ಕುಟುಂಬಗಳ ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದ ಪೂಜಾಳಿಗೆ ಸಿಕ್ಕಿದ್ದು ಸೋಮಾರಿ ಗಂಡ. ತನ್ನ ವಿದ್ಯೆಯೂ ಪಿಯುಸಿಯಷ್ಟೇ. ಸಾಲ ತಂದು ಬಾಡಿಗೆ ಮನೆಯ ಕೋಣೆಯಲ್ಲಿಯೇ ಬ್ಯೂಟಿಪಾರ್ಲರ್ ನಡೆಸುತ್ತಾ ಸಂಸಾರ ಸಾಕುತ್ತಿದ್ದಳು. ಇನ್ನು ಮೂರು ದಿನದಲ್ಲಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಬರಬೇಕು ಎನ್ನುವ ಫೋನ್ ಕರೆ ಬಂದಾಗ, ವಿವರ ಕೇಳಿದರೂ ಸಿಗದಿದ್ದಾಗ ಕಂಗಾಲಾಗಿ ಹೋದಳು. ಶ್ರೀಮತಿ ಮನೆಯಲ್ಲಿಯೇ ಸೀರೆ ವ್ಯಾಪಾರ ಮಾಡುತ್ತಿದ್ದಳು. ಸೀರೆ ಸಪ್ಲೈ ಮಾಡುತ್ತಿದ್ದವರ ಜೊತೆ ಹಣಕಾಸಿನ ವಿಷಯಕ್ಕೆ ವಾಗ್ವಾದವಾಗಿತ್ತು. ಅದಾದೊಂದೇ ವಾರದಲ್ಲಿ ಆತನ ಊರಿನ ಪೊಲೀಸ್ ಠಾಣೆಯಿಂದ ’ನಿಮ್ಮ ಮೇಲೆ ಎಫ್‍ಐಆರ್ ಆಗಿದೆ ಠಾಣೆಗೆ ಹಾಜರಾಗಬೇಕು’ ಎಂದಿದ್ದ ಪತ್ರವೊಂದು ಕೈಸೇರಿದಾಗ ಮನೆಯವರು ಇವಳನ್ನೇ ನಿಂದಿಸಿ ಆತಂಕ ಒಡ್ಡಿದ್ದರು. ಅವರುಗಳು ವ್ಯಾಪಾರ ಮಾಡಿಕೊಂಡಿರಬಹುದು, ಯಾರಿಗೋ ಜಾಮೀನು ನಿಂತಿರಬಹುದು, ಬ್ಯಾಂಕ್ ಸಾಲಕ್ಕೆ ಶ್ಯೂರಿಟಿ ಹಾಕಿರಬಹುದು, ಜಗಳ ಬಿಡಿಸಲು, ರಾಜಿ ನ್ಯಾಯ ಮಾಡಲು ಹೋಗಿದ್ದಿರಬಹುದು, ಆಸ್ತಿ ಕೊಳ್ಳುವಿಕೆ, ಕುಟುಂಬದ ಆಸ್ತಿ ಪಾಲುದಾರಿಕೆ ವಿಷಯಗಳು, ಚೆಕ್ ಬೌನ್ಸ್ ಆಗಿರುವಾಗ, ಸಾಲವನ್ನು ಹಿಂದಿರುಗಿ ಕೇಳಿರುವಾಗ, ಸಾಲ ತೀರಿಸಲು ಆಗದೆಯಿದ್ದಾಗ, ಉದ್ಯೋಗಸ್ಥ ಸ್ಥಳದಲ್ಲಿಯೋ, ಮನೆ ಮಾಲೀಕರ ಜೊತೆಯಲ್ಲಿಯೋ ನಡೆದ ಜಗಳ, ಗಾಡಿ ಓಡಿಸುತ್ತಿರುವಾಗ ರಸ್ತೆಯಲ್ಲಡ್ಡ ಬಂದವರ ಜೊತೆಗಾದ ವಾದವೂ ಇರಬಹುದು, ಯಾವುದೇ ವಿಷಯದಲ್ಲಿ ವ್ಯಕ್ತಿಯ ಮೇಲೆ ಪೊಲೀಸ್ ಠಾ...