹುದು, ಅವರಿವರ ಜಗಳ ಬಿಡಿಸಲು, ರಾಜಿ ನ್ಯಾಯ ಮಾಡಲು ಹೋಗಿದ್ದಿರಬಹುದು, ಆಸ್ತಿ ಕೊಳ್ಳುವಿಕೆಯ ವಿಷಯವೇ ಇರಬಹುದು, ಕುಟುಂಬದ ಆಸ್ತಿ ಪಾಲುದಾರಿಕೆಯ ವಿಷಯವೂ ಆಗ

ಜೀವನಾಂಶ

Image
    ’ನೀವು ಎಷ್ಟನೆಯ ಗಂಡ’ ಎಂದು ನ್ಯಾಯಾಧೀಶರು ಕೇಳುತ್ತಿದ್ದಾರೆ, ಆತನ ಪರ ವಕೀಲರು ಸಂಕೋಚದಿಂದಲೇ ಹೇಳುತ್ತಾರೆ ’ಏಳನೆಯವನು’ ಎಂದು. ನ್ಯಾಯಾಧೀಶರದ್ದು ಆಶ್ಚರ್ಯವನ್ನೂ ಮೀರಿದ ಉದ್ಗಾರ. ಹೌದು, ರಾಜ್ಯ ಉಚ್ಚನ್ಯಾಯಾಲವನ್ನೇ ಬವಳಿ ಬೀಳಿಸಿದ ಈ ಪ್ರಕರಣದಲ್ಲಿ ಮಹಿಳೆಯೊಬ್ಬರು ಸತತವಾಗಿ ಆರು ಮದುವೆಗಳನ್ನು ಮಾಡಿಕೊಂಡು ಪ್ರತೀ ಬಾರಿಯೂ ವರದಕ್ಷಿಣೆ ಕಿರುಕುಳದ ಕೇಸ್ ಹಾಕಿ ಗಂಡನಿಂದ ಲಕ್ಷಾಂತರ ರೂಪಾಯಿಯ ಪರಿಹಾರ ಪಡೇದು ವಿಚ್ಚೆಧನ ನೀಡುವುದನ್ನು ಕಾಯಕ ಮಾಡಿಕೊಂಡು ಈಗ ಏಳನೆಯ ಗಂಡನ ಮೇಲೆ ಪ್ರಕರಣ ಹೂಡಿದ್ದರು. ನ್ಯಾಯಾಧೀಶರು ಇದೊಂದು ದುರುದ್ದೇಶಪೂರಿತ ಪ್ರಕರಣ ಎಂದು ದಾಖಲಿಸಿ ಆಕೆಯ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಆದೇಶ ನೀಡಿದರು.                 ಮತ್ತೊಬ್ಬಾಕೆ ತನ್ನ ಇಬ್ಬರು ಮಕ್ಕಳ ಶಾಲೆ, ಆಹಾರ, ಮನೆ ಬಾಡಿಗೆ ಇನ್ನೆತರೆ ಖರ್ಚನ್ನು ಬಿಟ್ಟು ತನ್ನ ಸ್ವಂತಕ್ಕೆ ಪ್ರತೀ ತಿಂಗಳೂ   6 ಲಕ್ಷದ 16 ಸಾವಿರ ರೂಪಾಯಿಗಳ ಜೀವನಾಂಶ ಕೋರಿ ಅರ್ಜಿ ಹಾಕಿದ್ದರು. ಯಾವುದೇ ಉತ್ಪ್ರೇಕ್ಷಿತ ಕಥೆ ಕಾದಂಬರಿಗಳಲ್ಲೂ ಸಿಗದ ಇಂತಹ ಪ್ರಕರಣಗಳು ನಿಜ ಜೀವನದಲ್ಲಿ ಒಮ್ಮೊಮ್ಮೆ ಘಟಿಸಿ ಎಲ್ಲರ ಉಸಿರು ತಡೆಹಿಡಿಯುವ ತಾತ್ಕಾಲಿಕ ಕೆಲಸ ಆಗುತ್ತಿರುತ್ತದೆ.                       ಬಹುಶಃ ಸೆಲೆಬ್ರಿಟಿಗಳ ವಿಚ್ಚೇಧನ ಪ್ರಕರಣಗಳಲ್ಲಿ ಕೋಟ್ಯಾಂತರ ಪರಿಹಾರಕ್ಕೆ ಅವರುಗಳು ಸೆಟಲ್ ಮಾಡಿಕೊಳ್ಳುವುದನ್ನು ಮಾಧ್ಯಮಗಳ ಮೂಲಕ ತಿಳಿದುಕೊಳ್ಳುವ ನಮ್ಮ ಮಹಿಳೆಯರು ತಾವೂ

ನೂರು ಮಕ್ಕಳು ನೂರು ಪುಸ್ತಕ

Image
  ನೂರು ಮಕ್ಕಳು ನೂರು ಪುಸ್ತಕ ಇದು ನನ್ನ ಸಂಸ್ಥೆ ಅಸ್ತಿತ್ವ ಟ್ರಸ್ಟ್ ನಾ ಯೋಜನೆ. ಇದರ ಅಡಿಯಲ್ಲಿ ತಮ್ಮೆಲ್ಲರ ಸಹಕಾರದೊಂದಿಗೆ ಬಂಡಿಹಾಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಂಥಾಲಯ ಆರಂಭಿಸಲಾಯಿತು. ಈ ಯೋಜನೆ 2024 ಡಿಸೆಂಬರ್ ವರೆಗೂ ಮುಂದುವರೆಯಲಿದೆ. ಈಗಾಗಲೇ  3000 ಪುಸ್ತಕಗಳನ್ನು ನೀಡಲಾಗಿದೆ . ನಿಮ್ಮ ವಿಶ್ವಾಸ ಹೀಗೇ ಇರಲಿ.🙏 #ನೂರುಮಕ್ಕಳುನೂರುಪುಸ್ತಕ

Sakshigopala in VK

Image
  ಹಳ್ಳಿಯಲ್ಲೊಬ್ಬ ವೃದ್ಧನಿಗೆ ಮಥುರೆಯ ಕೃಷ್ಣನ ದರ್ಶನ ಮಾಡಬೇಕೆನ್ನುವ ಹೆಬ್ಬಯಕೆ. ಹೋಗಲು ಕೈಲಾಗುವುದಿಲ್ಲ. ಕೇರಿಯ ಯುವಕನೊಬ್ಬ ದರ್ಶನ ಮಾಡಿಸಿಕೊಂಡು ಬರುತ್ತೇನೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡೆನ್ನುತ್ತಾನೆ. ಹಿರಿಯ ಒಪ್ಪಿ ಭಾಷೆ ಕೊಡುತ್ತಾನೆ. ಯುವಕ ಆತನನ್ನು ಭುಜದಲ್ಲಿ ಹೊತ್ತು ಕಾಲ್ನಡಿಗೆಯಲ್ಲಿ ಒಡಿಶಾದ ಪುರಿಯಲ್ಲಿರುವ ಹಳ್ಳಿಯಿಂದ ಮಥುರೆಗೆ ಕರೆದುಕೊಂಡು ಹೋಗಿ ದೇವದರ್ಶನ ಮಾಡಿಸುತ್ತಾನೆ. ನಂತರ ವೃದ್ಧ ಮಗಳನ್ನು ಕೊಡಲು ನಿರಾಕರಿಸುತ್ತಾನೆ ತಾನು ಹಾಗೆ ಮಾತು ಕೊಟ್ಟಿದ್ದಕ್ಕೆ ಸಾಕ್ಷಿಯೇನಿದೆಯೆಂದು ಸವಾಲು ಹಾಕುತ್ತಾನೆ. ನೊಂದ ಯುವಕ ಸೀದಾ ಮಥುರೆಗೆ ಬಂದು ಕೃಷ್ಣ ನೀನೇ ತಾನೆ ನಮ್ಮ ನಡುವಿನ ಮಾತಿಗೆ ಸಾಕ್ಷಿಯಾಗಿದ್ದವನು ಈಗ ತನ್ನ ಹಳ್ಳಿಗೆ ಬಂದು ಸಾಕ್ಷಿ ನುಡಿಯೆನ್ನುತ್ತಾನೆ. ಯುವಕನ ಶ್ರದ್ಧಾ ಭಕ್ತಿಗೆ ಮೆಚ್ಚಿದ ಭಗವಂತ ನಿನ್ನ ಹಿಂದೆಯೇ ಬರುತ್ತಿರುತ್ತೇನೆ, ನೀನು ಹಿಂದಿರುಗಿ ನೋಡದೆ ಊರು ಸೇರಬೇಕು. ನಡುವಿನಲ್ಲಿ ಹಿಂದಿರುಗಿ ನೋಡಿದರೆ ನಾನಲ್ಲಿಯೇ ನಿಂತು ಬಿಡುತ್ತೇನೆ ಎನ್ನುವ ಷರತ್ತು ತೋರುತ್ತಾನೆ. ಗೋಪಾಲನ ಹೆಜ್ಜೆ ಸದ್ದನ್ನಾಲಿಸುತ್ತಾ ಯುವಕನ ಪಯಣ ಆರಂಭವಾಗುತ್ತದೆ. ಊರು ತಲುಪಲು ಒಂದಿಷ್ಟೇ ದೂರವಿದೆಯೆನ್ನುವಾಗ ಯುವಕ ಹಿಂದಿರುಗಿ ನೋಡುತ್ತಾನೆ. ಗೋಪಾಲಕೃಷ್ಣ ಅಲ್ಲಿಯೇ ಮೂರ್ತಿಯಾಗಿ ನಿಂತು ಬಿಡುತ್ತಾನೆ. ದು:ಖಿತನಾದ ಯುವಕ ಗ್ರಾಮಸ್ಥರಿಗೆ ಕಲ್ಲಾದ ದೇವರನ್ನು ತೋರಿದಾಗ ಅವನ ಸತ್ಯಸಂಧತೆಯನ್ನು ಒಪ್ಪಿ ವೃದ್ಧನ ಮಗಳನ್ನ

Inspiring story of Anitha Rathi

Image
  ನನ್ನ ದೇಹ ನನ್ನ ಹಕ್ಕು ಎಂದು ಹೇಳಿಕೊಳ್ಳೂವವರೆಗೂ ಮಹಿಳೆ ಮುಂದುವರೆದಿದ್ದಾಳೆ ಎಂದುಕೊಳ್ಳುತ್ತಿರುವ ಸಮೂಹದ ನಡುವೆಯೇ ಕಾಣಸಿಗುತ್ತಾರೆ ಯೌವ್ವನದ ಹೊಸಿಲಿನಲ್ಲೇ ಬದುಕನ್ನು ಎದುರಿಸಲು ಹೈರಾಣಾಗಿರುವ ಯುವತಿಯರು. ಮದುವೆಯಾದ ಕೂಡಲೇ ಜೀವನ ಸತ್ವವೇ ಅರ್ಧ ವಾಗಿ ಹೋಗುತ್ತದೆ ಎಂದು ನಂಬಿಕೊಂಡಿರುವ ಮತ್ತು ಹಾಗೆಯೇ ವರ್ತಿಸುವ ಸ್ನೇಹಿತೆಯರು ನಮ್ಮ ನಡುವೆಯೇ ಓಡಾಡುತ್ತಿರುತ್ತಾರೆ.   ಒಂದು ಮಗುವಾಗಿ ಬಿಟ್ಟರಂತೂ ಮುಗಿದೇ ಹೋಯಿತು.   ಸ್ವಬದುಕಿನೆಡೆಗೆ ಎಲ್ಲಾ ನಿಜಾರ್ಥದ ಆಸಕ್ತಿಯನ್ನು ಕಳೆದುಕೊಂಡು ಇಲ್ಲ ಸಲ್ಲದ ಕಾರಣ ಕೊಟ್ಟು ಮೈಯನ್ನು ಯದ್ವಾತದ್ವ ಬೆಳೆಸಿಕೊಂಡು ಮನಮುಟ್ಟದ appearance, approach ಮತ್ತು acceptance ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಇಂತಹ ಮಹಿಳೆಯರನ್ನು ಹೊಡೆದೆಬ್ಬಿಸಿ ಜೀವಜಲವನ್ನು ಸಿಂಪಡಿಸುವಂತೆ ಇದ್ದಾರೆ ಅನಿತಾ ರಾಠಿ.   42 ವರ್ಷ ವಯಸ್ಸಿನ ಅನಿತಾಗೆ ಮದುವೆಯಾಗಿ 22 ವರ್ಷಗಳು. ಮೂರು ಮಕ್ಕಳ ತಾಯಿ. ತೂಕ ಹೆಚ್ಚಾಗಿ ಆರೋಗ್ಯ ದೂರವಾಗಲು ಆರಂಭವಾದಾಗ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಅನಿತಾ ಜಿಮ್‍ಗೆ ಸೇರಿಕೊಳ್ಳುತ್ತಾರೆ. ಬೆಳಗಿನ ಝಾವ 4 ಗಂಟೆಗೆ ಎದ್ದು ಸಂಸಾರದ ಜವಾಬ್ದಾರಿ ನಿರ್ವಹಿಸಿ 3 ಗಂಟೆಗಳ ಕಾಲ ತಮ್ಮ ದೇಹದ ಮೆಲೆ ವ್ಯಯಿಸುವ ಅನಿತಾ ಭಾರ ಎತ್ತುವುದರಲ್ಲಿ ಗಟ್ಟಿಗಿತ್ತಿ ಎನ್ನುವುದನ್ನು ಮನಗೊಂಡ ಆಕೆಯ ಜಿಮ್ ತರಬೇತುದಾರರು ಹೆಚ್ಚಿನ ಗಮನಕೊಟ್ಟು ಆಕೆಯನ್ನು ಭಾರ ಎತ್ತುವ ಸ್ಪರ್ಧೆಗೆ ಸಿದ್ಧ

BNS

 ತಮ್ಮಿಷ್ಟದ ನಾಯಕನ ಪರವಾಗಿ ನಿಲ್ಲಲು ಎಲ್ಲರೂ ಐವಾನ್ ಡಿಸೋಜಾ ತರಹ ಭಾರತವನ್ನು ಬಾಂಗ್ಲಾ ಮಾಡುತ್ತೇವೆ, ದಂಗೆ, ಮುತ್ತಿಗೆ ಹಾಕುತ್ತೇವೆ ಎನ್ನುವ ಮುನ್ನ; ಶರಟು ಪ್ಯಾಂಟು ಹರಿದುಕೊಂಡು ಚೀರುವ ಮುನ್ನ , ಸಾಮಾಜಿಕ ಜಾಲತಾಣದಲ್ಲಿ ಕತ್ತಿ ಝಳಪಿಸುವ ಮೊದಲು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ಅನ್ನು ಒಮ್ಮೆ ಓದಿದರೆ ತಮ್ಮತಮ್ಮ ಸ್ಥಾನ ಎಲ್ಲಿ ಎಂದು ಗುರುತಿಸಿಕೊಳ್ಳಲು ಅನುಕೂಲ ಆದೀತು. " ಉದ್ದೇಶಪೂರ್ವಕವಾಗಿ ಅಥವಾ ಪ್ರಜ್ಞಾಪೂರ್ವಕವಾಗಿ, ಮಾತುಗಳಿಂದ, ಬರಹದಿಂದ. ಚಿನ್ಹೆ, ಸಂಜ್ಞೆಗಳಿಂದ,ಅಥವಾ ಪ್ರತ್ಯಕ್ಷ ಪ್ರಾತಿನಿಧ್ಯದಿಂದ, ಅಥವಾ ಎಲೆಕ್ಟ್ರಾನಿಕ್ ಸಂವಹನದಿಂದ ಅಥವಾ ಹಣಕಾಸಿನ ಬಳಕೆಯಿಂದ ಅಥವಾ ಇತರ ಯಾವುದೇ ರೀತಿಯಿಂದ; ಪ್ರಚೋದಿಸುವ ಅಥವಾ ಪ್ರಚೋದಿಸಲು ಯತ್ನಿಸಿದರೆ, ಪ್ರತ್ಯೇಕತೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳನ್ನು , ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪ್ರೋತ್ಸಾಹಿಸಿದರೆ; ಅದರ ಮೂಲಕ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯ ಉಂಟಾದರೆ ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಎಸಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡವನ್ನೂ ವಿಧಿಸಲಾಗುತ್ತದೆ."  ಇದೊಂದು ಜಾಮೀನು ರಹಿತ ಅಪರಾಧವಾಗಿರುತ್ತದೆ. #BNS #BNSS #law #ಹೊಸಅಪರಾಧಕಾನೂನುಗಳು  https://www.faceb

Training at Commissioner's office

Image
  ಸಮವಸ್ತ್ರದಲ್ಲಿ ಇರುವ ಪೊಲೀಸರಿಗೆ ಪಾಠ ಮಾಡುವುದು ಎಂದರೆ ವಿನಮ್ರತೆಗೆ ಹೊಸ ವ್ಯಾಖ್ಯಾನ ಕಂಡುಕೊಂಡಂತೆ.... ವೈಯಕ್ತಿಕವಾಗಿ ಸಂತೋಷ ಮತ್ತು ಸಮಾಧಾನ ಕೊಡುವ ವಿಷಯ ಯಾಕೆಂದರೆ ... ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಪೋಲೀಸರ ಜೊತೆ ಮಾತನಾಡುವುದು, ಅವರನ್ನು ಗಮನಿಸುವುದು ನನ್ನ ಆಸಕ್ತಿ. ಅದರಲ್ಲಿನ ಸಣ್ಣ ಅನುಭವದಿಂದ ರೂಪಿತವಾದ ಚಿಕ್ಕ ಅಭಿಪ್ರಾಯ ಎಂದರೆ ನಮ್ಮ ದೇಶದ ಪೊಲೀಸರು ವಿಪರೀತ ಬುದ್ಧಿವಂತರು, unfortunately ಅದು ಅವರಿಗೆ ಗೊತ್ತಿದೆ ಮತ್ತು ಗೊತ್ತಿಲ್ಲ ಕೂಡ. ಹಾಗಾಗಿ ವೇದಿಕೆ ಮೇಲೆ ನಿಂತು ಅವರಿಗೆ ಏನೇ ಹೇಳಬೇಕಾದಾಗ ಹೆಚ್ಚಿನ ಓದು, ಸಂಶೋಧನೆ, ಕರಾರುವಾಕ್ ಅಂಕಿಅಂಶ ಬೇಕಾಗುತ್ತದೆ. ಇದೆಲ್ಲಾ ತಯಾರಿ ಮಾಡಿಕೊಳ್ಳುವಾಗ ಜೀವ ವಿನೀತವಾಗಲೇ ಬೇಕು. ಇಲ್ಲಿನ ಫೋಟೋ ಹಿಂದೊಮ್ಮೆ ಬೆಂಗಳೂರಿನ ಕಮಿಷನರ್ ಕಚೇರಿಯಲ್ಲಿ ಪೊಲೀಸರಿಗೆ ಕಾನೂನು ವಿಷಯದ ತರಬೇತಿ ತೆಗೆದು ಕೊಂಡಾಗಿನದ್ದು. ಮಾಡು ಇಲ್ಲವೇ ನಡಿ ಎನ್ನುವ #FamilyCourtಕಲಿಕೆ

ಹೆಸರು ಬದಲಾವಣೆ ಮತ್ತು ಕಾನೂನು

Image
  ಮೊನ್ನೆ ಪಾರ್ಲಿಮೆಂಟಿನಲ್ಲಿ ಸಭಾಪತಿಗಳು ’ಜಯಾ ಅಮಿತಾಬ್ ಬಚ್ಚನ್ ಅವರೇ’ ಎಂದು ಸಂಭೋದಿಸಿದ ಕೂಡಲೆ ಸದಸ್ಯೆ ಜಯ ಬಾಧುರಿ ಅವರು ತಮ್ಮ ಎಂದಿನ ಖಡಕ್ ಶೈಲಿಯಲ್ಲಿ ’ಸಭಾಪತಿಗಳೇ ನನ್ನನ್ನು ಜಯಾ ಬಚ್ಚನ್ ಎಂದರೆ ಸಾಕು, ಹೀಗೆ ಗಂಡನ ಹೆಸರನ್ನು ಹಾಕಿಕೊಳ್ಳುವುದು ಇತ್ತೀಚಿನ ಫ್ಯಾಷನ್ ಆಗಿಬಿಟ್ಟಿದೆ’ ಎಂದರು. ಅಷ್ಟೇ ಅಲ್ಲ ಈ ಪುರುಷ ಪ್ರಧಾನ ಮನಃಸ್ಥಿತಿ ಇನ್ನೂ ಎಷ್ಟು ಬೆಳೆಯುತ್ತಿದೆ ಎಂದರೆ ಸರ್ವೋಚ್ಚ ನ್ಯಾಯಾಲಯವೇ ಯಾವ ಮಹಿಳೆಗೂ ತನ್ನ ಹೆಸರಿನ ಮುಂದೆ ಗಂಡನ ಅಥವಾ ತಂದೆಯ ಹೆಸರು ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತೀರ್ಪು ಕೊಟ್ಟಿದ್ದರೂ ಸರ್ಕಾರಗಳು ಒತ್ತಾಯ ಮಾಡುತ್ತಿವೆ ದಾಖಲೆಗಳನ್ನು ಕೊಡಲು. ಒಮ್ಮೆ ಮಗು ಹುಟ್ಟಿ 15 ತಿಂಗಳಾದ್ರೂ ಬರ್ತ್ ಸರ್ಟಿಫಿಕೇಟ್ ಮಾಡಿಸಿರಲಿಲ್ಲ ಯಾಕೆ ಎಂದಿದ್ದಕ್ಕೆ ಬಂದ ಉತ್ತರ “3 ತಿಂಗಳ ಹಿಂದೇನೆ ಕೊಟ್ಟಿದ್ದೀವಿ ಆದರವರು ತಂದೆ ಹೆಸರು ಕೊಡದೆ ಮಾಡಲ್ಲ ಅಂತಿದ್ದಾರೆ. ತಾಯಿ ಲೈಂಗಿಕ ದೌರ್ಜನ್ಯದಿಂದ ನೊಂದವಳು ಎನ್ನುವ ಆದೇಶ ತೋರಿಸಿದರೂ ಆಫೀಸಿನಲ್ಲಿ ತಂದೆ ಹೆಸರು ಬೇಕು ಅಂತಿದ್ದಾರೆ”. ಇನ್ನೊಂದು ಪ್ರಕರಣದಲ್ಲಿ 5 ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಿಸಲಾಗಿತ್ತು. ಮಕ್ಕಳನ್ನು ಹಿಂದಿರುಗಿಸಿ ಎಂದು ತಾಯಂದಿರೋಡಿ ಬಂದರು. ದಾಖಲೆಗಳನ್ನು ತರಲು ಹೇಳಲಾಗಿತ್ತು. ಅವರೆಲ್ಲರೂ ತಮ್ಮ ರಾಜ್ಯದ ಅಧಿಕಾರಿಗಳಿಂದ ಮಕ್ಕಳ ಜನ್ಮದಾಖಲೆ ತಂದರು. ದಾಖಲೆಗಳಲ್ಲಿ ಐದೂ ಮಕ್ಕಳ ಅಮ್ಮಂದಿರ ಹೆಸರು ಬೇರೆಬೇರೆ ಇತ್ತು ಆದರ

ಹೊಸ ಅಪರಾಧ ಕಾನೂನುಗಳ Implementaion ವ್ಯಾಪ್ತಿ

Image
 ಈಗಾಗಲೇ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಗಳನ್ನು 1 ಜುಲೈ 2024ರಿಂದ ಜಾರಿಗೆ ಬಂದಿರುವ ಅಪರಾಧ ಕಾನೂನುಗಳ ಪ್ರಕಾರ ಮತ್ತೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆಯೇ ಎನ್ನುವ ಪ್ರಶ್ನೆ ಬಹುಪಾಲು ಜನರಲ್ಲಿ ಸಹಜವಾಗಿ ಮೂಡಿದೆ. ನಮ್ಮ ಸಂಪೂರ್ಣ ನ್ಯಾಯ ವ್ಯವಸ್ಥೆಯೇ ಪ್ರಿನ್ಸಿಪಲ್ಸ್ ಆಫ್ ನ್ಯಾಚುರಲ್ ಜಸ್ಟಿಸ್ ಎನ್ನುವ ಪರಿಕಲ್ಪನೆಯ ಆಧಾರಲ್ಲಿ ಇದೆ. ಇದರ ಅಡಿಯಲ್ಲಿ ಅಪರಾಧ ಕಾನೂನುಗಳಿಗೆ (ಖಚಿತವಾಗಿ ನಮೂದು ಮಾಡದ ಹೊರತು) ಜಾರಿಗೆ ಬರುವ ಮೊದಲಿನಿಂದಲೂ ಕಾರ್ಯ ನಿರ್ವಹಿಸುವ ಅಧಿಕಾರ ಮತ್ತು ವ್ಯಾಪ್ತಿ ಇರುವುದಿಲ್ಲ.  ಹಾಗೆಯೇ ಒಂದೇ ಅಪರಾಧಕ್ಕೆ ಎರಡು ಬಾರಿ ಪ್ರಕ್ರಿಯೆ ನಡೆಸುವ ಹಾಗೂ ಇಲ್ಲ. ಈ ಹಿನ್ನಲೆಯಲ್ಲಿ 1 ಜುಲೈ 2024ರಿಂದ ಜಾರಿಗೆ ಬಂದಿರುವ ಕಾನೂನುಗಳು 30 ಜೂನ್ 2024 ರಾತ್ರಿ 12 ಗಂಟೆಯ ನಂತರ ಘಟಿಸುವ ಅಪರಾಧಗಳಿಗೆ ಮಾತ್ರ ಅನ್ವಯ ಆಗುತ್ತದೆ. ಈಗಾಗಲೇ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಗಳು ಮೊದಲಿನ ಕಾನೂನುಗಳಾದ ಇಂಡಿಯನ್ ಪೀನಲ್ ಕೋಡ್, ಕ್ರಿಮಿನಲ್ ಪ್ರೊಸೀಜರ್ ಕೋಡ್ ಹಾಗೂ ಇಂಡಿಯನ್ ಎವಿಡೆನ್ಸ್ ಕಾಯಿದೆ ಇವುಗಳ ಅಡಿಯಲ್ಲಿಯೇ ಮುಂದುವರೆಯುತ್ತದೆ. ತೀರ್ಪುಗಳು ಆ ಕಾನೂನುಗಳಲ್ಲಿ ನೀಡಿರುವ ನಿರ್ದೇಶನಕ್ಕೆ ಒಳಗಾಗಿಯೇ ಇರುತ್ತದೆ.  ಹೊಸ ಕಾನೂನು ಜಾರಿಗೆ ಬಂದ ನಂತರದ ಸಮಯದಲ್ಲಿ ಘಟಿಸುವ ಅಪರಾಧವು ಈ ಅವದಿಯಲ್ಲಿಯೇ ಎಫ್ ಐ ಆರ್ ದಾಖಲಾಗುವುದರಿಂದ ಇದರಲ್ಲಿ ಯಾವುದೇ ದ್ವಂದ್ವ ಇರಲಾರದು.  ಆದರೆ ಹಳೆಯ ಕಾನೂನುಗಳು ಜಾರಿಗೆಯಲ್ಲಿ

Surrogacy ಬಾಡಿಗೆ ತಾಯ್ತನ

Image
 ಬಾಡಿಗೆ ತಾಯ್ತನ (surrogacy)  ನಮ್ಮ ದೇಶದಲ್ಲಿ shock waves ಹುಟ್ಟಿಸಿದ್ದ ಕಾಲದಲ್ಲಿ, ಅದು ಅಪರಾಧವೂ ಹೌದೋ ಅಲ್ಲವೋ ಎನ್ನುವುದು ಕಾನೂನಿಗೂ ತಿಳಿದಿರಲಿಲ್ಲ. ವೈದ್ಯರಲ್ಲೂ ಗುಸುಗುಸು ಮಾತ್ರ ಇತ್ತು.  ಮೊದಲ ಬಾರಿಗೆ ಕನ್ನಡದಲ್ಲಿ ಬಾಡಿಗೆ ತಾಯ್ತನ ವಿಷಯದಲ್ಲಿ ಲೇಖನ ಪ್ರಕಟಿಸಿದ್ದು ಸುಧಾ ವಾರಪತ್ರಿಕೆ ನಂತರ ಪ್ರಜಾವಾಣಿ ಪತ್ರಿಕೆ. ಪತ್ರಕರ್ತೆ ಸಿ ಜಿ ಮಂಜುಳಾ ಅವರು ಲೇಖನವನ್ನು ನನ್ನಿಂದ ಬರೆಸಿದ್ದದ್ದು ಖುಷಿಯ ವಿಷಯ.  ನಂತರ ಹತ್ತಾರು ಬದಲಾವಣೆಗಳು ಕಾನೂನು ಮತ್ತು ಮೆಡಿಕಲ್ ಕೌನ್ಸಿಲ್ ಗಳಲ್ಲಿ ಆಗಿವೆ, ಎಲ್ಲವನ್ನೂ ಗಮನಿಸುತ್ತಾ ಬರೆಯುತ್ತಾ ಬಂದಿದ್ದೇನೆ. ಈಗ ಬಾಡಿಗೆ ತಾಯ್ತನಕ್ಕೆ ಕಾನೂನು ಸಮ್ಮತಿ ಸಿಕ್ಕಿದೆ. ಇಬ್ಬರೂ ತಾಯಿಯರಿಗೆ ಉದ್ಯೋಗದಲ್ಲಿ ರಜೆಯ ಅನುಕೂಲವನ್ನೂ ನೀಡಲಾಗಿದೆ. ಇದರ ಬಗ್ಗೆ ಈ ದಿನದ ಪ್ರಜಾವಾಣಿಯಲ್ಲಿ ನನ್ನ ಅಭಿಪ್ರಾಯ ಪ್ರಕಟವಾಗಿದೆ. ದಯವಿಟ್ಟು ಓದಿ 🙏

Section 66 BNSS on Summons

Image
 ಪಪ್ಪ ಮೈಸೂರಿನ ಶಂಕರಮಠ ರಸ್ತೆಯಲ್ಲಿ ಒಂದು ಮನೆ ಕಟ್ಟಿದ್ದರು. (ಇಬ್ಬರು ಮೂವರು ಬಾಡಿಗೆದಾರರು ಕೊಟ್ಟ ಕಷ್ಟ ಅಷ್ಟಿಷ್ಟಲ್ಲ). ಒಬ್ಬ ಬಾಡಿಗೆ ದಾರ ಸಂಸಾರಸ್ಥ. ಮನೆಭರ್ತಿ ವಯಸ್ಕ ಹೆಂಗಸರು, ಯುವತಿಯರು, ಮಕ್ಕಳು ಇದ್ದ ದೊಡ್ಡ ಸಂಸಾರ. ಬಾಡಿಗೆ ಕೊಡದ ಆಟ ಮಿತಿ ಮೀರಿದಾಗ, ಮನೆಯೂ ಬಿಡದಾದಾಗ ಪ್ರಕರಣ ಕೋರ್ಟಿಗೆ ಹೋಯಿತು. ವರ್ಷವರ್ಷ ವರ್ಷಗಳ ನಂತರ ಅಂತೂ ಪಪ್ಪನದೇ ಮನೆ ಅಂತಾಗಿ ಆತ ಮನೆ ತೆರವು ಮಾಡಿಕೊಡಬೇಕು ಎನ್ನುವ ಆದೇಶ ಆಯಿತು. (ಆತ ಮನೆ ಬಿಟ್ಟ ನಂತರ ಒಳಹೊಕ್ಕರೆ ಹೊರಗಿನ ಆವರಣ ಬಿಟ್ಟು ಒಳಗಿನ ಎಲ್ಲಾ ಬಾಗಿಲುವಾಡಗಳನ್ನು, ಮರಗೆಲಸವನ್ನು ಕಿತ್ತು ಎಲ್ಲಿಗೋ ಸಾಗಿಸಿ ಬಿಟ್ಬಿಟಿದ್ತ್ಗಿದರು. ಗೋಡೆಗಳ ಪ್ಲಾಸ್ಟರ್ ಅನ್ನು ಕಿತ್ತು ನೆಲವನ್ನೆಲ್ಲಾ ಅಗೆದು ಬಿಟ್ಟಿದ್ದರು) ನ್ಯಾಯಾಲಯದ ಪ್ರಕ್ರಿಯೆ ವೇಗದಲ್ಲಿ ಆಗಿದ್ದಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತೇನೋ !!!! ನ್ಯಾಯಾಲಯದ ನೋಟಿಸ್ ಮತ್ತು ಸಮನ್ಸ್ ಅನ್ನು ಯಾವಾಗ ನೀಡಲು ಪೋಲೀಸರು ಹೋದರೂ ಮನೆಯ ಹೆಬ್ಬಾಗಿಲಿನಲ್ಲಿ ಹೆಂಗಸರು ಸಾಲಾಗಿ ಕುಳಿತು ಮನೆಯಲ್ಲಿ ಯಾರೂ ಗಂಡಸರಿಲ್ಲ ಎಂದು ಸಬೂಬು ಹೇಳಿ ಹಿಂದುಗಿಸುತ್ತಿದ್ದರು. ಮನೆಯನ್ನು ವಶ ಪಡಿಸಿಕೊಳ್ಳುವ ಆದೇಶ ಪ್ರತಿಯನ್ನು ತೆಗೆದುಕೊಂಡು ಹೋದಾಗಲೂ ಇದ್ದಬದ್ದ ಹೆಂಗಸರೆಲ್ಲಾ ಹೊಸಿಲ ಮೇಲೇ ಕುಳಿತು ಗಂಡಸರು ಇಲ್ಲ ಎಂದು ಎಷ್ಟು ರಭಸದಲ್ಲಿ ಹೇಳಿದ್ದರು ಎಂದರೆ ಅದೆಷ್ಟೊ ದಿನಗಳು ಪೋಲೀಸರು ನಡುಗುತ್ತಿದ್ದರು. ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ

Sedition in BNS 2023

Image
 ದೇಶದ್ರೋಹ ಎನ್ನುವುದು ಇಂಡಿಯನ್ ಪೀನಲ್ ಕೋಡ್‍ನ ಸೆಕ್ಷನ್ 124-A ಇದರ ಅಡಿಯಲ್ಲಿ ಘನಘೋರ ಅಪರಾಧ ಆಗಿತ್ತು.  ಇದೇ ಜುಲೈ 1ರಿಂದ ಜಾರಿಗೆ ಬರಲಿರುವ ಭಾರತೀಯ ನ್ಯಾಯ ಸಂಹಿತಾ, 2023 ರಲ್ಲಿ ಈ ಅಪರಾಧವನ್ನು (ಆ ಸೆಕ್ಷನ್ ಅನ್ನು) ತೆಗೆದು ಹಾಕಲಾಗಿದೆ.  ಹಾಗಾದರೆ ಇನ್ನು ಮುಂದೆ ದೇಶದ ಅಖಂಡತೆ, ಘನತೆ, ಮತ್ತು ಸುರಕ್ಷತೆಯ ಬಗ್ಗೆ ಬಾಯಿಗೆ ಬಂದದ್ದೆಲ್ಲಾ ಮಾತನಾಡಿ ಅರಗಿಸಿಕೊಳ್ಳಬಹುದು ಅಂತಲ್ಲ! ಹೊಸ ಕಾನೂನಿನ ಸೆಕ್ಷನ್ 152 ರ ಅಡಿಯಲ್ಲಿ ಈ ದೇಶದ ಸಾರ್ವಭೌಮತ್ವಕ್ಕೆ, ಸುರಕ್ಷತೆಗೆ ಧಕ್ಕೆ ತರುವಂತಹ , ಅರಾಜಕತೆ ಉಂಟು ಮಾಡಬಹುದಾದಂತಹ ಭಾಷಣಗಳು, ಮಾತುಗಳು, ವಾಟ್ಸ್ಯಾಪ್ ಸಂದೇಶಗಳು, ಸಾಮಾಜಿಕ ಜಾಲತಾಣಗಳ ಪೋಸ್ಟ‍ಗಳು ಮತ್ತಿತರೆ ಚಟುವಟಿಕೆಗಳನ್ನು (ಸರಿಸುಮಾರು ಭಯೋತ್ಪಾದನ ಚಟುವಟಿಕೆ ಎಂದು ಪರಿಗಣಿಸಿ) ಅಪರಾಧ ಎಂದು ಗುರುತಿಸಲಾಗಿದೆ.  ಜಾಮೀನು ರಹಿತ ಈ ಅಪರಾಧಕ್ಕೆ 7 ವರ್ಷ ಜೈಲುವಾಸದಿಂದ ಜೀವಾವಧಿ ಶಿಕ್ಷೆ ಕೂಡ ಇದೆ. ಹಾಗಂತ ದೇಶದಲ್ಲಿ ನಡೆಯುವ ತಪ್ಪುಗಳೆಡೆಗೆ ಪ್ರಶ್ನೆ ಒಡ್ಡುವುದೇ ಅಪರಾಧ ಅಲ್ಲ. ಸರ್ಕಾರ ಮತ್ತು ದೇಶ ಇವರೆಡರ ನಡುವಿನ ವ್ಯತ್ಯಾಸ ತಿಳಿದುಕೊಂಡು ನಮ್ಮ ಖಂಡನೆ ಯಾವುದರ ಕಡೆಗೆ ಇರಬೇಕು ಮತ್ತು ’ಹೇಗೆ’ ಇರಬೇಕು ಎನ್ನುವುದನ್ನು ಅರ್ಥ ಮಾಡಿಕೊಂಡು ಘನತೆಯಿಂದ ಕಾರ್ಯ ನಿರ್ವಹಿಸಬೇಕು ಅಷ್ಟೇ. ಉದಾಹರಣೆಗೆ, ತೆರಿಗೆಯಿಂದ ಬೇಸತ್ತು ಕೀನ್ಯಾ ದೇಶದ ಪ್ರಜೆಗಳು ಅವರ ಸಂಸತ್ತಿಗೆ ಬೆಂಕಿ ಹಚ್ಚಿದರು ಎನ್ನುವ ಸುದ್ದಿ ಪ್ರಕಟ ಆಗಿದೆ. ಇದ

Mental Health Act

 

ಪುಸ್ತಕ ಬೇಕೇ ಸಂದೇಶ ಕಳಿಸಿ

Image
ಒಮ್ಮೆ 6 ನೆಯ ತರಗತಿಯ ಹುಡುಗ ಅಪ್ಪನ ಜೊತೆ ಒಬ್ಬರ ಮನೆಗೆ ಹೋಗಿದ್ದಾಗ, ಅವರ ಮನೆಯ ಟೀಪಾಯ್ ಮೇಲೆ ಎಕನಾಮಿಕ್ಸ್ ವಿಷಯಕ್ಕೆ ಸಂಬಂಧಿಸಿದ ದೊಡ್ಡ ಪುಸ್ತಕ ಇಟ್ಟಿದ್ದರು. ಆ ಬಾಲಕ ಕುತೂಹಲದಿಂದ ಆ ಪುಸ್ತಕವನ್ನು ಕೈಗೆ  ತೆಗೆದುಕೊಂಡು, ನೋಡಲು ಮೊದಲನೆಯ ಪುಟ ತಿರುವಿದ ಕೂಡಲೇ ಅವನ ಬಹಳ ವಿದ್ಯಾವಂತ ಅಪ್ಪ " ಏಯ್ ನಿನಗೇನು ಗೊತ್ತಾಗತ್ತೆ, ಸುಮ್ಮನೆ ಇಡು ಅಲ್ಲಿ " ಅಂತ ಗಡುಸಾಗಿ ಹೇಳಿ ಅಲ್ಲಿಗೆ ಆ ಹುಡುಗನ  ಪುಸ್ತಕ ಯಾನ ನಿಲ್ಲಿಸಿದರು!!! ಇದು ಮಕ್ಕಳ ಪುಸ್ತಕ ಇದು ದೊಡ್ಡವರದ್ದು ಎನ್ನುವ ವರ್ಗೀಕರಣವನ್ನು ಎಂದೂ ಒಪ್ಪದ ನನಗೆ ಈ ಘಟನೆ ನೆನಪಾದಾಗಲೆಲ್ಲಾ  ಬೇಜಾರಾಗುತ್ತದೆ. ಈಗಲೂ ಅದೇ ನಂಬಿಕೆಯ ನಾನು #ಪುಸ್ತಕಬೇಕೇಸಂದೇಶಕಳಿಸಿ  ಅಂತ ಶುರು ಮಾಡಿರುವ ಅಭಿಯಾನದಲ್ಲಿ ನನ್ನ ವೈಯಕ್ತಿಕ ಗ್ರಂಥಾಲಯವನ್ನು ಕಿರಿದು ಗೊಳಿಸಿಕೊಳ್ಳುವಾಗ 119 ಪುಸ್ತಕಗಳನ್ನು ಈ ಮಕ್ಕಳಿಗೆ ಕಳಿಸಿಕೊಟ್ಟೆ. ಪಿ ಲಂಕೇಶ್, ಅನಂತಮೂರ್ತಿ ಅವರುಗಳಿಂದ ಹಿಡಿದು ಬೇರೆ ಸಾಹಿತ್ಯಕ್ಕೆ, ರಾಜಕೀಯಕ್ಕೆ, ಬದುಕಿಗೆ ಸಂಬಂಧಪಟ್ಟ ಎಲ್ಲಾ ಪುಸ್ತಕಗಳ  ಕಾಂಬಿನೇಷನ್ ಈಗ ಇವರ ಕೈಯಲ್ಲಿ ಇದೆ. ಖುಷಿ ನನ್ನದಾಗಿದೆ. 🤗🤗💕🌻 #ನೂರುಪುಸ್ತಕನೂರುಮಕ್ಕಳು  

ನೂರು ಮಕ್ಕಳು ನೂರು ಪುಸ್ತಕ

Image
  " ನೂರು ಮಕ್ಕಳು ನೂರು ಪುಸ್ತಕ" ಈ ಯೋಜನೆಯ ಬಗ್ಗೆ ಬಹಳಷ್ಟು ಜನರು ಆಸಕ್ತಿ ತೋರಿಸಿ ಹೆಚ್ಚಿನ ವಿವರ ಕೇಳುತ್ತಿದ್ದೀರಿ. ನಿಮ್ಮೆಲ್ಲರಿಗೂ ನಾನು ಆಭಾರಿ. 🙏  ನೂರು ಮಕ್ಕಳು ನೂರು ಪುಸ್ತಕ ನನ್ನ ಸಂಸ್ಥೆ ಅಸ್ತಿತ್ವ ಲೀಗಲ್ ಟ್ರಸ್ಟ್ ನ ಯೋಜನೆಯಾಗಿದ್ದು ಡಿಸೆಂಬರ್ 2024ರ ಒಳಗೆ ನೂರು ಸ್ಥಳಗಳಲ್ಲಿ ನೂರು ಮಕ್ಕಳ ಕೈಯಲ್ಲಿ ನೂರು ಪುಸ್ತಕಗಳನ್ನು ಕೊಡಬೇಕು ಎನ್ನುವ ಗುರಿ ಇದೆ. ಈಗಾಗಲೇ ಆರು ಸ್ಥಳಗಳಲ್ಲಿ ಸುಮಾರು ಸಾವಿರದ ಇನ್ನೂರು ಮಕ್ಕಳನ್ನು ಪುಸ್ತಕ ಹಿಡಿದುಕೊಂಡು ಓದುವಂತೆ ಮಾಡಲಾಗಿದೆ. ಈ ಯೋಜನೆಯಲ್ಲಿ ತಾವುಗಳು ಭಾಗಿಯಾಗಿ ಪುಸ್ತಕಗಳನ್ನು ಕೊಡಿಸುವುದಾದರೆ ಅಥವಾ ಹಣ ಸಹಾಯ ಮಾಡುವುದಾದರೆ astitvalegal@gmail.com ಇಲ್ಲಿಗೆ email ಮಾಡಿ ವಿವರಗಳನ್ನು ನೀಡಲಾಗುತ್ತದೆ. ಈಗಾಗಲೇ ಈ ಯೋಜನೆಯಲ್ಲಿ ನಮ್ಮ ಬೆಂಬಲಕ್ಕೆ ನಿಂತು ಪುಸ್ತಕಗಳನ್ನು ಕೊಡಿಸಿರುವ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು 🙏😊 ಅಂಜಲಿ ರಾಮಣ್ಣ, ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು ' ಕೈಗೆ ಪುಸ್ತಕ ಕೊಡೋಣ, ಮಕ್ಕಳನ್ನು ಮನುಷ್ಯರನ್ನಾಗಿ ಮಾಡೋಣ ' 16- April -2024

My body my choice - ವಿಜಯಕರ್ನಾಟಕ

Image
  ಕಲಾರಾಧನೆಯ ಕಣ್ಣಿನಿಂದ, ಸೌಂದರ್ಯದ ಆಸ್ವಾದನೆಯ ಮನಸ್ಸಿನಿಂದ ನೋಡಿದಾಗ ಈ ವಿಡಿಯೋ ಅದ್ಭುತವಾಗಿ ಮೂಡಿ ಬಂದಿದೆ. ಇದನ್ನು ತಯಾರು ಮಾಡಿದವರೇ ಸಾರ್ವಜನಿಕವಾಗಿ ಹೇಳಿಕೊಂಡಂತೆ 'ಈ ವಿಡಿಯೋ ಮೂಲಕ ಮಹಿಳೆಯರಿಗೆ ಆಯ್ಕೆಯ ಹಕ್ಕು ಇದೆ ಎಂದು ಸಮಾಜಕ್ಕೆ ತಿಳಿಸುವುದಷ್ಟೇ ನಮ್ಮ ಉದ್ದೇಶ' ಎನ್ನುವ ಮಾತೂ ಬಹಳ ಆಕರ್ಷಣೀಯವಾಗಿದೆ. ಹಲವು ಕಾರಣಗಳಿಗೆ ವಿಡಿಯೋ ಗಂಭೀರವಾಗಿ ಗಮನ ಸೆಳೆದಿದೆ. ದೀಪಿಕಾ ಪಡುಕೋಣೆಯ ಬಗ್ಗೆ ಯಂತೂ ಬೆರಳು ತೋರಲು ಆಗುವುದೇ ಇಲ್ಲ. But... ಉದ್ದೇಶವನ್ನು ಸಾರಲು ಬಳಸಿಕೊಂಡಿರುವ ಪದಗಳು ಮನಸ್ಸಿರುವ ಮನುಷ್ಯ ರನ್ನು ಒಂದಷ್ಟರಮಟ್ಟಿಗೆ ಗೊಂದಲಕ್ಕೀಡು ಮಾಡುವುದಂತೂ ನಿಜ.  SEX ಎನ್ನುವ ಸುಂದರ ಮೂರಕ್ಷರದ ಪದವು ಇಲ್ಲಿ ಬಳಕೆಯಾಗಿರದಿದ್ದರೆ ಬಹುಶಃ ಇದಕ್ಕೆ ಈ ಪರಿಯ ಪ್ರಚಾರವೂ ದಕ್ಕುತ್ತಿರಲಿಲ್ಲವೇನೋ. ಮದುವೆಗೆ ಮೊದಲಿನ ಲೈಂಗಿಕ ಸಂಬಂಧ, ಮದುವೆಯಾಚೆಗಿನ ಸೆಕ್ಸ್, ಹೆಣ್ಣು ಹೆಣ್ಣನ್ನೇ ಕಾಮಿಸುವುದು, ಬೇಕಾಬಿಟ್ಟಿ ಮೈ ಬೆಳೆಸುವುದು, ಮನಸೋಯಿಚ್ಛೆ ಬಟ್ಟೆಧರಿಸುವುದು, ಮದುವೆ ಬೇಕೋ ಬೇಡವೋ, ಹೊತ್ತುಗೊತ್ತಿಗೆ ಗೂಡು ಸೇರುವುದೋ ಬೇಡವೋ, ಪ್ರೀತಿ ಸ್ಥಾಯಿಯಾಗಿರಬೇಕೋ ಜಂಗಮವಾಗಬೇಕೋ, ಹೀಗೆ ಇನ್ನೂ ಏನೇನನ್ನೋ 99 ಹೆಂಗಸರು 'ನನ್ನ ಆಯ್ಕೆ' ಎಂದು ಖಚಿತ ಧ್ವನಿಯಲ್ಲಿ ಸಾರಿ ಹೇಳುವಾಗ, ನನಗಂತೂ ತಪ್ಪು ಎನಿಸಲಿಲ್ಲ, ನಿಜ. ಹೆಣ್ಣಿಗೂ ಆಯ್ಕೆ ಎನ್ನುವ ಹಕ್ಕು ಇದೆ ಮತ್ತು ಅದು ಇತರರಿಗೆ ಇರುವಷ್ಟೇ ಸಮಾನವಾಗಿದೆ. ಎನ್ನುವುದನ್ನ

Adoption Human Trafficking

Image
  Sonu Gowda ಅವರ ನಡೆ ಕಾನೂನು ರೀತ್ಯಾ adoption ಅಂತೂ ಅಲ್ಲ. ಮಾನವ ಕಳ್ಳಸಾಗಾಣಿಕೆಯ ಕೋನವನ್ನೂ ಪರಿಗಣಿಸಬೇಕಿರುತ್ತದೆ. Talk in BTV on 22nd March 2023

Human Trafficking

Image
 14- ಮಾರ್ಚಿ, 2022 ದೂರದರ್ಶನ ಚಂದನ ವಾಹಿನಿಯಲ್ಲಿ ಬಾಲಕಾರ್ಮಿಕತೆಗಾಗಿ ಮಕ್ಕಳ ಸಾಗಾಣಿಕೆ ಬಗ್ಗೆ ನಡೆದ ಕಾರ್ಯಕ್ರಮದ ಲಿಂಕ್ ಇಲ್ಲಿದೆ. ನೋಡಿ, ಕೇಳಿ, ಅಭಿಪ್ರಾಯ ತಿಳಿಸಿ🙏 https://youtu.be/JwoA9JjEDKI?si=USY1AfqBHYXv-v9t

Pulse polio

Image
 3 ಮಾರ್ಚ್ 2024 ಇದೆ ಪಲ್ಸ್ ಪೋಲಿಯೋ ಅಭಿಯಾನ - ಮಗು ಹುಟ್ಟಿದಾಗಿನಿಂದ ತಾಯಿ - ಮಗು ಕಾರ್ಡಿನಲ್ಲಿ ಯಾವಯಾವ ಲಸಿಕೆ ಯಾವ ತಿಂಗಳು ಕೊಡಬೇಕು ಎಂದು ಬರೆದಿರುತ್ತಾರೆ. * ಅದರಂತೆಯೇ ಪೋಲಿಯೋ ಲಸಿಕೆ ಕೊಡಿಸುತ್ತಿದ್ದರೂ * ಎರಡು ದಿನಗಳ ಹಿಂದೆಯೇ ಪೋಲಿಯೋ ಡ್ರಾಪ್ಸ್ ಹಾಕಿಸಿದ್ದರೂ * ಅದೇ ವಾರದಲ್ಲಿ ಹಾಕಿಸುವ ದಿನಾಂಕ ಇದ್ದರೂ ' ಪಲ್ಸ್ ಪೋಲಿಯೋ ' ಗೆ ಅದರದೇ ಆದ ಮಹತ್ವ ಮತ್ತು ಅವಶ್ಯಕತೆ ಇದೆ.  ಹಾಗಾಗಿ ಐದು ವರ್ಷದ ಒಳಗಿನ ಶ್ರೀಮಂತ, ಬಡವ, ಮಧ್ಯಮ ಎಲ್ಲಾ ವರ್ಗದ, ಜಾತಿಯ, ಧರ್ಮದ ಮಕ್ಕಳಿಗೂ ' ಪಲ್ಸ್ ಪೋಲಿಯೋ ' ಹಾಕಿಸಲೇ ಬೇಕು. ಇಲ್ಲಿರುವ ವೈದ್ಯರುಗಳು ಮಗುವಿಗೆ ಪೋಲಿಯೋ ಲಸಿಕೆ ಹಾಕಿಸಿದ್ದರೂ ಪಲ್ಸ್ ಪೋಲಿಯೋ ಹನಿ ಕೊಡಿಸಬೇಕಿರುವ ಅವಶ್ಯಕತೆ ಬಗ್ಗೆ ದಯವಿಟ್ಟು ಕಾರಣ ಸಹಿತ ಬರೆಯಬೇಕು...ಇದನ್ನು ಓದಿದವರು, ಇದರ ಬಗ್ಗೆ ಮಾತನಾಡಬೇಕು. ಪೋಲಿಯೋ ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಒಂದು ದೇಶ ಅದನ್ನು ನಿರ್ಮೂಲನೆ ಮಾಡಿದ್ದೇವೆ ಎಂದುಕೊಂಡು ಬೀಗುವ ಹಾಗಿಲ್ಲ. ದಯವಿಟ್ಟು ಎಲ್ಲರಿಗೂ ಹೇಳಿ...ಅವರ ಮನೆಯಲ್ಲಿ ಆ ವಯಸ್ಸಿನ ಮಕ್ಕಳು ಇಲ್ಲ ಎಂದು ಸುಮ್ಮನಿರಬೇಡಿ! #FamilyCourtಕಲಿಕೆ #ಮಕ್ಕಳಹಕ್ಕುಗಳಜಾಗೃತಿಸಪ್ತಾಹ

With Railway Police

Image
  ಬೆಂಗಳೂರು ಇನ್ನೂ ನೆಮ್ಮದಿಯಾಗಿ ಇದ್ದರೆ ಕಾರಣ ಇವರು. ಮಕ್ಕಳ ವಿಷಯದಲ್ಲಿ ಇವರಿಗೆ ಬೇಕಾದ್ದು "Three A s" ಎನ್ನುವ ಟಾನಿಕ್ (Apperence, Attitude, Approach). Railway ಪೊಲೀಸರಿಗೆ ಹೀಗೆ ಹೇಳಿ ಒಂದು ಸೆಲ್ಯೂಟ್ ಹಾಕಿ ಬಂದೆ. ಆಮೇಲೆ ಮಹಿಳಾ ಪೊಲೀಸರೊಡನೆ ಒಂದಷ್ಟು ಸಮಾಲೋಚನೆ. BOSCO Childline ಅವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೊತೆಯಲ್ಲಿ ಇದ್ದವರು Mr. Ashok-DSP, Mr. Baramappa B Mallur - Inspector. 26th February 2019 Railway Superintendent of Police office , Bengaluru

ಸಬಲೀಕರಣ ಕಾನೂನು DISHA episode -1

Image
 Episode -1 DD ಚಂದನ ಸಬಲೀಕರಣ ಕಾನೂನುಗಳ.ಪರಿಚಯ

ದಿಶ - DISHA in Doordarshan

Image
  ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯವು  ಪ್ರಜಾ ಕೇಂದ್ರಿತ ನ್ಯಾಯದಾನ ವಿಧಾನವನ್ನು ರೂಪಿಸಲು ಹಾಕಿಕೊಂಡಿರುವ ಯೋಜನೆ 'ದಿಶ' (DISHA - Designing Innovative Solutions for  Holistic Access to Justice) ಮಹಿಳೆಯರು ಮಕ್ಕಳು ಅಲ್ಪಸಂಖ್ಯಾತರು  ಲಿಂಗತ್ವ ಅಲ್ಪಸಂಖ್ಯಾತರು ಹಿರಿಯ ನಾಗರಿಕರು ಮತ್ತು ಅಂಗವಿಕಲರು ಇವರುಗಳಿಗೆ ಕಾನೂನು ಮಾಹಿತಿಯನ್ನು ಕೊಡುವ ಯೋಜನೆಯಲ್ಲಿ ಈ ಸರಣಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ.  ದೂರದರ್ಶನ ಚಂದನ ವಾಹಿನಿಯ ಈ ಕಾರ್ಯಕ್ರಮದ ಉಸ್ತುವಾರಿ ಕೆಲಸ ನನಗೆ ನೀಡಿದೆ ಎನ್ನುವುದು ದೊಡ್ಡ ಖುಷಿ. ನಾಳೆಯಿಂದ ಪ್ರತೀ ಶನಿವಾರ ಪ್ರಸಾರವಾಗಿದೆ ಸರಣಿ. ನಾಳೆಯದರ ಬಗ್ಗೆ ಇಲ್ಲಿದೆ ವಿವರ. ದಯವಿಟ್ಟು ಕಾರ್ಯಕ್ರಮ ನೋಡಿ ಮತ್ತು ನೋಡಿಸಿ 🙏

Toilets in Government Offices

Image
2022 ರಲ್ಲೂ ಸರ್ಕಾರಿ ಕಚೇರಿಗಳಲ್ಲಿ ಮನುಷ್ಯರ ಉಪಯೋಗಕ್ಕೆ ಅರ್ಹ ಇರುವ ಶೌಚಾಲಯ ಇಲ್ಲ. ಕೂಡಲೇ ಕಟ್ಟಿಸಿ, ನಿರ್ವಹಿಸಿ ಎನ್ನುವ ಸರ್ಕಾರೀ ಆದೇಶ ಹೀಗಿದೆ.  ನೀವುಗಳು ಹೋದೆಡೆಯಲ್ಲಿ ಗಮನಿಸಿ, ದನಿ ಎತ್ತಿ please🙏 #ಕಂಡಲ್ಲಿಕೇಳು  

Post Valentine's day

Image
 18th February 2024  ’ನೀನಲ್ಲ ನೀನಲ್ಲಾ ಈ ಕರಿಮಣಿ ಮಾಲೀಕ ನೀನಲ್ಲಾ. . .’ ಎನ್ನುವ ರೀಲ್ಸ್‍ಗಳು ಅಂತರ್ಜಾಲದಲ್ಲಿ ಕೊರಳು ಕೊಂಕಿಸಿ, ಬೆರಳು ತಿರುಗಿಸಿ ಹಾಡಾಗುತ್ತಿರುವ ಹೊತ್ತಿನಲ್ಲಿ ಮತ್ತೊಂದು ವ್ಯಾಲೆಂಟೈನ್ ದಿವಸ ಬಂದು, ಮುಗಿದೂ ಹೋಗಿದೆ. ಮಾರನೆಯ ದಿನ ಕಸದ ಗಾಡಿಯಲ್ಲಿ ಬಗ್ಗಿ ನೋಡಿದಾಗ ಅಷ್ಟೊಂದು ಗುಲಾಬಿ ಶವಗಳು ಕಾಣಲಿಲ್ಲ. ಪ್ರೇಮಿಗಳು ಕಡಿಮೆಯಾಗಿಬಿಟ್ಟರೇನು! ಕ್ರಿಸ್ಮಸ್ ಮತ್ತು ವ್ಯಾಲೆಂಟೈನ್ ದಿವಸಗಳಲ್ಲಿ ಅವುಗಳದ್ದೇ ಕಥೆ ಹೊತ್ತು ತಯಾರಾಗುತ್ತವೆ ಹಲವಾರು ಇಂಗ್ಲೀಷ್ ರೋಮ್ಯಾಂಟಿಕ್ ಸಿನೆಮಾಗಳು. ಅರ್ಧ ವರ್ಷ ಅವುಗಳನ್ನು ನೋಡುತ್ತಾ ನಾ ಕೂಡ ಅದೇ ಭಾವದಲ್ಲಿ ಉಕ್ಕುತ್ತಿರುತ್ತೇನೆ. ಆದರೆ ಈ ಬಾರಿ ಅಂತಹ ಸಿನೆಮಾಗಳೂ ಬಂದಿಲ್ಲ. ಪ್ರೇಮಿಗಳು ರಜೆಯ ಮೇಲೆ ಹೋಗಿ ಬಿಟ್ಟರೋ ಏನೋ! ಒಂದಾನೊಂದು ಕಾಲದಲ್ಲಿ  ವ್ಯಾಲೆಂಟೈನ್ ಎನ್ನುವ ಹೆಸರಿನ ಸಂತ ಇದ್ದನಂತೆ. ಅವನೂರಿನಲ್ಲಿ ರೋಮನ್ನರು ಆಳುತ್ತಿರುವಾಗ ಸೈನಿಕರಿಗೆ ಮದುವೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿಲ್ಲವಂತೆ. ಆದರೆ ಈ ಸಂತ ಕದ್ದು ಮುಚ್ಚಿ ಅವರಿಗೆಲ್ಲಾ ಮದುವೆ ಮಾಡಿಸುತ್ತಿದ್ದನಂತೆ. ಇದು ರೋಮಿನ ಸಾಮ್ರಾಟನಿಗೆ ಗೊತ್ತಾಗಿ ಸಂತ ವ್ಯಾಲೆಂಟೈನಿಗೆ ಮರಣದಂಡನೆ ವಿಧಿಸಿಬಿಟ್ಟನಂತೆ.  ಕೊನೆಯ ಉಸಿರು ನಿಲ್ಲುವಾಗ ಈತ ಜೈಲರ್ನ ಮಗಳಿಗೆ ’your valentine’ ಎಂದು ಬರೆದಿರುವ ಒಂದು ಚೀಟಿ ಕೊಟ್ಟನಂತೆ. ಅವತ್ತಿನಿಂದ ಸಂತನ ಹುಟ್ಟುಹಬ್ಬವಾದ 14ನೆಯ ಫೆಬ್ರವರಿಯನ್ನು ಕ್ರಿಶ್ಚಿಯನ್ನರು ಪ್ರೇಮ

Rosa Park ಕರೆಗಂಟೆ ಒತ್ತಿ ಕೌಟುಂಬಿಕ ದೌರ್ಜನ್ಯ ತಡೆಗಟ್ಟಿ

Image
  ಕರೆಗಂಟೆ ಒತ್ತಿ ಕೌಟುಂಬಿಕ ದೌರ್ಜನ್ಯ ತಡೆಗಟ್ಟಿ, ಎನ್ನುವುದು ಒಂದು ಆಂದೋಲನ . ಹೀಗೆ ಜಗಳ ಆಡುವಾಗ ಯಾರಾದರೂ ಹೋಗಿ ಅವರ ಮನೆಯ ಕರೆಗಂಟೆ ಒತ್ತಬೇಕು ಆಗ ಅದರಿಂದ ಜಗಳ ಮಾಡುವವರಿಗೆ ತಮ್ಮ ಮೇಲೆ ಇತರರ ಗಮನ ಇದೆ ಎನ್ನುವುದು ತಿಳಿಯುತ್ತದೆ ಎನ್ನುವ ಉದ್ದೇಶ. ಆದರೆ ಎಷ್ಟು ಯಶಸ್ವಿ ಆಯಿತು ಗೊತ್ತಿಲ್ಲ. ಕೌಟುಂಬಿಕ ದೌರ್ಜನ್ಯ ಒಂದು ಕ್ರಿಮಿನಲ್ ಅಪರಾಧ. ಹೆಂಡತಿ ಅಥವಾ ಗಂಡ ವಿರೋಧಿಸಿದರೂ, ನೋಡಿದವರು, ಕೇಳಿದವರು ಕೂಡ ದೂರು ನೀಡಬೇಕಿರುತ್ತದೆ. ಆದರೆ ಗಾಸಿಪ್ ಸಿಕ್ಕರೆ ಸಾಕು, ಪರರ ನೆಮ್ಮದಿ ನಮಗೆ ಯಾಕೆ ಎನ್ನುವ ಭಾವ ನಮ್ಮ ಸಮಾಜದ ಸಾಗುವಳಿಯಲ್ಲಿ ಬಿತ್ತನೆ ಆಗಿದೆ. ಹೀಗಿರುವಾಗ ನಮಗೆ ಯಾಕೆ ಬೇಕು ಎಂದು ಸುಮ್ಮನಾಗುವವರೇ ಹೆಚ್ಚು ಅದಕ್ಕೆ ದೌರ್ಜನ್ಯ ಒಂದು ಸರಪಳಿಯಂತೆ. Remember, Injustice done anywhere is a threat to justice done everywhere- Martin Luther King ಇವತ್ತು Rosa Parksಳ 109 (04 ಫೆಬ್ರವರಿ 1913) ನೆಯ ಜನ್ಮದಿನ. ಆವಳು ಹೇಳುತ್ತಾಳೆ "ನಾನು ಸ್ವಾತಂತ್ರ್ಯ ಬಯಸಿ ಹೋರಾಡುತ್ತೇನೆ ಏಕೆಂದರೆ ಉಳಿದವರು ಸ್ವತಂತ್ರರಾಗಲೀ ಎಂದು" #FamilyCourtಕಲಿಕೆ

Lord Rama in Indonesia

Image
  ಅದು ಬಾಲಿ ದ್ವೀಪ ಪ್ರವಾಸದ ಕೊನೆಯ ದಿನ. ಉಬುದ್ ಎನ್ನುವ ಸ್ಥಳದಿಂದ ಚಾಲಕ ಪುತು ಅಲಿತ್ ಅಸ್ತಿನಪುತ್ರನ ಜೊತೆ ಪಯಣ ಶುರುವಾಗಿತ್ತು I Gusti Ngurah Rai International ವಿಮಾನ ನಿಲ್ದಾಣದ ಕಡೆಗೆ. ’ಮಹಾಮೃತ್ಯುಂಜಯ ಸ್ತೋತ್ರವನ್ನು ರೆಕಾರ್ಡ್ ಮಾಡಿ ಕೊಡಿ’ ಎನ್ನುತ್ತಾ ತನ್ನ ಮೊಬೈಲ್ ಅನ್ನು ಕೈಗಿತ್ತಿದ್ದ ಅಲಿತ್. ಸಮಯ ಜಾರಿದ ದು:ಖದಲ್ಲಿ ವಿಷಾದ ಗೀತೆಯೊಂದನ್ನು ಹಾಡಿಕೊಳ್ಳುವ ಚಣ ಮೊದಲು ಅಲಿತ್ ’ಅಲ್ಲಿ ನೋಡಿ ರಾಮ’ ಎನ್ನುತ್ತಾ ವಾಹನ ದಟ್ಟಣೆಯಿದ್ದ ಒಂದು ಹೆದ್ದಾರಿಯ ಬದಿಯಲ್ಲಿ ಕಾರ್ ನಿಲ್ಲಿಸಿದ.  ಬಾಲಿಯ ರಸ್ತೆಗಳಲ್ಲಿ ಮಹಾಭಾರತ ಮತ್ತು ರಾಮಾಯಣದ ಹಲವಾರು ವ್ಯಕ್ತಿ ಚಿತ್ರಣಕ್ಕೆ ದೊಡ್ಡದೊಡ್ಡ ಮೂರ್ತ ರೂಪಕೊಟ್ಟು ಶಿಲ್ಪಗಳನ್ನು ಇಟ್ಟಿದ್ದಾರೆ. ರಸ್ತೆಗಳಲ್ಲಿ, ಸಿರಿವಂತರ ಮನೆಗಳ ಮುಂದೆ, ಅಲ್ಲಿನ ರಾಜನ ಅರಮನೆಯ ಹೆಬ್ಬಾಗಿಲಿನಲ್ಲಿ, ಮ್ಯೂಸಿಯಮ್ ಮತ್ತು ರಾಜಕೀಯ ಮುಖಂಡರುಗಳ ಕಚೇರಿಯ ಎದುರು ಹನುಮನ ಮೂರ್ತಿ ನೋಡಲು ಸಿಕ್ಕಿತ್ತು. ಅವನಿಗೆ ಅಲ್ಲಿ ಮನೆಯೊಳಗೆ ಜಾಗವಿಲ್ಲ. ಬ್ರಹ್ಮ ವಿಷ್ಣು ಮಹೇಶ್ವರರನ್ನು ದೇವರು ಎಂದು ಪ್ರಾರ್ಥಿಸುವ, ಪೂಜಿಸುವ ಇಂಡೋನೇಷಿಯಾ ಹಿಂದುಗಳು ಹನುಮ ದೇವರಲ್ಲ ದ್ವಾರಪಾಲಕ ಎನ್ನುತ್ತಲೇ ಮುಂದುವರೆದು ’ರಾಮಾಯಣ ಮಹಾಭಾರತ ನಮ್ಮ ಸಂಸ್ಕೃತಿ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಲಂಕೆಯನ್ನು ಸುಡುವಾಗಲೂ ಸೌಮ್ಯ, ಸ್ಥಿತಪ್ರಜ್ಞನಂತೆ ಇರುವ ಹನುಮನ ಮುಖಭಾವವನ್ನು ಮೈಮನಗಳಲ್ಲಿ ತುಂಬಿಕೊಂಡ ನನಗೆ ಅಲ್ಲಿನ ಹನುಮ

Solo Travel ವಿಜಯಕರ್ನಾಟದಲ್ಲಿ

Image
 ಒಬ್ಬಂಟಿ ಪ್ರಯಾಣವೇ ಅತ್ಯದ್ಭುತ ಶಿಕ್ಷಕ. ಅದರಲ್ಲೂ ಪ್ರಯಾಣವು ನಾವು ಬಯಸುವಂತಹ ಪ್ರವಾಸವಾದರೆ ಅನುಭವದ ಅಗಾಧತೆಗೆ ಮಿತಿ ಇಲ್ಲ. ಎಷ್ಟೋ ಬಾರಿ ಒಂಟಿಯಾಗಿ ಪ್ರಯಾಣ ಮಾಡಿದ್ದರೂ, ಸ್ನೇಹಿತರ ಮತ್ತು ಕುಟುಂಬದ ಜೊತೆ ಪ್ರವಾಸ ಹೋದಾಗಲೂ ಸಹ ನನಗಾಗಿ ಸ್ವಲ್ಪ ಸಮಯವನ್ನು ಎತ್ತಿಟ್ಟುಕೊಳ್ಳುತ್ತೇನೆ. ಎಲ್ಲರ ಅಭಿರುಚಿ, ಆಸಕ್ತಿಯು ಒಂದೇ ಆಗಿರುವುದಿಲ್ಲ ಹಾಗಾಗಿ ನನಗೆ ವೈಯಕ್ತಿಕವಾಗಿ ಆಸಕ್ತಿ ಇರುವ ಜಾಗಗಳನ್ನು ನೋಡಲು ವಿಷಯಗಳನ್ನು ತಿಳಿದುಕೊಳ್ಳಲು ಕುಟುಂಬದ ಜೊತೆಯೊಳಗೂ ಸೋಲೋ ಪ್ರವಾಸವೊಂದು ಇದ್ದೇ ಇರುತ್ತದೆ. ಇದಕ್ಕೆ ನಾನಿಟ್ಟ ಹೆಸರು "ಜೊತೆಯೊಳಗೂ ಒಂದು ಸೋಲೋ ಟೈಮ್" .ಇಂತಹ ಒಂದು ಪ್ರವಾಸದಲ್ಲಿ ಸಿಕ್ಕ ಮರೆಯಲಾರದ ನೆನಪು ಎಂದರೆ ಅಲೆಕ್ಸ್ ಎನ್ನುವ ಪೊಲೀಸ್ ಅಧಿಕಾರಿ. ಆತ ಇಂಗ್ಲೆಂಡಿನ ಕೇಂಬ್ರಿಡ್ಜ್ ನಲ್ಲಿ ಪೊಲೀಸ್ ಅಧಿಕಾರಿ. ಮಕ್ಕಳ ಹಕ್ಕುಗಳ ಬಗ್ಗೆ ಪಿ.ಎಚ್‌ಡಿ ಕೂಡ ಮಾಡುತ್ತಿದ್ದರು. ಎಲ್ಲಿ ಹೋದರೂ ಮಕ್ಕಳ ಮತ್ತು ಮಹಿಳೆಯರ ಬಗ್ಗೆ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಳ್ಳುವುದು ಅದರ ಬಗ್ಗೆ ಕೆಲಸ ಮಾಡಿದವರನ್ನು, ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುವುದು, ವೃತ್ತ ಪತ್ರಿಕೆಗಳನ್ನು ಓದುವುದು, ಸ್ಥಳೀಯ ಜನರನ್ನು ಮಾತನಾಡಿಸುವುದು, ಪುಸ್ತಕದಂಗಡಿಗೆ ಹೋಗುವುದು ನನ್ನ ಇಷ್ಟದ ಹವ್ಯಾಸ. ಆ ದಿನ ಲಂಡನ್ನಿನ ಬೀದಿಯಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿಟ್ಟಿದ್ದ ನವಜಾತ ಶಿಶುವಿನ ವಿಷಯವನ್ನು ಪತ್ರಿಕೆಯಲ್ಲಿ ಓದಿದ್ದೆ.

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

Image
  ಬಯಲು ಸೀಮೆಯ ಎಲ್ಲರ ಬಾಯಲ್ಲೂ ಕುಂದಾಪುರ ಹೆಸರು ಹೊರಳುವಂತೆ ಮಾಡಿದ್ದ ಚೈತ್ರ ಕುಂದಾಪುರ ಈಗ ವಂಚನೆ ಪ್ರಕರಣದಲ್ಲಿ ಆರೋಪಿ. ಆಕೆ ಅಪರಾಧಿ ಹೌದೋ ಅಲ್ಲವೋ ಎನ್ನುವುದನ್ನು ನ್ಯಾಯಾಲಯ ತೀರ್ಮಾನ ಮಾಡಲು ಸಮಯವಿದೆ. ಆದರೆ ಆಕೆಯ ಮಾತುಗಾರಿಕೆ ಮತ್ತು ಅದರ ವಿಷಯ ಎಲ್ಲವನ್ನೂ ಕಂಡ ಜನಮಾನಸ ಆಗಲೇ ಅವಳನ್ನು ಅಪರಾಧಿ ಸ್ಥಾನದಲ್ಲಿ ಅನಾಯಸವಾಗಿ ನೋಡುತ್ತಿದೆ. ವಿದ್ಯುನ್ಮಾನ ಮಾಧ್ಯಮಗಳು ಆಗಲೇ ನ್ಯಾಯಾಲಯಕ್ಕೆ ಸಡ್ಡು ಹೊಡೇದ ಪ್ರಕ್ರಿಯೆಯನ್ನು ಶುರು ಮಾಡಿವೆ. ಇವೆಲ್ಲದರ ನಡುವೆ ಚೈತ್ರ ಎನ್ನುವ ಹೆಣ್ಣು ಮಗಳು ಹಲವಾರು ಯುವತಿಯರಿಗೆ ಪಾಠದ ಹಾದಿ ತೋರಿದ್ದು ಮಾತ್ರ ಸುಳ್ಳಲ್ಲ. ಈಗ್ಗೆ ನಾಲ್ಕು ವರ್ಷಗಳ ಹಿಂದೆ ಸಮಿತಿಯ ಟೇಬಲ್ ಮುಂದೆ ಬಂದು ನಿಂತ ಯುವತಿಗೆ ಇನ್ನೂ 18 ತುಂಬಬೇಕಿತ್ತು. ಕೈ ಪೂರ್ತೀ ಸಿಂಹದ ಮುಖವುಳ್ಳ ಹನುಮಂತನ ಚಿತ್ರದ ಹಚ್ಚೆ. ಸ್ಪಷ್ಟ, ಸುಲಲಿತ ಕನ್ನಡ ಮಾತು. ಧರ್ಮ ಸಂರಕ್ಷಣೆ ಎನ್ನುವ ಅಫೀಮು ಕುಡಿಸಿದ್ದು ಅವಳ ದೊಡ್ಡಪ್ಪನ ಮಗ. ಇವಳೂ ಎಲ್ಲರ ಜೊತೆ ಊರೂರು ಸುತ್ತಿದಳು. ಹುಡುಗರ ಜೊತೆ ಜೈಕಾರ ಕೂಗುತ್ತಿದ್ದವಳಿಗೆ ಹೊತ್ತುಗೊತ್ತು ಇಲ್ಲದ ಜೀವನ ಅಭ್ಯಾಸ ಆಯಿತು. ತಂದೆ ಇದನ್ನು ವಿರೋಧಿಸಿ 10ನೆಯ ತರಗತಿಯನ್ನಾದರೂ ಓದಲಿ ಎನ್ನುವ ಆಸೆಯಿಂದ ಕೋಣೆಯೊಳಗೆ ಕೂಡಿ ಹಾಕುತ್ತಿದ್ದ. ಇವಳ ಧರ್ಮದಮಲು ಇಳಿಯಲೊಲ್ಲದು, ಅದಕ್ಕೆ ಸಾಥ್ ಕೊಡುತ್ತಿದ್ದ ಹುಡುಗರು. ಪದೇಪದೇ ಮನೆ ಬಿಟ್ಟು ಅವರೊಡನೆ ಹೋಗುತ್ತಿದ್ದಳು. ಮನೆಯವರು ಸೇರಿಸಿಕೊಳ್ಳದಾದರು. ಪ್ರೀತಿ ಮಾ