ಬಳಸುವ ಭಾಷೆ - words used by women
ಇವತ್ತಿನ ಆಂದೋಲನ ಪತ್ರಿಕೆಯಲ್ಲಿ ಹೀಗೆ ಬರೆದಿದ್ದೇನೆ. ದಯವಿಟ್ಟು ಓದಿ 🙏😊 ------- ಅದೊಂದು ಜಾಹೀರಾತು. ಹರೆಯದವರು ಮೋಜಿನಲ್ಲಿ ಹೊಟೆಲ್ಲೊಂದರಲ್ಲಿ ಇರುತ್ತಾರೆ. ನಡುವೆ ಯುವತಿಯೊಬ್ಬಳು ತಲೆ ನರೆತ, ಕಟ್ಟುಮಸ್ತಾದ ಗಂಡಸಿನ ಜೊತೆ ಬೈಕ್ನಲ್ಲಿ ಬಂದು ಇಳಿಯುತ್ತಾಳೆ. ಕೂಡಲೇ ಅಲ್ಲಿದ್ದ ಸ್ನೇಹಿತೆ ’ ವಾವ್ ನಿನ್ನ ತಂದೆ ಎಷ್ಟು ಹಾಟ್ ’ ಎನ್ನುತ್ತಾ ಆತನತ್ತ ಸೆಳೆತದ ನೋಟ ನೆಡುತ್ತಾಳೆ. ಸ್ವಲ್ಪ ಹೊತ್ತಿನ ನಂತರ ಈ ಯುವತಿ ಆತ ತನ್ನ ತಂದೆಯಲ್ಲವೆಂದು ಬಾಯ್ ಫ್ರೆಂಡ್ ಎಂದೂ ಹೇಳುತ್ತಾಳೆ. ತಮ್ಮ ಪಾನೀಯ ಕುಡಿದು ದಿಲ್ ಖೋಲ್ ಕೆ ಬೋಲೋ ಎನ್ನುವ ಕಂಪನಿಯ ಜಾಹೀರಾತು ಮುಗಿಯುತ್ತದೆ. ಇದರ ಗುಂಗಿನಲ್ಲೇ ಪೂರ್ತೀ ದಿನ ಕಳೆದು ಹೋಗಿದ್ದಾಗ ಒಮ್ಮೆಗೆ ಎನಿಸಿದ್ದು ಈ ಜಾಹೀರಾತಿನಲ್ಲಿ ಪಾತ್ರ ಪಲ್ಲಟ ಮಾಡಿದರೆ ಹೇಗಿರುತ್ತದೆ?! ನಡುವಯಸ್ಸಿನಲ್ಲಿಯೂ ಮೈಕಟ್ಟು ಸುಂದರವಿರುವ ಹೆಣ್ಣೊಬ್ಬಳ ಜೊತೆ ಯುವಕನೊಬ್ಬ ಬಂದಿಳಿದಾಗ ಆತನ ಸ್ನೇಹಿತ ಆಕೆಯನ್ನೇ ದಿಟ್ಟಿಸುತ್ತಾ ’ ಹೇ ನಿನ್ನ ತಾಯಿ ಎಷ್ಟು ಹಾಟ್ ’ ಎಂದರೆ ಹೇಗಿರುತ್ತದೆ? ಆಗ ಬಹುಶಃ ಅದನ್ನು ಲಿಂಗಾಧಾರಿತ ಹೇಳಿಕೆ ಎಂದು ಗುಲ್ಲೆಬ್ಬಿಸುತ್ತಾ ಮಹಿಳೆಯ ಘನತೆಗೆ ಚ್ಯುತಿ ತಂದ ಜಾಹೀರಾತು ಎಂದು ಅದನ್ನು ತಡೆಹಿಡಿಯಲು ನಾವೆಲ್ಲರೂ ಒಗ್ಗಟ್ಟಾಗಿ ಕೂಗುತ್ತಿದ್ದೆವು. ಹಾಗಾದರೆ ಗಂಡಸಿನ ಬಗ್ಗೆ ಹೆಣ್ಣು ಯಾವ ಪದಗಳನ್ನೇ ಉಪಯೋಗಿಸಬಹುದೇ? ಮಾತುಗಳಲ್ಲಿ ಆತನ ಘನತೆ ಅಡಗಿಲ್ಲವೇ ಅವಳದರ ಹಾಗೆ? ಹಿಂದೊಮ್...